ಚೆನ್ನೈ: ವರನಟ ಡಾ.ರಾಜ್ಕುಮಾರ್ (Dr Rajkumar) ದೂರದ ಸಂಬಂಧಿಯೊಬ್ಬರ ಮನೆಯಲ್ಲಿ ನಿಗೂಢ ಸ್ಫೋಟ (Blast) ಸಂಭವಿಸಿದೆ.
ಮಂಗಳಮ್ಮ ಎಂಬವರ ಮನೆ ಮುಂದೆ ಸ್ಫೋಟ ಸಂಭವಿಸಿದೆ. ತಮಿಳುನಾಡಿನ ದೊಡ್ಡ ಗಾಜನೂರಿನಲ್ಲಿ ಘಟನೆ ಸಂಭವಿಸಿದ್ದು, ಸ್ಫೋಟದ ರಭಸಕ್ಕೆ ಮನೆಯ ಕಿಟಕಿ ಗಾಜುಗಳು ಪುಡಿಪುಡಿಯಾಗಿವೆ. ಇದನ್ನೂ ಓದಿ: ದೀಪಾವಳಿ ಎಫೆಕ್ಟ್ನಿಂದ ಬೆಂಗಳೂರಲ್ಲಿ ಹೆಚ್ಚಾಯ್ತು ವಾಯು ಮಾಲಿನ್ಯ
ಕಿಡಿಗೇಡಿಗಳು ಕಚ್ಚಾ ಬಾಂಬ್ ಅಥವಾ ಪಟಾಕಿ ಆಟಂಬಾಂಬ್ ಎಸೆದಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಸ್ಥಳೀಯ ತಾಳವಾಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಸ್ಥಳದಲ್ಲಿ ಬಿದ್ದಿರುವ ಅವಶೇಷ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದ್ದಾರೆ. ಇದು ಕಚ್ಚಾಬಾಂಬೋ ಅಥವಾ ಪಟಾಕಿ ಸ್ಫೋಟವೇ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ಯುದ್ಧ ನಿಲ್ಲಿಸಿ, ಶಾಂತಿ ಸ್ಥಾಪಿಸಿ; ಅಗತ್ಯ ನೆರವು ನೀಡಲು ಭಾರತ ಸಿದ್ಧ – ಝೆಲೆನ್ಸ್ಕಿಗೆ ಪ್ರಧಾನಿ ಮೋದಿ ಕಿವಿಮಾತು
