-1 ಲಕ್ಷ ಬಾಂಡ್ ಸೇರಿ ಹಲವು ಷರತ್ತು ವಿಧಿಸಿದ ಸೆಷನ್ಸ್ ಕೋರ್ಟ್
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Case) ಮಾಫಿ ಸಾಕ್ಷಿಯಾಗಿರುವ ಪ್ರದೋಷ್ಗೆ ತಮ್ಮ ತಂದೆಯ ತಿಥಿ ಕಾರ್ಯದಲ್ಲಿ ಭಾಗಿಯಾಗಲು 5 ದಿನಗಳ ಕಾಲ ಹೈಕೋರ್ಟ್ (High Court) ಅನುಮತಿ ನೀಡಿದೆ.
ಇಂದಿನಿಂದ 5 ದಿನಗಳ ಕಾಲ ಅನುಮತಿ ನೀಡಿದ್ದು, ಬೆಳಿಗ್ಗೆ 8 ರಿಂದ ಸಂಜೆ 6ರವರೆಗೆ ಸಮಯ ನೀಡಿದೆ. ಈ ಹಿನ್ನೆಲೆ ಪ್ರದೋಷ್ ಪರ ವಕೀಲರು 59ನೇ ಸೆಷನ್ಸ್ ಕೋರ್ಟ್ಗೆ ಹೈಕೋರ್ಟ್ ಅನುಮತಿ ಆದೇಶ ಸಲ್ಲಿಕೆ ಮಾಡಿದ್ದಾರೆ. ಜೊತೆಗೆ ಸೆಷನ್ಸ್ ಕೋರ್ಟ್ 1 ಲಕ್ಷ ರೂ. ಬಾಂಡ್ ಸೇರಿ ಹಲವು ಷರತ್ತು ವಿಧಿಸಿದೆ. ಇದನ್ನೂ ಓದಿ: ಫಿಸಿಯೋಥೆರಪಿಗೆ ಮತ್ತೆ ದರ್ಶನ್ ಕೋರ್ಟ್ ಮೊರೆ
ಪ್ರಕರಣಕ್ಕೆ ಸಂಬಂಧಿಸಿದಂತೆ ಚಾರ್ಜ್ಶೀಟ್ ಇರುವ ವ್ಯಕ್ತಿಗಳ ಜೊತೆ ಸಂಪರ್ಕ ಮಾಡಬಾರದು. ಪ್ರಕರಣದ ಸಾಕ್ಷಿಗಳ ಜೊತೆ ಸಂರ್ಪಕ ಮಾಡಬಾರದು. ಪ್ರಕರಣ ಸಂಬಂಧ ಅಧಿಕಾರಿಗಳ ಜೊತೆ ಸಾಕ್ಷಿ ಪ್ರದೋಷ್ ಮಾತನಾಡಬಾರದು. ತಿಥಿ ಕಾರ್ಯದಲ್ಲಿ ಭಾಗವಹಿಸುವ ಕುಟುಂಬಸ್ಥರ ಮಾಹಿತಿ ಕೋರ್ಟ್ಗೆ ನೀಡಬೇಕು. ಪ್ರತಿದಿನ 6 ಗಂಟೆ ಒಳಗೆ ಪ್ರದೋಷ್ ಜೈಲಿನ ಒಳಗೆ ವಾಪಸ್ಸು ಬರಬೇಕು. ಕಾರ್ಯದಲ್ಲಿ ಭಾಗವಹಿಸುವ ಅಡುಗೆ ಭಟ್ಟರು, ಪೂರೋಹಿತರ ಮಾಹಿತಿ ನೀಡಬೇಕು ಎಂದು ಷರತ್ತು ವಿಧಿಸಿದೆ.
