ಹಾಸನ: ಹಾಸನಾಂಬೆ (Hasanamba Devi) ದೇವಿ ದರ್ಶನಕ್ಕೆ ಎಂಟನೇ ದಿನ ಭಕ್ತ ಮಹಾಸಾಗರವೇ ಹರಿದುಬಂದಿದ್ದು, ರಾತ್ರಿ ಸುರಿದ ಮಳೆಗೆ ಪರದಾಡುವಂತಾಗಿದೆ.
ಬುಧವಾರ (ನ.5) ತಡರಾತ್ರಿ ಹಾಸನ (Hassan) ಜಿಲ್ಲೆಯ ವಿವಿಧೆಡೆ ಮಿಂಚು, ಗುಡುಗು, ಸಿಡಿಲಿನ ಸಹಿತ ಧಾರಾಕಾರ ಮಳೆ ಸುರಿದಿದೆ. ಭಾರಿ ಮಳೆಯಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರಿಂದ, ಹಾಸನಾಂಬ ದೇವಿ ದರ್ಶನಕ್ಕೆ ಬಂದಿದ್ದ ಭಕ್ತರು ಪರದಾಡುವಂತಾಯಿತು. ಜನರೇಟರ್ ವ್ಯವಸ್ಥೆಯೂ ಇಲ್ಲದ ಕಾರಣ ಕೆಲಕಾಲ ಕತ್ತಲಿನಲ್ಲಿಯೇ ಭಕ್ತರು ಕಾಲ ಕಳೆಯಬೇಕಾಯಿತು. ಇದನ್ನೂ ಓದಿ: ಪತ್ನಿ ಜೊತೆಗೆ ಹಾಸನಾಂಬೆ ದರ್ಶನ ಪಡೆದ ರೇವಣ್ಣ – ಸಚಿವ ಪುಟ್ಟರಂಗಶೆಟ್ಟಿ ಕಾರು ತಡೆದ ಸಿಬ್ಬಂದಿ
ಇಂದು (ನ.6) ಹಾಸನಾಂಬ ದೇವಿ ದರ್ಶನಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ, ಸಚಿವರಾದ ಶಿವರಾಜ ಎಸ್.ತಂಗಡಗಿ, ನರೇಂದ್ರಸ್ವಾಮಿ, ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸೇರಿ ವಿವಿಧ ಕ್ಷೇತ್ರದ ಗಣ್ಯರು ಆಗಮಿಸಲಿದ್ದಾರೆ.
ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿರುವ ಭಕ್ತರಿಂದಾಗಿ ಹಾಸನಾಂಬೆ ದೇವಿ ದರ್ಶನ ವಿಳಂಬವಾಗುತ್ತಿದ್ದು, ಇಂದು ಮಧ್ಯಾಹ್ನ 2 ಗಂಟೆಯವರೆಗೆ ನಿರಂತರ ದರ್ಶನವಿರಲಿದೆ. ಧರ್ಮ ದರ್ಶನದ ಸಾಲಿನ ಭಕ್ತರಿಗೆ 9, 10 ಗಂಟೆ ನಂತರ ದೇವಿ ದರ್ಶನ ಸಿಗುತ್ತಿದೆ.
ಇನ್ನೂ ಬೆಳಿಗ್ಗೆಯೇ ಬಂದು ಜಿಲ್ಲಾ ಉಸ್ತುವಾರಿ ಹಾಗೂ ಅಬಕಾರಿ ಸಚಿವ ಕೆ.ಎಂ.ಶಿವಲಿಂಗೇಗೌಡ ಅವರು ಕುಟುಂಬ ಸಮೇತರಾಗಿ, ಆಗಮಿಸಿ ಹಾಸನಾಂಬೆ ದೇವಿ ದರ್ಶನ ಪಡೆದರು. ದೇವಾಲಯದ ಒಳಗೆ ಹೋಗುವ ಮುನ್ನ, ಮಳೆಯಿಂದ ಏನಾದರೂ ಭಕ್ತರಿಗೆ ತೊಂದರೆ ಆಯ್ತಾ ಎಂದು ಪೊಲೀಸರನ್ನು ವಿಚಾರಿಸಿದರು. ಇದಕ್ಕೆ ಪೊಲೀಸರು ಯಾವುದೇ ತೊಂದರೆ ಆಗಿಲ್ಲ ಎಂದು ತಿಳಿಸಿದರು.ಇದನ್ನೂ ಓದಿ: ಡಿವೋರ್ಸ್ ವದಂತಿಗೆ ಡೋಂಟ್ಕೇರ್; ದೀಪಾವಳಿ ಪಾರ್ಟಿಯಲ್ಲಿ ಒಟ್ಟಿಗೆ ಕಾಣಿಸಿಕೊಂಡ ಅಭಿಷೇಕ್- ಐಶ್ವರ್ಯಾ
