-ಪ್ರಧಾನಿ ಮೋದಿ ಜೊತೆ ವೈಯಕ್ತಿಕ ಸಂಪರ್ಕ ಇಲ್ಲ, ಕಾರ್ಯಕ್ರಮಗಳಲ್ಲಿ ನಮಸ್ಕಾರಕ್ಕಷ್ಟೇ ಸೀಮಿತ
ನವದೆಹಲಿ: ನಾನು ಪ್ರಧಾನಿ ಆಗೋದು ರಾಹುಲ್, ಪ್ರಿಯಾಂಕಾಗೆ ಇಷ್ಟವಿರಲಿಲ್ಲ. ಹೀಗಾಗಿ ಕಾಂಗ್ರೆಸ್ (Congress) ನಾಯಕಿ ಸೋನಿಯಾ ಗಾಂಧಿ (Sonia Gandhi) ಅವರು 2004ರಲ್ಲೇ ಪ್ರಧಾನಿ ಹುದ್ದೆ ಬೇಡವೆಂದಿದ್ದರು ಎಂದು ಅವರ `ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ (Belonging: A Journey of Love) ಆತ್ಮಕಥನದಲ್ಲಿ ಮಾಹಿತಿ ಬಹಿರಂಗಗೊಳಿಸಿದ್ದಾರೆ.
2004ರ ರಾಜಕೀಯ ಬೆಳವಣಿಗೆಗಳ ಕುರಿತು ಮಾಹಿತಿ ಬಹಿರಂಗಗೊಳಿಸಿರುವ ಅವರು, 2004ರ ಲೋಕಸಭೆ ಚುನಾವಣೆಗೂ ಮುನ್ನವೇ ಪ್ರಧಾನಿ ಆಗುವುದಿಲ್ಲ ಎಂದು ಮಕ್ಕಳಿಗೆ ಸ್ಪಷ್ಟಪಡಿಸಿದ್ದೆ. ಜೊತೆಗೆ ಪ್ರಧಾನಿ ಹುದ್ದೆ ಸ್ವೀಕರಿಸಲು ಎಂದಿಗೂ ನನಗೆ ಆಸಕ್ತಿ ಇರಲಿಲ್ಲ. ಇಂದಿರಾ ಗಾಂಧಿ, ರಾಜೀವ್ ಗಾಂಧಿ ಹತ್ಯೆಯ ಹಿನ್ನೆಲೆ ನನ್ನ ಸುರಕ್ಷತೆ ಬಗ್ಗೆ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿಗೆ ಆತಂಕವಿತ್ತು. ಹೀಗಾಗಿ ಅವರಿಗೂ ನಾನು ಪ್ರಧಾನಿ ಆಗುವುದು ಇಷ್ಟವಿರಲಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ದೀಪಾವಳಿ ಎಫೆಕ್ಟ್; ದಿಲ್ಲಿಯಲ್ಲಿ ದಟ್ಟ ಹೊಗೆ, ಮಂಜಿನ ವಾತಾವರಣ – 307ಕ್ಕೆ ಇಳಿದ ವಾಯುಗುಣಮಟ್ಟ
My mind suddenly cleared itself of the last shreds of doubt. “Sonia, be true to yourself,” I could hear myself say. “You’ve always known it. Just leave it!”
From Belonging – on the decision not to become Prime Minister.
https://t.co/tEIYnDE07U
— Sonia Gandhi (@SoniaGandhi) November 10, 2026
ಯುಪಿಎ ಮೈತ್ರಿಕೂಟದ ನಾಯಕರು ಪ್ರಧಾನಿ ಹುದ್ದೆ ಸ್ವೀಕರಿಸುವಂತೆ ಒತ್ತಡ ಹೇರಿದ್ದರು. ನಾಯಕರ ಒತ್ತಡಕ್ಕೆ ಮಣಿದು ಆರಂಭದಲ್ಲಿ ಸರಿ ಎಂದಿದ್ದೆ. ಒಮ್ಮೆ ರಾಹುಲ್ ಮತ್ತು ಪ್ರಿಯಾಂಕಾ ಪೈಕಿ ಒಬ್ಬರು ಪಕ್ಷ ಗೆದ್ದರೆ ನೀವು ಪ್ರಧಾನಿ ಹುದ್ದೆಯನ್ನು ಸ್ವೀಕರಿಸುತ್ತೀರಾ ಎಂದು ಕೇಳಿದ್ದರು, ಆಗ ನಾನು ಖಂಡಿತವಾಗಿಯೂ ಇಲ್ಲ ಎಂದು ಉತ್ತರಿಸಿದ್ದೆ. ಆದರೆ ಈ ನಿರ್ಧಾರ ತೆಗೆದುಕೊಳ್ಳುವುದು ನನಗೆ ಅಷ್ಟೊಂದು ಸುಲಭಾವಾಗಿರಲಿಲ್ಲ. ಕೊನೆಗೆ ಪ್ರಧಾನಿ ಹುದ್ದೆ ನಿರಾಕರಿಸಿ ಡಾ. ಮನಮೋಹನ್ ಸಿಂಗ್ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಲಾಯಿತು ಎಂದು ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.ಇದನ್ನೂ ಓದಿ: 13 ವರ್ಷ ಹಳೆಯ ಪ್ರಕರಣದಲ್ಲಿ ದೀದಿಗೆ ಪೊಲೀಸ್ ನೋಟಿಸ್
ಇದರ ಜೊತೆಗೆ ತಮ್ಮ ಆತ್ಮಕಥನದಲ್ಲಿ ಮೋದಿ ಬಗ್ಗೆ ಪ್ರಸ್ತಾಪಿಸಿದ ಅವರು, ನನಗೆ ಪ್ರಧಾನಿ ಮೋದಿ ಅವರೊಂದಿಗೆ ಯಾವುದೇ ವೈಯಕ್ತಿಕ ಸಂಪರ್ಕ ಇಲ್ಲ. ಏನೇ ಇದ್ದರೂ ಅಧಿಕೃತ ಅಥವಾ ಅರೆ ಅಧಿಕೃತ ಕಾರ್ಯಕ್ರಮಗಳಲ್ಲಿ ಭೇಟಿಯಾದಾಗ ಔಪಚಾರಿಕ ನಮಸ್ಕಾರಕ್ಕೆ ಮಾತ್ರ ಸೀಮಿತ. ಹಿಂದೆ ಬೇರೆ ಬೇರೆ ಪಕ್ಷಗಳ ನಾಯಕರು ಪರಸ್ಪರ ಸೌಹಾರ್ದಯುತವಾಗಿ ನಡೆದುಕೊಳ್ಳುತ್ತಿದ್ದರು. ಆದರೆ ಮುಖಾಮುಖಿಯಾದಾಗ ಮೋದಿ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡುವುದಿಲ್ಲ, ದೃಷ್ಟಿ ಬೇರೆಡೆಗೆ ಹರಿಸುತ್ತಾರೆ. ಮೋದಿ ಮತ್ತು ನನ್ನ ಭಾರತದ ಕಲ್ಪನೆಗಳು ವಿಭಿನ್ನವಾಗಿವೆ. ಮೋದಿಯವರ ರಾಜಕೀಯ ಪಯಣದ ಕೆಲವು ಅಂಶಗಳೊAದಿಗೆ ಸಾಮ್ಯತೆ ಇದೆ ಎಂದು ಬರೆದುಕೊಂಡಿದ್ದಾರೆ.
ಇಂದು (ನ.10) ಸೋನಿಯಾ ಗಾಂಧಿ ಅವರ ಆತ್ಮಕಥನ `Belonging: A Journey of Love’ ಮಾರುಕಟ್ಟೆಗೆ ಬಂದಿದ್ದು, ತಮ್ಮ ಪುಸ್ತಕದಲ್ಲಿ ಇದೇ ಮೊದಲ ಬಾರಿಗೆ 2004ರ ವಿಧಾನಸಭಾ ಚುನಾವಣೆಗೂ ಮುನ್ನ ನಡೆದ ಚರ್ಚೆಯನ್ನು ಸ್ಮರಿಸಿದ್ದಾರೆ.ಇದನ್ನೂ ಓದಿ: ಯುದ್ಧ ನಿಲ್ಲಿಸಿ, ಶಾಂತಿ ಸ್ಥಾಪಿಸಿ; ಅಗತ್ಯ ನೆರವು ನೀಡಲು ಭಾರತ ಸಿದ್ಧ – ಝೆಲೆನ್ಸ್ಕಿಗೆ ಪ್ರಧಾನಿ ಮೋದಿ ಕಿವಿಮಾತು
