ಒಮಾನ್: ಇಲ್ಲಿ ನಡೆದ ಭಾರತ ಹಾಗೂ ಪಾಕಿಸ್ತಾನ ನಡುವಿನ ಅಂಡರ್ 19 ವರ್ಡ್ಕಪ್ ಪಂದ್ಯದಲ್ಲಿ ಪಾಕ್ ತಂಡ 3 ವಿಕೆಟ್ಗಳ ಜಯಗಳಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಬೀಸಿದ ಭಾರತ ತಂಡ 46.3 ಓವರ್ಗಳಲ್ಲಿ ಎಲ್ಲಾ ವಿಕೆಟ್ಗಳನ್ನು ಕಳೆದುಕೊಂಡು 208 ರನ್ ಗಳಿಸಿತ್ತು. ಈ ಗುರಿಯನ್ನು ಬೆನ್ನಟ್ಟಿದ ಪಾಕ್ ತಂಡ 48.1 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 209 ರನ್ ಗಳಿಸಿ ಜಯ ಸಾಧಿಸಿದೆ.
ಭಾರತದ ಪರ ಅರ್ಜುನ್ ರಜಪೂತ್ 85 ಎಸೆತಗಳಲ್ಲಿ 5 ಸಿಕ್ಸರ್, 11 ಬೌಂಡರಿ ಸಿಡಿಸಿ 107 ರನ್ ಗಳಿಸಿದರು. ಆರ್ಯವಿರ್ ಸೆವಾಗ್ 40 ಎಸೆತಗಳಲ್ಲಿ 22 ಹಾಗೂ ಕಾವ್ಯ ಪರೇಶ್ ಪಟೇಲ್ 45 ಎಸೆತಗಳಲ್ಲಿ 23 ರನ್ ಗಳಿಸಿದರು.
ಪಾಕ್ ಪರ ಹಮ್ಜಾ ಜಹೂರ್ 108 ಎಸೆತಗಳಲ್ಲಿ 10 ಬೌಂಡರಿ, 3 ಸಿಕ್ಸರ್ ಸಿಡಿಸಿ 100 ರನ್ ಕಲೆಹಾಕಿದರು. ಹಸೇನ್ ಅಬ್ಬಾಸ್ 67 ರನ್ ಗಳಿಸಿದರು.
