ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸಲ್ಲಿ (Renukaswamy Case) ಜೈಲು ಸೇರಿರುವ ನಟ ದರ್ಶನ್ಗೆ (Darshan) ಮತ್ತೆ ಬೆನ್ನು ನೋವು ಕಾಣಿಸಿಕೊಂಡಿದ್ದು, ಜೈಲಲ್ಲೇ ಫಿಸಿಯೋಥೆರಪಿ (Physiotherapy) ನೀಡಲು ಕೋರ್ಟ್ (Court) ಅನುಮತಿ ನೀಡಿದೆ.
ಚಳಿಗಾಲ ಶುರುವಾಗುತ್ತಿದ್ದಂತೆ ಬೆನ್ನು ನೋವು ಜಾಸ್ತಿ ಆಗಿದ್ದು, ಸೂಕ್ತ ಚಿಕಿತ್ಸೆ ಕೊಡಿಸುವಂತೆ ಜೈಲಾಧಿಕಾರಿಗಳಿಗೆ ದರ್ಶನ್ ಮನವಿ ಮಾಡಿದ್ದರು. ಆದರೆ, ನ್ಯಾಯಾಲಯ ಅನುಮತಿ ನೀಡದ ಹೊರತು ನಾವು ಯಾವುದೇ ಚಿಕಿತ್ಸೆ ಕೊಡಿಸೋಕೆ ಸಾಧ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದರು. ನಂತರ, ದರ್ಶನ್ 59ನೇ ಸೆಷನ್ಸ್ ಕೋರ್ಟ್ಗೆ ಸಲ್ಲಿಸಿ ಚಿಕಿತ್ಸೆಗೆ ಮನವಿ ಮಾಡಿದ್ದರು. ಇದನ್ನೂ ಓದಿ: ವಿಜಯಲಕ್ಷ್ಮಿ–ಧನ್ವೀರ್ ಜಟಾಪಟಿ ಕೇಸ್ – ನ.12ಕ್ಕೆ ವಿಚಾರಣೆಗೆ ಹಾಜರಾಗುವಂತೆ ಧನ್ವೀರ್ಗೆ ಸೂಚನೆ
ಈ ಅರ್ಜಿಯ ವಿಚಾರಣೆ ವೇಳೆ ದರ್ಶನ್ ಪರ ವಕೀಲ ಹಷ್ಮತ್ ಪಾಷ, ದರ್ಶನ್ ಅವರಿಗೆ ಕೆಲವು ವರ್ಷಗಳಿಂದಲೂ ಬೆನ್ನು ನೋವಿನ ಸಮಸ್ಯೆ ಇದೆ. ಕಳೆದ ಬಾರಿ ಅರೆಸ್ಟ್ ಆಗಿದ್ದ ವೇಳೆಯೂ ಬೆನ್ನು ನೋವಿಗೆ ಫಿಜಿಯೋಥೆರಪಿ ಚಿಕಿತ್ಸೆ ಪಡೆದಿದ್ದರು. ಹಾಗಾಗಿ ಈ ಬಾರಿಯೂ ಜೈಲಿನಲ್ಲೆ ಫಿಜಿಯೋಗೆ ಅವಕಾಶ ನೀಡಬೇಕು ಎಂದು ವಾದಿಸಿದರು.
ದರ್ಶನ್ ಪರ ವಕೀಲರ ವಾದಕ್ಕೆ ಪ್ರತಿ ವಾದಿಸಿದ ಎಸ್ಪಿಪಿ, ಕಳೆದ ಬಾರಿ ಜಾಮೀನು ಪಡೆಯುವ ವೇಳೆಯೂ ಇದೇ ಪ್ರಮುಖ ಕಾರಣ ನೀಡಿ ಜಾಮೀನು ಪಡೆದಿದ್ದರು. ಆಪರೇಷನ್ ಮಾಡಿಸಿಕೊಳ್ಳುವುದಾಗಿ ಹೇಳಿ ಜಾಮೀನು ಪಡೆದು ನಂತರ ಯಾವುದೇ ಆಪರೇಷನ್ ಮಾಡಿಸಿಕೊಂಡಿರಲಿಲ್ಲ. ಮತ್ತೊಮ್ಮೆ ಚಿಕಿತ್ಸೆ ಬಗ್ಗೆ ಕೇಳ್ತಿದ್ದಾರೆ ಪರಿಶೀಲನೆ ನಡೆಸುವಂತೆ ಮನವಿ ಮಾಡಿದರು.
ವಾದ ಪ್ರತಿವಾದ ಆಲಿಸಿದ ನ್ಯಾಯಾಲಯ ದರ್ಶನ್ಗೆ ಪರಪ್ಪನ ಅಗ್ರಹಾರ ಜೈಲಿನಲ್ಲೇ ಫಿಜಿಯೋಥೆರಪಿ ನೀಡಲು ಅವಕಾಶ ನೀಡಿ ಆದೇಶ ಹೊರಡಿಸಿದೆ. ಇದನ್ನೂ ಓದಿ: ದರ್ಶನ್ಗಾಗಿ ಹರಕೆ ಹೊತ್ತ ವಿಜಯಲಕ್ಷ್ಮಿ- ತಿಪಟೂರಿನ ಚೌಲಿಹಳ್ಳಿ ಕರಿಕಲ್ಲಮ್ಮ ದೇವಾಲಯಕ್ಕೆ ಭೇಟಿ
