ಚಿಕ್ಕಮಗಳೂರು: ತರೀಕೆರೆ (Tarikere) ತಾಲೂಕಿನ ಅಮೃತಾಪುರ ಗ್ರಾಮದ ತೋಟವೊಂದರ ನೀರಿನ ತೊಟ್ಟಿಯಲ್ಲಿ ಇಬ್ಬರು ಕಾರ್ಮಿಕರ ಶವ ಪತ್ತೆಯಾಗಿದೆ.
ಆನಂದ್ (48) ಹಾಗೂ ಜುಂಜಾನಾಯ್ಕ್ (65) ಮೃತರು. ಇಂದು ಬೆಳಗ್ಗೆ ಅಡಿಕೆ ಸುಲಿಯಲು ಇಬ್ಬರು ಕಾರ್ಮಿಕರು ಗ್ರಾಮದ ಮುರುಗೇಶ್ ಎಂಬವರಿಗೆ ಸೇರಿದ ಅಡಿಕೆ ತೋಟಕ್ಕೆ ತೆರಳಿದ್ದರು. ಇದಾದ ಕೆಲವೇ ಸಮಯದ ಬಳಿಕ ಇಬ್ಬರ ಶವ ತೋಟದ ಮನೆಯ ನೀರಿನ ತೊಟ್ಟಿಯಲ್ಲಿ ಪತ್ತೆಯಾಗಿದೆ. ಇದನ್ನೂ ಓದಿ: ಮದುವೆಯಾಗಿ 9 ತಿಂಗಳಲ್ಲೇ ಗೃಹಿಣಿ ಸಾವು – ಗಂಡ, ಅತ್ತೆ ವಿರುದ್ಧ ವರದಕ್ಷಿಣೆ ಕಿರುಕುಳದ ಆರೋಪ
ಆಕಸ್ಮಿಕವಾಗಿ ನೀರಿನ ತೊಟ್ಟಿಗೆ ಬಿದ್ದು ಸಾವನ್ನಪ್ಪಿದ್ದಾರಾ? ಇಲ್ಲವೇ ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಇಬ್ಬರ ಮೃತದೇಹಗಳನ್ನೂ ತರೀಕೆರೆ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ತರೀಕೆರೆ ಠಾಣೆ ಪೊಲೀಸರು ಸಾವಿನ ನಿಖರ ಕಾರಣದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ದೀಪಾವಳಿ ಸಂಭ್ರಮದ ನಡುವೆ ಅಗ್ನಿ ಅವಘಡ – ಮೂರು ಅಂಗಡಿಗಳು ಸಂಪೂರ್ಣ ಭಸ್ಮ
