ಬೆಂಗಳೂರು: ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಸದಸ್ಯನೆಂದು ಹೇಳಿಕೊಂಡು ಬಾಲಿವುಡ್ನ 50ಕ್ಕೂ ಹೆಚ್ಚು ನಟ-ನಟಿಯರಿಗೆ ಬೆದರಿಕೆ ಹಾಕುತ್ತಿದ್ದ ಆರೋಪಿಯನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ. ಬಿಹಾರದ ದರ್ಭಾಂಗ ಮೂಲದ ಐಐಟಿ ಪದವೀಧರ ವೈಭವ್ ಮಿಶ್ರಾ ಬಂಧಿತ ಆರೋಪಿ. ನಕಲಿ ಇನ್ಸ್ಟಾಗ್ರಾಂ ಖಾತೆ ಸೃಷ್ಟಿಸಿ, ಬೆದರಿಕೆ ಆಡಿಯೋ ಸಂದೇಶಗಳನ್ನು ಕಳುಹಿಸುತ್ತಿದ್ದ ಎನ್ನಲಾಗಿದೆ.
ನಟರಾದ ತುಷಾರ್ ಕಪೂರ್ ಮತ್ತು ಆಯುಷ್ಮಾನ್ ಖುರಾನಾ ಸೇರಿದಂತೆ ಹಲವು ಸಿನಿಮಾ ಸೆಲೆಬ್ರಿಟಿಗಳಿಗೆ ಆರೋಪಿ ಬೆದರಿಕೆ ಸಂದೇಶ ಕಳುಹಿಸಿದ್ದಾನೆ. ತುಷಾರ್ ಕಪೂರ್ಗೆ 5 ಕೋಟಿ ರೂ. ನೀಡುವಂತೆ ಬೇಡಿಕೆ ಇಟ್ಟಿದ್ದ ಎಂಬ ಆರೋಪವೂ ಇದೆ.
ಅ.18ರಂದು ನಟ ಟೈಗರ್ ಶ್ರಾಫ್ ಅವರ ಮನೆ ಬಳಿ ಗುಂಡಿನ ದಾಳಿ ನಡೆದ ಬಳಿಕ ಈ ಬೆದರಿಕೆ ಸಂದೇಶಗಳನ್ನು ಕಳುಹಿಸುವ ಕೃತ್ಯ ಆರಂಭವಾಗಿತ್ತು ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನ ಸದಸ್ಯನೆಂದು ಹೇಳಿಕೊಂಡು ಆರೋಪಿ ಸೆಲೆಬ್ರಿಟಿಗಳನ್ನು ಬೆದರಿಸುತ್ತಿದ್ದ.ಇದನ್ನೂ ಓದಿ: ಪತ್ನಿ ಜೊತೆಗೆ ಹಾಸನಾಂಬೆ ದರ್ಶನ ಪಡೆದ ರೇವಣ್ಣ – ಸಚಿವ ಪುಟ್ಟರಂಗಶೆಟ್ಟಿ ಕಾರು ತಡೆದ ಸಿಬ್ಬಂದಿ
ಬೆದರಿಕೆ ಆಡಿಯೋವನ್ನು ಗ್ಯಾಂಗ್ನ ಹ್ಯಾರಿ ಬಾಕ್ಸರ್ ಧ್ವನಿ ಮಾದರಿಯೊಂದಿಗೆ ಹೋಲಿಕೆ ಮಾಡಿದಾಗ ಯಾವುದೇ ಸಾಮ್ಯತೆ ಕಂಡುಬಂದಿಲ್ಲ. ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ವೈಭವ್ ಮಿಶ್ರಾಗೂ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ಗೂ ಯಾವುದೇ ಸಂಪರ್ಕವಿಲ್ಲ. ನಿರುದ್ಯೋಗಿಯಾಗಿದ್ದ ಆರೋಪಿ ಈ ಕೃತ್ಯ ಎಸಗಿದ್ದಾನೆ ಎಂಬ ಮಾಹಿತಿ ತನಿಖೆಯಲ್ಲಿ ಹೊರಬಂದಿದೆ.
ಬೆಂಗಳೂರಿನಲ್ಲಿ ಬಂಧಿತನಾದ ವೈಭವ್ ಮಿಶ್ರಾನನ್ನು ಮುಂಬೈಗೆ ಕರೆತಂದು ವಿಚಾರಣೆ ನಡೆಸಲಾಗುತ್ತಿದೆ. ಮುಂಬೈ ಕ್ರೈಂ ಬ್ರಾಂಚ್ ಅಧಿಕಾರಿಗಳು ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.ಇದನ್ನೂ ಓದಿ: ಡಿವೋರ್ಸ್ ವದಂತಿಗೆ ಡೋಂಟ್ಕೇರ್; ದೀಪಾವಳಿ ಪಾರ್ಟಿಯಲ್ಲಿ ಒಟ್ಟಿಗೆ ಕಾಣಿಸಿಕೊಂಡ ಅಭಿಷೇಕ್- ಐಶ್ವರ್ಯಾ
