ಹಾಸನ: ಕೆಲವರಿಗೆ ಸುಳ್ಳೇ ಮನೆದೇವ್ರು, ಆ ಸುಳ್ಳಿಗೆ ತಾಯಿ ದೇವಿಯೇ ಶಿಕ್ಷೆ ಕೊಡ್ಬೇಕು ಎಂದು ಹೆಚ್.ಡಿ ಕುಮಾರಸ್ವಾಮಿ (H.D Kumaraswamy) ವಿರುದ್ಧ ಸಿಎಂ ಡಿ.ಕೆ ಶಿವಕುಮಾರ್ (D.K Shivakumar) ವಾಗ್ದಾಳಿ ನಡೆಸಿದ್ದಾರೆ.
ಹಾಸನದಲ್ಲಿ (Hassan) ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಚಿವ ಶಿವಲಿಂಗೇಗೌಡ ಹಾಗೂ ಜಿಲ್ಲಾಧಿಕಾರಿ ಲತಾಕುಮಾರಿಯವರ ವಿರುದ್ಧ ಕುಮಾರಸ್ವಾಮಿಯವರು ಮಾಡಿದ್ದ ಲಂಚದ ಆರೋಪಕ್ಕೆ ಪ್ರತಿಕ್ರಿಯೆ ನೀಡಿದರು. ಈ ವೇಳೆ, ಎಲ್ಲಿಯವರೆಗೂ ನಿಮಗೆ ವೈರಿಗಳು ಹೆಚ್ಚಾಗಿ, ಬಲಿಷ್ಠವಾಗಿ ಇರ್ತಾರೋ. ಅಲ್ಲಿಯವರೆಗೆ ಉತ್ತಮವಾದ ಆಡಳಿತ ನಡೆಸಲು ಆಗುತ್ತೆ. ವೈರಿಗಳೇ ನಮ್ಮ ಸ್ನೇಹಿತರು ಎಂದು ತಿಳಿದುಕೊಳ್ಳಬೇಕು ಎಂದರು. ಇದನ್ನೂ ಓದಿ: ಸುಳ್ಳು ಆರೋಪಗಳಿಗೆ ಹೆದರಲ್ಲ, ಎಲ್ಲದಕ್ಕೂ ರೆಡಿಯಾಗಿ ಬಂದಿದ್ದೇವೆ – ಕುಮಾರಸ್ವಾಮಿ ಲಂಚದ ಆರೋಪಕ್ಕೆ ಡಿಸಿ ತಿರುಗೇಟು
ಶಿವಲಿಂಗೇಗೌಡರು (Shivalingegowda) ಬಹಳ ಹತಾಶೆಯಿಂದ ಅವರ ನೋವನ್ನು ವ್ಯಕ್ತಪಡಿಸಿದ್ರು. ಶಿವಲಿಂಗೇಗೌಡರಿಗೆ ನಾನು ಹೇಳೋದು ಇಷ್ಟೇ. ಅವರು ನಮ್ಮನ್ನು ತಿದ್ದುತ್ತಿದ್ದಾರೆ. ನಮ್ಮ ಕೆಲಸವನ್ನು ನಾವು ಮಾಡಬೇಕು. ಇಲ್ಲಿ ಡಿಸಿಯವರು ಉತ್ತಮವಾದಂತಹ ಕೆಲಸ ಮಾಡಿದ್ದಾರೆ. ಪಾಪ ಅವರು ಹೇಳಿದ್ದನ್ನ ಕೇಳೋಕೆ ಆಗಲ್ಲ ಅಂದಿದ್ದಕ್ಕೆ ಅವರನ್ನು ದೂರುತ್ತಿದ್ದಾರೆ. ನಾನು ನನ್ನ ಆಡಳಿತವನ್ನು ಗಮನಿಸುತ್ತಿದ್ದೇನೆ. ಹಾಸನದ ಜನರು ಗಮನಿಸುತ್ತಿದ್ದಾರೆ. ಚಿಂತೆ ಮಾಡೋದು ಬೇಡ, ಧರ್ಮದಿಂದ, ನ್ಯಾಯ, ನೀತಿಯಿಂದ ಪ್ರಜಾ ಸೇವೆ ಮಾಡುವಂತಹ ಅವಕಾಶವನ್ನ ನಮ್ಮ ನಾಡಿನ ತಾಯಿ ಚಾಮುಂಡೇಶ್ವರಿ, ಹಾಸನಾಂಬ, ಸಿದ್ದೇಶ್ವರ ನಮಗೆ ಕೊಟ್ಟಿದ್ದಾನೆ. ಭಕ್ತಿಯಿಂದ, ನೆಮ್ಮದಿಯಿಂದ ಧಾರ್ಮಿಕವಾಗಿ ನಮ್ಮ ಸೇವೆಯನ್ನು ಮಾಡಿಕೊಂಡು ಬರೋಣ.
ಹಾಸನದ ಮಹಾಜನತೆಗೆ ಮತದಾರರಿಗೆ ಮನವಿ ಮಾಡುತ್ತಿದ್ದೇನೆ. ಹಾಸನದಲ್ಲಿ ಒಂದು ಸೀಟ್ ಮಾತ್ರ ಗೆದ್ದಿದ್ದೇವೆ. ಆದರೂ ನಿಮಗೆ ಐದು ಗ್ಯಾರಂಟಿ ತಪ್ಪಿಸಿಲ್ಲ. ರೈತರು ತೊಂದರೆ ಆಗುತ್ತಿದೆ ಎಂದು ಹೇಳಿದ್ರು. ಏಳು ರೂಪಾಯಿ ರೈತರಿಗೆ ಒಂದು ರೂಪಾಯಿ ಸೊಸೈಟಿಗೆ ಅಂಥ ತೀರ್ಮಾನ ಮಾಡಿದ್ದೇವೆ ಎಂದರು. ಕೆಲವರಿಗೆ ಸಮಾಧಾನ ಇಲ್ಲದೆ ಇರಬಹುದು. ಗ್ರಾಹಕರಿಗೆ ತೊಂದರೆ ಆಗಿರಬಹುದು. ಶಾಸಕಾಂಗ ತೀರ್ಮಾನ ಮಾಡೋದು, ಕಾರ್ಯಾಂಗ ಕೆಲಸ ಮಾಡೋದು. ಎಲ್ಲರಿಗೂ ಅವಕಾಶ ಇದೆ, ನೀರಿಗಿಂತ ತಿಳಿಯಾಗಿ ನೋಡಬೇಕಾದ್ದು ಜ್ಞಾನದಲ್ಲಿ ಎಂದರು.
ಶಿವಲಿಂಗೇಗೌಡ್ರೇ ಸುಳ್ಳೇ ಕೆಲವರಿಗೆ ಮನೆ ದೇವರು. ಆ ಸುಳ್ಳಿಗೆ ಆ ತಾಯಿ ಹಾಸನಾಂಬೆ ಏನೇನು ಶಕ್ತಿ ಕೊಡಬೇಕು, ಶಿಕ್ಷೆ ಕೊಡಬೇಕು ಆ ತಾಯಿ ಎಲ್ಲಾ ಕೊಡ್ತಾಳೆ. ಅದನ್ನು ನೀವು ನೋಡ್ಕಂಡು, ಕೈಮುಗಿದುಕೊಂಡು ನಿಮ್ಮ ಕೆಲಸ ಮಾಡಿಕೊಂಡು ಹೋಗಿ ಎಂದರು. ಪರಿಶುಧ್ದವಾದ ಆಡಳಿತವನ್ನು ಕೊಡಬೇಕು. ಈ ಜಿಲ್ಲೆಯಲ್ಲಿ ನನಗೆ ಏಳು ಸೀಟ್ ಕೊಟ್ಟು ಶಕ್ತಿ ಕೊಡಿ. ಈ ದೇಶ ನೆನೆಸಿಕೊಳ್ಳಬೇಕು ಆ ರೀತಿ ಆಡಳಿತ ಕೊಡ್ತಿನಿ. ಯಾರು ಧರ್ಮವನ್ನು ಕಾಪಾಡ್ತರೋ, ಧರ್ಮ ಅವರನ್ನು ಕಾಪಾಡುತ್ತೆ. ನಾವು ಧರ್ಮದಿಂದ ಆಡಳಿತವನ್ನು ನಡೆಸುತ್ತೇವೆ ಎಂದರು. ಇದನ್ನೂ ಓದಿ: ಹಾಸನಾಂಬೆ ಪಾದದಾಣೆಗೂ ಒಂದೇ ಒಂದು ಪೈಸೆ ಲೋಪ ಮಾಡಿಲ್ಲ: ಹೆಚ್ಡಿಕೆ ಆರೋಪಕ್ಕೆ ಶಿವಲಿಂಗೇಗೌಡ ಬೇಸರ
