ಬೆಂಗಳೂರು: ಪತ್ನಿ ಸೇರಿ ಒಂದೇ ಕುಟುಂಬದ 7 ಜನರನನ್ನ (Bengaluru 7 Murder) ಕೊಂದ ನರಹಂತಕ ಶವಗಳನ್ನು ಎಲ್ಲಿ ಎಸೆದಿದ್ದ ಎಂಬ ರಹಸ್ಯ ಈಗ ಬಹಿರಂಗವಾಗಿದೆ. ಇಂದುಶೇಖರ್ ಪೊಲೀಸ್ ವಿಚಾರಣೆ ವೇಳೆ ಆರೋಪಿ 7 ಜನರನ್ನ ಹತ್ಯೆ ಮಾಡಿದ್ದಕ್ಕೆ ಯಾವುದೇ ಪಶ್ಚಾತಾಪವಿಲ್ಲ ಎಂದು ಸಮಜಾಯಿಸಿಕೊಂಡಿದ್ದಾನೆ.
ಇತ್ತ ಕೊಲೆಗೆ ಸಾಥ್ ನೀಡಿದ್ದ ಅಪ್ರಾಪ್ತ ಮಗಳು ಕೂಡ ಅದೇ ರೀತಿ ಹೇಳುತ್ತಿದ್ದಾಳೆ. ಪೊಲೀಸರ ಮುಂದೆ ಅಪ್ಪ ಮಗಳು ತಾವು ಮಾಡಿದ್ದೇ ಸರಿ ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ. ಹೆಂಡತಿಯೊಂದಿಗೆ ಜಗಳವಾಡಿದ್ದಕ್ಕೆ ಆಕೆಯ ಕುಟುಂಬಸ್ಥರನ್ನೇ ಬಲಿ ಪಡೆದ ಆರೋಪಿ, ಪೊಲೀಸರ ಮುಂದೆ ನಾನು ಮಾಡಿದ್ದರಲ್ಲಿ ಯಾವುದೇ ತಪ್ಪಿಲ್ಲ, ನಾನು ಮಾಡಿದ್ದೇ ಸರಿ ಅಂತಿದ್ದಾನೆ. ಇದನ್ನೂ ಓದಿ: ಬೇಡಕಿಹಾಳನ ಸಕ್ಕರೆ ಕಾರ್ಖಾನೆಯಿಂದ ಪ್ರತಿ ಟನ್ ಕಬ್ಬಿಗೆ 4,200 ರೂ. ಗರಿಷ್ಠ ದರ ಘೋಷಣೆ
ಇನ್ನು ಹಂತಕನ ಮಗಳಿಗೆ ಪೊಲೀಸರು, ಯಾಕಮ್ಮ ಈ ರೀತಿ ಮಾಡಿದೆ? ನಿನ್ಮ ತಾಯಿ ಸಂಬಂಧಿಕರ ಕೊಲೆಯಲ್ಲಿ ಯಾಕೆ ಭಾಗಿಯಾದೆ ಎಂದು ಪ್ರಶ್ನಿಸಿದ್ದಕ್ಕೆ, ನಾನು ಮಾಡಿದ್ದೇ ಸರಿ ಎಂದು ಹಂತಕನ ಪುತ್ರಿ ಕೂಡ ಅದೇ ವರಸೆ ತೆಗೆದಿದ್ದಾಳೆ. ಮೃತದೇಹಗಳ ಹುಡುಕಾಟ ಈಗಾಗಲೇ ಮುಗಿದಿದೆ. ಪೊಲೀಸರು ತನಿಖೆ ಮುಂದುವರಿಸಿದ್ದು, ಹಂತಕನ ಕೊಲೆ ಸಂಚಿನ ಬಗ್ಗೆ ಇನ್ನಷ್ಟು ಮಾಹಿತಿ ಕಲೆ ಹಾಕಲು ಮುಂದಾಗಿದ್ದಾರೆ.ಇದನ್ನೂ ಓದಿ: ಪಾಕಿಸ್ತಾನದ ನೂರ್ಖಾನ್ ವಾಯುನೆಲೆಯಿಂದ ಇರಾನ್ ಮೇಲೆ ದಾಳಿಗೆ ಅಮೆರಿಕ ಸ್ಕೆಚ್?
