ಬೆಂಗಳೂರು: ದೀಪಾವಳಿ ಹಬ್ಬದ ಎಫೆಕ್ಟ್ನಿಂದ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru Air Palution) ವಾಯುಮಾಲಿನ್ಯ ಹೆಚ್ಚಾಗಿದೆ. ಹಬ್ಬದ ಸಂಭ್ರಮದಲ್ಲಿ ಸಿಡಿಸಿದ ಪಟಾಕಿಗಳ ಎಫೆಕ್ಟ್ನಿಂದಾಗಿ ನಗರದಲ್ಲಿ ವಾಯುಮಾಲಿನ್ಯದ ಪ್ರಮಾಣ ಶೇ.25 ರಷ್ಟು ಹೆಚ್ಚಾಗಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮಾಲಿನ್ಯದ ಏರಿಕೆಯಾಗಿದ್ದು, ನಗರದ ವಾಯು ಗುಣಮಟ್ಟ ಸೂಚ್ಯಂಕ (AQI) 186ಕ್ಕೆ ತಲುಪಿದೆ.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (KSPCB) ನೀಡಿರುವ ಮಾಹಿತಿ ಪ್ರಕಾರ, ಭಾನುವಾರ ರಾತ್ರಿ 8 ಗಂಟೆಯ ಸುಮಾರಿಗೆ ನಗರದ AQI ಮಟ್ಟ 74ರಷ್ಟಿದ್ದು. ಆದರೆ, ನಂತರ ಪಟಾಕಿಗಳನ್ನು ಹೆಚ್ಚಾಗಿ ಸಿಡಿಸಿದ್ದರಿಂದ ರಾತ್ರಿ 10 ಗಂಟೆಗೆ 85ಕ್ಕೆ, 11 ಗಂಟೆಗೆ 93 ಕ್ಕೆ ಮತ್ತು ಮಧ್ಯರಾತ್ರಿ 12 ಗಂಟೆಯ ನಂತರ 102ಕ್ಕೆ ಮಾಲಿನ್ಯದ ಮಟ್ಟ ಏರಿಕೆಯಾಗಿದೆ.
ಇಂದು ವಾಯು ಗುಣಮಟ್ಟ ಸೂಚ್ಯಂಕ 186ಕ್ಕೆ ತಲುಪಿದೆ. ಇತ್ತೀಚಿನ ವರ್ಷಗಳಲ್ಲೇ ಇದು ಅತ್ಯಂತ ಗರಿಷ್ಠ ಏರಿಕೆಯಾಗಿದೆ.
ಪರಿಸರಕ್ಕೆ ಹಾನಿಯಾಗದಂತೆ ಕೇವಲ ಹಸಿರು ಪಟಾಕಿಗಳನ್ನು ಬಳಸಲು ಸರ್ಕಾರ ಮತ್ತು ಅಧಿಕಾರಿಗಳು ಸೂಚನೆ ನೀಡಿದ್ದರು. ಆದರೆ, ಸಾರ್ವಜನಿಕರು ರಾಸಾಯನಿಕ ಮಿಶ್ರಿತ ಕೆಮಿಕಲ್ ಪಟಾಕಿಗಳನ್ನು ಸಿಡಿಸಿರುವುದು ಈ ದುಸ್ಥಿತಿಗೆ ಮುಖ್ಯ ಕಾರಣವಾಗಿದೆ.ಇದನ್ನೂ ಓದಿ: ದೇಶದಲ್ಲಿ ಶೇ.39ರಷ್ಟು ಎಥೆನಾಲ್ ಉತ್ಪಾದನೇ ಇಲ್ಲ; ಕಾಂಗ್ರೆಸ್ನವರು ಮೂರ್ಖರು: ಸಚಿವ ಜೋಶಿ ತಿರುಗೇಟು
ಪ್ರಸ್ತುತ ಬೆಂಗಳೂರಿನ ಗಾಳಿಯಲ್ಲಿ ಸೂಕ್ಷ್ಮ ಧೂಳಿನ ಕಣಗಳು (PM2.5) ಮತ್ತು ವಿಷಕಾರಿ ರಾಸಾಯನಿಕ ಹೊಗೆಯ ಪ್ರಮಾಣ ವಿಪರೀತವಾಗಿ ಹೆಚ್ಚಾಗಿದೆ.ಇದನ್ನೂ ಓದಿ: ಬೆಂಗಳೂರು ಲೇಡಿ ಜೊತೆ ಮಹಾರಾಷ್ಟ್ರ ಯುವಕನ ಲವ್ವಿಡವ್ವಿ – ಪ್ರಿಯಕರನ ಜೊತೆಗೂಡಿ ಹೆತ್ತ ಮಗನನ್ನೇ ಕೊಲೆಗೈದ ತಾಯಿ
