ಬೆಂಗಳೂರು: ರಾಜ್ಯದ ಪಡಿತರ ಚೀಟಿದಾರರಿಗೆ (Ration Card) ಇ-ಕೆವೈಸಿ (e-KYC) ಮಾಡಿಸಲು ಇಂದು ಕೊನೆಯ ದಿನವಾಗಿದೆ. ಈಗಾಗಲೇ ಎರಡು ಬಾರಿ ಗಡುವು ವಿಸ್ತರಣೆ ಮಾಡಿರುವ ಆಹಾರ ಇಲಾಖೆ, ನವೆಂಬರ್ 10ರವರೆಗೆ ಅಂತಿಮ ಅವಕಾಶ ನೀಡಿದೆ. ಇಂದೇ ಇ-ಕೆವೈಸಿ ಮಾಡಿಸದಿದ್ದರೆ ರೇಷನ್ ಕಾರ್ಡ್ ರದ್ದಾಗುವ ಸಾಧ್ಯತೆ ಇದೆ.
ನವೆಂಬರ್ 4ರಂದು ಆಹಾರ ಇಲಾಖೆಯು ಇ-ಕೆವೈಸಿ ಪ್ರಕ್ರಿಯೆಗೆ ನವೆಂಬರ್ 10ರವರೆಗೆ ಅವಧಿ ವಿಸ್ತರಣೆ ಮಾಡಿತ್ತು. ಈ ಹಿಂದೆ ನೀಡಿದ್ದ ಗಡುವಿನೊಳಗೆ ಲಕ್ಷಾಂತರ ಪಡಿತರ ಚೀಟಿದಾರರು ಇ-ಕೆವೈಸಿ ಮಾಡಿಸದ ಹಿನ್ನೆಲೆಯಲ್ಲಿ ಮತ್ತೊಮ್ಮೆ ಅವಕಾಶ ಕಲ್ಪಿಸಲಾಗಿತ್ತು. ಇದನ್ನೂ ಓದಿ: ಪ್ರೀತಿಸಿ ಮದುವೆಯಾದ ನವವಿವಾಹಿತೆ ಆತ್ಮಹತ್ಯೆ – ವರದಕ್ಷಿಣೆ ಕಿರುಕುಳ ಆರೋಪ
ರಾಜ್ಯದಲ್ಲಿ ಒಟ್ಟು 2.67 ಕೋಟಿ ಪಡಿತರ ಚೀಟಿದಾರರಿದ್ದು, ಸುಮಾರು 40 ಲಕ್ಷ ಮಂದಿ ಇನ್ನೂ ಇ-ಕೆವೈಸಿ ಮಾಡಿಸಬೇಕಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಬೆಲೆ ಅಂಗಡಿಗಳಲ್ಲಿಯೇ ಇ-ಕೆವೈಸಿ ಮಾಡಿಸಿಕೊಳ್ಳಲು ಆಹಾರ ಇಲಾಖೆ ಅವಕಾಶ ಕಲ್ಪಿಸಿತ್ತು. ಇನ್ನು ಇಂದೇ ಕೊನೆಯ ದಿನವಾಗಿದ್ದು, ಮತ್ತೆ ಗಡುವು ವಿಸ್ತರಣೆ ಮಾಡುವುದಿಲ್ಲ ಎಂದು ಆಹಾರ ಸಚಿವರು ತಿಳಿಸಿದ್ದರು. ಇದನ್ನೂ ಓದಿ: ದೀಪಾವಳಿ ಎಫೆಕ್ಟ್; ದಿಲ್ಲಿಯಲ್ಲಿ ದಟ್ಟ ಹೊಗೆ, ಮಂಜಿನ ವಾತಾವರಣ – 307ಕ್ಕೆ ಇಳಿದ ವಾಯುಗುಣಮಟ್ಟ
39.20 ಲಕ್ಷ ಪಡಿತರ ಚೀಟಿದಾರರು ಡೇಂಜರ್ ಝೋನ್ನಲ್ಲಿ:
ಇನ್ನು 39.20 ಲಕ್ಷ ರೇಷನ್ ಕಾರ್ಡ್ದಾರರು ಇನ್ನೂ ಇ-ಕೆವೈಸಿ ಮಾಡಿಸಿಲ್ಲ. ಇ-ಕೆವೈಸಿಗೆ ಇಂದೇ ಕೊನೆಯ ದಿನವಾಗಿದ್ದು, ಇ-ಕೆವೈಸಿ ಆಗದೇ ಹೋದರೆ ಕಾರ್ಡ್ ಡಿಲಿಟ್ ಆಗುವ ಸಾಧ್ಯತೆ ಇದೆ. ಹೀಗಾಗಿ ಇನ್ನೂ ಇ-ಕೆವೈಸಿ ಮಾಡಿಸದ ಪಡಿತರ ಚೀಟಿದಾರರು ತಕ್ಷಣವೇ ತಮ್ಮ ಸಮೀಪದ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ಪ್ರಕ್ರಿಯೆ ಪೂರ್ಣಗೊಳಿಸಿ. ಇದನ್ನೂ ಓದಿ: 13 ವರ್ಷ ಹಳೆಯ ಪ್ರಕರಣದಲ್ಲಿ ದೀದಿಗೆ ಪೊಲೀಸ್ ನೋಟಿಸ್
