ನವದೆಹಲಿ: ದೆಹಲಿಯ (New Delhi) ಚಾವರಿ ಬಜಾರ್ನಲ್ಲಿ (Chawri Bazar) ಮೂರು ಅಂತಸ್ತಿನ ಕಟ್ಟಡ ಕುಸಿತ (Building Collapse) ಪ್ರಕರಣ ಸಂಬಂಧ ಅವಶೇಷಗಳಡಿ ಮತ್ತೊಂದು ಮೃತದೇಹ ಪತ್ತೆಯಾಗಿದ್ದು, ಸಾವಿನ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ.
ರಕ್ಷಣಾ ಕಾರ್ಯಾಚರಣೆ ವೇಳೆ ಅವಶೇಷಗಳ ಅಡಿಯಿಂದ ಮತ್ತೊಂದು ಮೃತದೇಹವನ್ನು ರಕ್ಷಣಾ ಸಿಬ್ಬಂದಿ ಹೊರತೆಗೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತರನ್ನು ಬಿಹಾರದ ದರ್ಭಾಂಗ ಜಿಲ್ಲೆಯ ಜಕೌಲಿ ನಿವಾಸಿ ಲುಚುಮನ್ ಮುಖಿಯಾ (66) ಎಂದು ಗುರುತಿಸಲಾಗಿದೆ. ಮೃತದೇಹಗಳನ್ನು ಮುಂದಿನ ಪ್ರಕ್ರಿಯೆಗಳಿಗಾಗಿ ಲೋಕ ನಾಯಕ ಜಯಪ್ರಕಾಶ್ ಆಸ್ಪತ್ರೆಗೆ ರವಾನಿಸಲಾಗಿದೆ. ಇದನ್ನೂ ಓದಿ: `ಭಾರತ ರತ್ನ’ ಎಲ್.ಕೆ ಅಡ್ವಾಣಿಗೆ ಜನ್ಮಶತಮಾನೋತ್ಸವ ಸಂಭ್ರಮ – ರಾಜಕೀಯ ಗುರುವಿಗೆ ಪ್ರಧಾನಿ ಮೋದಿ ಅಕ್ಷರ ನಮನ
ಗುರುವಾರ (ನ.5) ಬೆಳಗ್ಗೆ ಸುಮಾರು 10:30ರ ಸುಮಾರಿಗೆ, ಹಳೆಯ ದೆಹಲಿಯ ಚಾವರಿ ಬಜಾರ್ ಪ್ರದೇಶದಲ್ಲಿರುವ ಅಜ್ಮೇರಿ ಗೇಟ್ ಬಳಿಯ ಗಲಿ ಶೀಶ್ ಮಹಲ್, ಗಲಿ ಶೆಹತಾರಾದಲ್ಲಿ ನಿರ್ಮಾಣ ಹಂತದಲ್ಲಿದ್ದ ಮೂರು ಅಂತಸ್ತಿನ ಕಟ್ಟಡ ಕುಸಿದು ಬಿದ್ದಿತ್ತು. ಆಗ ಇಬ್ಬರು ಮೃತಪಟ್ಟಿದ್ದರು. ಬಳಿಕ ಅವಶೇಷಗಳ ಅಡಿ ಸಿಲುಕಿದ್ದವರ ರಕ್ಷಣೆಗೆ 30 ರಕ್ಷಣಾ ಸಿಬ್ಬಂದಿಯ ತಂಡ ಕಾರ್ಯಾಚರಣೆ ನಡೆಸಿತ್ತು. ಇದನ್ನೂ ಓದಿ: ಪೋಲೆಂಡ್ನಲ್ಲಿ ಶೂಟೌಟ್; ಮನಬಂದಂತೆ ಗುಂಡು ಹಾರಿಸಿ 6 ಜನರನ್ನು ಬಲಿ ಪಡೆದ ಯುವಕ
ಈ ಘಟನೆಯ ಬಳಿಕ ಮೂವರು ಗುತ್ತಿಗೆದಾರರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಗುತ್ತಿಗೆದಾರರನ್ನು ಸಿರಾಜ್, ತಾಜುದ್ದೀನ್ ಮತ್ತು ಫುರ್ಕಾನ್ ಎಂದು ಗುರುತಿಸಲಾಗಿದೆ. ಇವರು ಹರಿಯಾಣದ ಫರಿದಾಬಾದ್ ಜಿಲ್ಲೆಯ ದೌಜ್ ತಹಸಿಲ್ನ ಸಿರೋಹಿ ಗ್ರಾಮದ ನಿವಾಸಿಗಳಾಗಿದ್ದಾರೆ. ಬಂಧಿತರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 105ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಸರ್ಕಾರದಿಂದ ಮಹತ್ವದ ನಿರ್ಧಾರ – ಸರ್ಕಾರಿ ಯೋಜನೆಗಳಡಿ ವಿತರಿಸುವ ವಾಹನಗಳಿಗೆ ಹಳದಿ-ಕೆಂಪು ಬಣ್ಣ ಕಡ್ಡಾಯ!
ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಮನೋಜ್ ಕುಮಾರ್ ಈ ಬಗ್ಗೆ ಮಾತನಾಡಿ, ಕಟ್ಟಡ ಕುಸಿಯಲು ಸಣ್ಣ ನಿವೇಶನದಲ್ಲಿ ನಾಲ್ಕು ಅಂತಸ್ತಿನ ಕಟ್ಟಡವನ್ನು ನಿರ್ಮಿಸಿರುವುದು ಕಾರಣವಾಗಿರಬಹುದು. ಕಾಂಕ್ರೀಟ್ ಗಟ್ಟಿಯಾಗುವ ಮೊದಲೇ ತಾತ್ಕಾಲಿಕ ಆಧಾರಗಳನ್ನು ತೆಗೆದಿರಬಹುದು ಎಂದು ಹೇಳಿದ್ದರು. ಇದನ್ನೂ ಓದಿ: ಬಿಜೆಪಿ ಕಚೇರಿ, ವಿಜಯೇಂದ್ರ ಮನೆಗೆ ಪೋಸ್ಟರ್ ಅಂಟಿಸಿದ ʻಕೈʼ ಕಾರ್ಯಕರ್ತರು; ಶಿವಮೊಗ್ಗಕ್ಕೂ ಕಾಲಿಟ್ಟ ಪೋಸ್ಟರ್ ವಾರ್!
ಈ ಪ್ರದೇಶವು ಕಿರಿದಾಗಿದ್ದು, ಹೆಚ್ಚು ಜನನಿಬಿಡವಾಗಿರುವುದರಿಂದ ರಕ್ಷಣಾ ತಂಡಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿತ್ತು. ಈ ಕಟ್ಟಡವು ಕೇವಲ ಮೂರು ಅಡಿ ಅಗಲವಿರುವ, ಡೆಡ್-ಎಂಡ್ ಗಲ್ಲಿಯೊಂದರ ತುದಿಯಲ್ಲಿದೆ. ಇದರಿಂದಾಗಿ ವಾಹನಗಳು, ರಕ್ಷಣಾ ತಂಡದ ಭಾರೀ ಯಂತ್ರೋಪಕರಣಗಳು ಅಲ್ಲಿಗೆ ತಲುಪಲು ಸಾಧ್ಯವಾಗಿರಲಿಲ್ಲ. ಇನ್ನು ಶನಿವಾರ ಕಟ್ಟಡದ ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: Bengaluru Murder Horror | ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಲ್ಲಿ ಮತ್ತೆರಡು ಮೃತದೇಹ ಪತ್ತೆ
