ಲಕ್ನೋ: ಮನೆಯ ಮೇಲ್ಛಾವಣಿ ಕುಸಿದು (Roof Collapse) 20 ದಿನದ ಹಸುಗೂಸು (Infant) ಸೇರಿದಂತೆ ಒಂದೇ ಕುಟುಂಬದ ಮೂವರು ಮೃತಪಟ್ಟಿರುವ ದಾರುಣ ಘಟನೆ ಉತ್ತರ ಪ್ರದೇಶದ (Uttar Pradesh) ಕಾನ್ಪುರದಲ್ಲಿ (Kanpur) ಭಾನುವಾರ ನಡೆದಿದೆ.
ಬೆಳಗ್ಗೆ 8:30ರಿಂದ 9 ಗಂಟೆಯ ನಡುವಿನ ಸಮಯದಲ್ಲಿ ಈ ಘಟನೆ ಸಂಭವಿಸಿದೆ. ಮೃತರನ್ನು 60 ವರ್ಷದ ವಿನೋದಿನಿ ಶುಕ್ಲಾ, ಅವರ ಸೊಸೆ 28 ವರ್ಷದ ಅನ್ಶಿಕಾ ಶುಕ್ಲಾ ಹಾಗೂ ಅನ್ಶಿಕಾ ಅವರ 20 ದಿನದ ಮಗು ಆರವ್ ಎಂದು ಗುರುತಿಸಲಾಗಿದೆ. ಅನ್ಶಿಕಾ ಅವರ ಪತಿ 32 ವರ್ಷದ ಹರ್ಷ್ ಶುಕ್ಲಾ ಗಾಯಗೊಂಡಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದನ್ನೂ ಓದಿ: ಭಾರತೀಯರಿಗೆ ದೀಪಾವಳಿ ಶುಭಾಶಯ ತಿಳಿಸಿದ ಇರಾನ್ ಸರ್ವೋಚ್ಚ ನಾಯಕ ಖಮೇನಿ ಪ್ರತಿನಿಧಿ
ಮನೆಯ ಅವಶೇಷಗಳನ್ನು ತೆರವುಗೊಳಿಸುವ ವೇಳೆ ತಾಯಿ ಅನ್ಶಿಕಾ ತನ್ನ ನವಜಾತ ಮಗುವನ್ನು ರಕ್ಷಿಸಲು ತನ್ನ ದೇಹವನ್ನೇ ಕವಚದಂತೆ ಅಡ್ಡವಿಟ್ಟಿರುವುದು ಬೆಳಕಿಗೆ ಬಂದಿದೆ. ಈ ದೃಶ್ಯ ಸ್ಥಳೀಯರನ್ನು ಕಣ್ಣೀರಾಗಿಸಿದೆ. ಇದನ್ನೂ ಓದಿ: India vs Pakistan U19 Asia Cup: ಅರ್ಜುನ್ ರಜಪೂತ್ ಶತಕದಾಟ ವ್ಯರ್ಥ – ಭಾರತದ ವಿರುದ್ಧ ಪಾಕ್ಗೆ 3 ವಿಕೆಟ್ಗಳ ಜಯ
ಪೊಲೀಸರ ಪ್ರಕಾರ, ಮನೆಯ ಒಂದು ಕೋಣೆಯಲ್ಲಿ ಕುಟುಂಬದ ನಾಲ್ವರು ಇದ್ದಾಗ ಏಕಾಏಕಿ ಮೇಲ್ಛಾವಣಿ ಕುಸಿದಿದೆ. ಆ ಸಮಯದಲ್ಲಿ ಅನ್ಶಿಕಾ ಮಗುವಿಗೆ ಹಾಲುಣಿಸುತ್ತಿದ್ದರು. ಮತ್ತೊಂದೆಡೆ ಹರ್ಷ್ ಮತ್ತು ಅವರ ತಾಯಿ ವಿನೋದಿನಿ ಮಾತನಾಡುತ್ತಿದ್ದರು ಎಂದು ಸಂಬಂಧಿಕರು ತಿಳಿಸಿದ್ದಾರೆ. ಇದನ್ನೂ ಓದಿ: ಹಾಸನಾಂಬೆ ಪಾದದಾಣೆಗೂ ಒಂದೇ ಒಂದು ಪೈಸೆ ಲೋಪ ಮಾಡಿಲ್ಲ: ಹೆಚ್ಡಿಕೆ ಆರೋಪಕ್ಕೆ ಶಿವಲಿಂಗೇಗೌಡ ಬೇಸರ
ಮೇಲ್ಛಾವಣಿ ಕುಸಿದ ಭಾರೀ ಶಬ್ದ ಕೇಳುತ್ತಿದ್ದಂತೆ ಕುಟುಂಬದ ಇತರ ಸದಸ್ಯರು ಹಾಗೂ ನೆರೆಹೊರೆಯವರು ಸ್ಥಳಕ್ಕೆ ಧಾವಿಸಿದ್ದಾರೆ. ಅವಶೇಷಗಳನ್ನು ತೆರವುಗೊಳಿಸಿ ಅದರಡಿ ಸಿಲುಕಿದ್ದ ನಾಲ್ವರನ್ನು ಹೊರತೆಗೆದು ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿದೆ. ಆದರೆ, ವೈದ್ಯರು ವಿನೋದಿನಿ, ಅನ್ಶಿಕಾ ಮತ್ತು ಹಸುಗೂಸು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಇದನ್ನೂ ಓದಿ: ಸರ್ಕಾರ ಹಾಲಿನ ದರ 4-5 ರೂ. ಇಳಿಸಬೇಕು: ವಿಜಯೇಂದ್ರ
ಕುಸಿದ ಮನೆ ಸುಮಾರು 35 ವರ್ಷ ಹಳೆಯದಾಗಿದ್ದು, ಒಂದೇ ಅಂತಸ್ತಿನ ಕಟ್ಟಡವಾಗಿದೆ. ಕುಟುಂಬದ ನಾಲ್ವರೂ ಎಂದಿನಂತೆ ಬೆಳಗಿನ ಕೆಲಸಗಳಲ್ಲಿ ತೊಡಗಿದ್ದಾಗ ಮನೆಯ ಮೇಲ್ಛಾವಣಿಯ ಒಂದು ಭಾಗ ಕುಸಿದಿದೆ ಎಂದು ಸಂಬಂಧಿಕರು ಹೇಳಿದ್ದಾರೆ. ಇದನ್ನೂ ಓದಿ: ಎಥೆನಾಲ್ ಗೊಂದಲಕ್ಕೆ ಕೇಂದ್ರ ಸರ್ಕಾರವೇ ಕಾರಣ: ತನಿಖೆಗೆ ಎಂ.ಬಿ.ಪಾಟೀಲ್ ಆಗ್ರಹ
ಮೇಲ್ಛಾವಣಿಯ ಆಧಾರ ಕಂಬದ ಒಂದು ಭಾಗ ವಿನೋದಿನಿ ಅವರ ಮೇಲೆ ಬಿದ್ದಿದ್ದರೆ, ಅನ್ಶಿಕಾ ಮತ್ತು ಮಗು ಅವಶೇಷಗಳಡಿ ಸಿಲುಕಿಕೊಂಡಿದ್ದರು. ಹರ್ಷ್ ಅವರಿಗೂ ಗಾಯಗಳಾಗಿದ್ದರೂ ಅವರು ಬದುಕುಳಿದಿದ್ದಾರೆ. ಇದನ್ನೂ ಓದಿ: 94 ದಿನಗಳಿಂದ ಮಗುವಿಗೆ ಸೂಕ್ತ ಚಿಕಿತ್ಸೆ ನೀಡಲಾಗ್ತಿದೆ, ಮಗು ಕಂಡೀಷನ್ನಲ್ಲಿ ಸುಧಾರಣೆ ಕಂಡಿದೆ: ಕ್ಲೌಡ್ನೈನ್ ಆಸ್ಪತ್ರೆ ಸ್ಪಷ್ಟನೆ
ಈ ಕುರಿತು ಮಾಹಿತಿ ನೀಡಿರುವ ಡಿಸಿಪಿ ಎಸ್.ಎಂ. ಖಾಸಿಂ ಅಬಿದಿ, ಪ್ರಾಥಮಿಕ ತನಿಖೆಯ ಪ್ರಕಾರ ಮನೆಯ ಮೇಲ್ಛಾವಣಿಯಲ್ಲಿ ನೀರು ಸೋರಿಕೆಯಾಗುತ್ತಿದ್ದ ಕಾರಣ ಅದರ ಬಲ ಕುಂದಿರಬಹುದು. ಸಂಗ್ರಹವಾದ ನೀರಿನ ಭಾರವೂ ಹೆಚ್ಚಾಗಿ ಮೇಲ್ಛಾವಣಿ ಕುಸಿಯಲು ಕಾರಣವಾಗಿರಬಹುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸುಳ್ಳು ಆರೋಪಗಳಿಗೆ ಹೆದರಲ್ಲ, ಎಲ್ಲದಕ್ಕೂ ರೆಡಿಯಾಗಿ ಬಂದಿದ್ದೇವೆ – ಕುಮಾರಸ್ವಾಮಿ ಲಂಚದ ಆರೋಪಕ್ಕೆ ಡಿಸಿ ತಿರುಗೇಟು
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸುವ ಪ್ರಕ್ರಿಯೆ ನಡೆಯುತ್ತಿದೆ. ಸ್ಥಳದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳ ತಂಡವೂ ಪರಿಶೀಲನೆ ನಡೆಸಿದೆ. ಅಗತ್ಯ ಕಾನೂನು ಪ್ರಕ್ರಿಯೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರಂಭದಲ್ಲಿ ಕುಟುಂಬಸ್ಥರು ಮೃತದೇಹಗಳನ್ನು ಆಸ್ಪತ್ರೆಯಿಂದ ಮನೆಗೆ ಕೊಂಡೊಯ್ದು ಮರಣೋತ್ತರ ಪರೀಕ್ಷೆಗೆ ಒಪ್ಪಿಗೆ ನೀಡಲು ನಿರಾಕರಿಸಿದ್ದರು. ಬಳಿಕ ಪೊಲೀಸರು ಮನವೊಲಿಸಿ ಪರೀಕ್ಷೆ ನಡೆಸಲು ಒಪ್ಪಿಸಿದ್ದಾರೆ. ಇದನ್ನೂ ಓದಿ: ಚಾಮುಂಡಿ ಬೆಟ್ಟದಲ್ಲಿ ಮತ್ತೊಂದು ಮೃತದೇಹ ಪತ್ತೆ – ಕೆಂಪು ಬಣ್ಣದ ಬೆಡ್ಶೀಟ್ನಲ್ಲಿ ಸುತ್ತಿ ಬಿಸಾಡಿದ್ದ ಹಂತಕ
