ನವದೆಹಲಿ: ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಅವರಿಗೆ ದೆಹಲಿ ಪೊಲೀಸರು (Delhi Police) 13 ವರ್ಷಗಳ ಹಳೆಯ ಕೇಸ್ ಒಂದಕ್ಕೆ ಸಂಬಂಧಿಸಿದಂತೆ ನೋಟಿಸ್ ನೀಡಿದೆ.
ಈ ಕೇಸ್ನಲ್ಲಿ ಮಮತಾ ಬ್ಯಾನರ್ಜಿ ಅವರೇನು ಕ್ರಿಮಿನಲ್ ಅಥವಾ ಆರೋಪಿ ಅಲ್ಲ. ಕೇವಲ ಸಾಕ್ಷಿಯಾಗಿ ಹೇಳಿಕೆ ದಾಖಲಿಸಲು ಪೊಲೀಸರು ಈ ನೋಟಿಸ್ ನೀಡಿದ್ದಾರೆ.
2013 ರಲ್ಲಿ ಏಪ್ರಿಲ್ 9 ರಂದು ದೆಹಲಿಯಲ್ಲಿ ಟಿಎಂಸಿ (TMC) ಪಾರ್ಟಿಯಿಂದ ಒಂದು ದೊಡ್ಡ ಪ್ರತಿಭಟನೆ ನಡೆದಿತ್ತು. ಆ ಪ್ರತಿಭಟನೆ ಗಲಾಟೆಗೆ ತಿರುಗಿತ್ತು. ಆ ಸಮಯದಲ್ಲಿ ಪಶ್ಚಿಮ ಬಂಗಾಳದ ಹಣಕಾಸು ಮಿನಿಸ್ಟರ್ ಆಗಿದ್ದ ಅಮಿತ್ ಮಿತ್ರಾ ಅವರ ಮೇಲೆ ಎಸ್ಎಫ್ಐ (SFI) ಕಾರ್ಯಕರ್ತರು ದಾಳಿ ಮಾಡಿರುವ ಆರೋಪ ಕೇಳಿಬಂದಿತ್ತು. ಈ ಗಲಾಟೆ ಜೋರಾದಾಗ ಮಮತಾ ಬ್ಯಾನರ್ಜಿ ಮತ್ತು ದೆಹಲಿ ಪೊಲೀಸರ ನಡುವೆ ದೊಡ್ಡ ವಾಗ್ವಾದ ಮತ್ತು ಜಗಳ ನಡೆದಿತ್ತು. ಈ ಬಗ್ಗೆ ದೆಹಲಿಯ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಸ್ಟೇಷನ್ನಲ್ಲಿ ಕೇಸ್ ಫೈಲ್ ಆಗಿತ್ತು.ಇದನ್ನೂ ಓದಿ: ಡಾ.ರಾಜ್ ಸಂಬಂಧಿ ಮನೆಯಲ್ಲಿ ನಿಗೂಢ ಸ್ಫೋಟ – ಕಿಟಕಿ ಗಾಜುಗಳು ಪುಡಿಪುಡಿ
ಈಗ ಇದೇ ಹಳೇ ಕೇಸ್ನ ತನಿಖೆ ನಡೆಸಲು ತರಲು ದೆಹಲಿ ಪೊಲೀಸರು ಮುಂದಾಗಿದ್ದಾರೆ. ಘಟನೆ ನಡೆದಾಗ ಮಮತಾ ಬ್ಯಾನರ್ಜಿ ಅವರು ಅಲ್ಲಿಯೇ ಇದ್ದಿದ್ದರಿಂದ, ಸಾಕ್ಷಿಯಾಗಿ ಅವರ ಸ್ಟೇಟ್ಮೆಂಟ್ ರೆಕಾರ್ಡ್ ಮಾಡಿಕೊಳ್ಳಲು ಪೊಲೀಸರು ನೋಟಿಸ್ ಕೊಟ್ಟಿದ್ದಾರೆ.ಇದನ್ನೂ ಓದಿ: ದೀಪಾವಳಿ ಎಫೆಕ್ಟ್ನಿಂದ ಬೆಂಗಳೂರಲ್ಲಿ ಹೆಚ್ಚಾಯ್ತು ವಾಯು ಮಾಲಿನ್ಯ
