– ಪ್ರಾಣಹಾನಿ ಮಾಡುವ ಉದ್ದೇಶದಿಂದಲೇ ಕೃತ್ಯ; ʻಪಬ್ಲಿಕ್ ಟಿವಿʼಗೆ ಕುಟುಂಬಸ್ಥರ ಹೇಳಿಕೆ
ಚಾಮರಾಜನಗರ: ವರನಟ ಡಾ.ರಾಜ್ಕುಮಾರ್ (Dr Rajkumar) ದೂರದ ಸಂಬಂಧಿಯೊಬ್ಬರ ಮನೆಯಲ್ಲಿ ಸಂಭವಿಸಿದ ನಿಗೂಢ ಸ್ಫೋಟ (Blast) ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಯುವಕರನ್ನ ತಾಳವಾಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಂಗಳಮ್ಮ ಎಂಬವರ ಮನೆ ಮುಂದೆ ಸ್ಫೋಟ ಸಂಭವಿಸಿದೆ. ತಮಿಳುನಾಡಿನ ದೊಡ್ಡ ಗಾಜನೂರಿನಲ್ಲಿ (Gajanur) ಘಟನೆ ಸಂಭವಿಸಿದ್ದು, ಸ್ಫೋಟದ ರಭಸಕ್ಕೆ ಮನೆಯ ಕಿಟಕಿ ಗಾಜುಗಳು ಪುಡಿಪುಡಿಯಾಗಿವೆ.
ಇನ್ನೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಟುಂಬಸ್ಥರು ʻಪಬ್ಲಿಕ್ ಟಿವಿʼ ಜೊತೆಗೆ ಮಾತನಾಡಿದ್ದಾರೆ. ರಾತ್ರಿ 10.30ರ ವೇಳೆಯಲ್ಲಿ ಭಾರೀ ಶಬ್ಧ ಕೇಳಿಬಂತು. ಒಳಗಿನಿಂದ ಬಂದು ನೋಡುವಷ್ಟರಲ್ಲಿ ಮನೆ ತುಂಬಾ ಹೊಗೆ ತುಂಬಿಕೊಂಡಿತ್ತು. ಮನೆಯ ಕಿಟಿಕಿಗಾಜುಗಳೆಲ್ಲಾ ಪುಡಿಪುಡಿಯಾಗಿದ್ದವು. ಮನೆಯಿಂದ ಹೊರ ಬಂದು ನೋಡಿದಾಗ ಐವರು ಯುವಕರು ನಿಂತಿದ್ದರು. ಅವರ ವಿರುದ್ಧ ಪೊಲೀಸರಿಗೆ ತಿಳಿಸಿದ್ದೇವೆ. ಇದೀಗಾ ತಾಳವಾಡಿ ಪೊಲೀಸರು (Talavady Police) ಕರೆದೊಯ್ದು ವಿಚಾರಣೆ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.
ಇನ್ನೂ ಪಲ್ಸರ್ ಬೈಕ್ ನಿಂದ ಬಂದು ಕೃತ್ಯ ಎಸಗಿ ಪರಾರಿಯಾಗಿದ್ದಾರೆ. ಪ್ರಾಣಕ್ಕೆ ಹಾನಿ ಮಾಡುವ ಉದ್ದೇಶದಿಂದಲೇ ಕೃತ್ಯ ಎಸಗಿದ್ದಾರೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಹೊರಗೆ ನಿಂತಿದ್ದ ಯುವಕರ ವೀಡಿಯೋ ಮಾಡಿರುವ ಮನೆಯವರು, ತಾಳವಾಡಿ ಪೊಲೀಸರಿಗೆ ದೂರು ಕೊಟ್ಟಿದ್ದಾರೆ.
ದೂರನ್ನಾಧರಿಸಿ ಐವರು ಯುವಕರನ್ನು ವಶಕ್ಕೆ ಪಡೆದು ತಾಳವಾಡಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

