ರಾಯಚೂರು: ಮಂತ್ರಾಲಯದಲ್ಲಿ (Mantralaya) ಮಹತ್ವಾಕಾಂಕ್ಷೆಯ ಮಾನವ ನಿರ್ಮಿತ ರಾಘವ ಸರೋವರ (Raghava Sarovara) ಯೋಜನೆಗೆ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿ (Subudhendra Teertha Swamiji) ಭೂಮಿ ಪೂಜೆ ನೆರವೇರಿಸಿದರು.
ಮಂತ್ರಾಲಯದ ಸುಮಾರು 25 ಎಕರೆ ಪ್ರದೇಶದಲ್ಲಿ ಯೋಜನೆಯನ್ನ ರೂಪಿಸಲಾಗಿದೆ. ಪ್ರಕೃತಿ, ಪರಿಸರ ಜಾಗೃತಿ ಮತ್ತು ಸಾರ್ವಜನಿಕ ಯೋಗಕ್ಷೇಮವನ್ನು ಉತ್ತೇಜಿಸುವ ಸೌಲಭ್ಯಗಳ ಜೊತೆಗೆ ಹಚ್ಚ ಹಸಿರಿನಿಂದ ಸುತ್ತುವರಿದ ಸುಂದರವಾದ ಮಾನವ ನಿರ್ಮಿತ ಸರೋವರವನ್ನು ರಚಿಸುವ ಗುರಿಯನ್ನು ಹೊಂದಲಾಗಿದೆ. ಇದನ್ನೂಓದಿ: 2 ಕೋಟಿ ಲಂಚ ಕೇಳಿದ ಆರೋಪ ಕೇಸ್ – ಜ್ಞಾನೇಶ್ ಕುಮಾರ್ ವಿರುದ್ಧ ತನಿಖೆಗೆ ಕೇರಳ ಸರ್ಕಾರ ಆದೇಶ
ಮಂತ್ರಾಲಯ ರಾಯರ ಮಠ ಹಾಗೂ ಖಾಸಗಿಯವರ ಸಹಭಾಗಿತ್ವದಲ್ಲಿ ರಾಘವ ಸರೋವರ ನಿರ್ಮಾಣವಾಗುತ್ತಿದೆ. ಮಂತ್ರಾಲಯಕ್ಕೆ ಬರುವ ಭಕ್ತರಿಗೆ ಹೊಸ ಅನುಭೂತಿಯನ್ನ ನೀಡಲು ಸರೋವರ ನಿರ್ಮಿಸಲಾಗುತ್ತಿದೆ. ನಟ ಮದನ್ ಪಾಟೀಲ್, ಸಂಸದ ಡಾ.ಸಿ.ಎಸ್.ಮಂಜುನಾಥ್ ಸೇರಿ ಹಲವರು ಭಾಗವಹಿಸಿದ್ದರು.ರಾಘವ ಸರೋವರ ಭೂಮಿ ಪೂಜಾ ಸಮಾರಂಭ ಬಳಿಕ ಸುಬುಧೇಂದ್ರ ತೀರ್ಥ ಸ್ವಾಮಿಗಳು ಭಕ್ತರಿಗೆ ಆಶೀರ್ವಚನ ನೀಡಿದರು. ಇದನ್ನೂಓದಿ: ಚಿಂತಾಮಣಿಯಲ್ಲಿ 3 ತಿಂಗಳ ಗರ್ಭಿಣಿ ಆತ್ಮಹತ್ಯೆ – ಪತಿ ಬಂಧನ

