-ಮುಖ ಗುರುತು ಸಿಗದಂತೆ ಕಲ್ಲು ಎತ್ತಿ ಹಾಕಿ ವಿಕೃತಿ
ಬೆಂಗಳೂರು: ಒಬ್ಬರಲ್ಲ, ಇಬ್ಬರಲ್ಲ.. ಬರೋಬ್ಬರಿ 7 ಜನರನ್ನು ಕೊಲೆ ಮಾಡಿದ ಥ್ರಿಲ್ಲಿಂಗ್ ಕೇಸ್ನಲ್ಲಿ ಕ್ಷಣಕ್ಷಣಕ್ಕೂ ರೋಚಕ ಅಂಶಗಳು ಹೊರಬೀಳುತ್ತಿವೆ. ಕೇವಲ 15 ದಿನದಲ್ಲಿ ಹಂತಕ ಏಳು ಜನರನ್ನು ಕೊಲೆ ಮಾಡಿರುವ ಅಂಶ ಈಗ ಬೆಳಕಿಗೆ ಬಂದಿದೆ.
ಪೊಲೀಸರ ವಿಚಾರಣೆ ವೇಳೆ ಆರೋಪಿ ಇಂದುಶೇಖರ್ ಅ.16ರಿಂದ ಅ.31ರವರೆಗೆ ಹಂತ ಹಂತವಾಗಿ ಏಳು ಜನರನ್ನು ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಜೊತೆಗೆ ತಾನು ನಡೆಸಿರುವ ನರಮೇಧಕ್ಕೆ ಮಗಳು ಹರ್ಷಿಣಿ ಕೂಡ ಸಾಥ್ ನೀಡಿದ್ದಳು ಎನ್ನುವುದಾಗಿಯೂ ಒಪ್ಪಿಕೊಂಡಿದ್ದಾನೆ. ಇದನ್ನೂ ಓದಿ: ನಿಮ್ಮಮ್ಮನ ನಡತೆ ಸರಿಯಿಲ್ಲ ಅಂತಾ ಮಗಳ ಮನಸ್ಸಿನಲ್ಲಿ ವಿಷಬೀಜ ಬಿತ್ತಿದ್ದ ತಂದೆ – ಪತ್ನಿ ವಿರುದ್ಧ ನಿರಂತರ ಬ್ರೈನ್ವಾಷ್!
ಒಬ್ಬೊಬ್ಬರನ್ನೇ ಕೊಲೆ ಮಾಡುತ್ತಾ, ಏಳು ಜನರನ್ನು ಕೊಂದ ಬಳಿಕವೂ ಹಂತನಿಗೆ ಸಿಟ್ಟು ಕಡಿಮೆಯಾಗದೇ ಮೃತದೇಹಗಳಿದ್ದ ಮೇಲೆ ಕಲ್ಲು ಎತ್ತಾಕಿ ವಿಕೃತಿ ಮೆರೆದಿದ್ದ. ಅಲ್ಲದೇ ಗುರುತು ಸಿಗದಂತೆ ಮುಖಗಳನ್ನು ನಜ್ಜುಗುಜ್ಜು ಮಾಡಿದ್ದ. ಬಳಿಕ ಕೈ, ಕಾಲು ಕಟ್ಟಿ ಚೀಲದಲ್ಲಿ ತುಂಬಿ ಮೃತದೇಹಗಳನ್ನ ಬಿಸಾಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸದ್ಯ ಪೊಲೀಸರು ಈ ಪ್ರಕರಣದಲ್ಲಿ ಎ1 ಆರೋಪಿಯಾಗಿ ಅರ್ಜುನ್ @ ಇಂದುಶೇಖರ್ ಹಾಗೂ ಎ2 ಆರೋಪಿಯಾಗಿ ಮಗಳು ಹರ್ಷಿಣಿಯನ್ನು ಪರಿಗಣಿಸಿದ್ದಾರೆ.ಇದನ್ನೂ ಓದಿ: ಬೆಂಗ್ಳೂರನ್ನೇ ಬೆಚ್ಚಿಬೀಳಿಸಿದ ಡೆಡ್ಲಿ ಮರ್ಡರ್ – ನಂದಿಬೆಟ್ಟದ ಕಾಡಿನಲ್ಲಿ ಬಾಲಕನ ಶವ ಪತ್ತೆ; ತನಿಖೆ ಚುರುಕು
