ನಟಿ ಶ್ರೀಲೀಲಾ ಇದೀಗ ಅಧಿಕೃತವಾಗಿ ತಮಿಳು ಚಿತ್ರರಂಗ ಪ್ರವೇಶಿಸಿದ್ದಾರೆ. ತಮಿಳಿನ ದೊಡ್ಡ ಪ್ರಾಜೆಕ್ಟ್ಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಅದು ತಲಾ ಅಜಿತ್ ಕುಮಾರ್ ಚಿತ್ರ ಅನ್ನೋದೇ ವಿಶೇಷ. ಅಜಿತ್ ನಟನೆಯ ಬಹು ನಿರೀಕ್ಷಿತ `ಡೇರ್ ಡೆವಿಲ್’ ಪ್ರಾಜೆಕ್ಟ್ ಸೆಟ್ಟೇರಿದ್ದು ಈ ಚಿತ್ರಕ್ಕೆ ಶ್ರೀಲೀಲಾ ನಾಯಕಿ.
ಕನ್ನಡ, ತೆಲುಗು, ಹಿಂದಿ ಸಿನಿಮಾಗಳಲ್ಲಿ ಅಭಿನಯಿಸಿದ್ದರೂ ಶ್ರೀಲೀಲಾಗೆ ಯಾವ ಇಂಡಸ್ಟ್ರಿಯಲ್ಲೂ ಗಟ್ಟಿ ಭದ್ರತೆ ದೊರಕಲಿಲ್ಲ. ಸ್ಟಾರ್ ನಟರ ಜೊತೆ ಅಭಿನಯಿಸಿದ್ದರೂ ಬಿಗ್ ಹಿಟ್ ಚಿತ್ರ ಕೊಟ್ಟಿಲ್ಲ. ಈ ಹಿಂದೆ ಪರಾಶಕ್ತಿ ಚಿತ್ರದ ಮೂಲಕ ಕಾಲಿವುಡ್ ಪ್ರವೇಶಿಸಿದ್ದರು. ಆದರೂ ಆ ಚಿತ್ರ ಹೀಗ್ ಬಂದು ಹಾಗೆ ಮಾಯವಾದ ಚಿತ್ರದ ಸಾಲಿಗೆ ಸೇರಿತ್ತು. ಆದರೆ ಇದೀಗ ಅತಿದೊಡ್ಡ ಪ್ರಾಜೆಕ್ಟ್ನಲ್ಲಿ ನಾಯಕಿಯಾಗುವ ಮೂಲಕ ಮತ್ತೆ ಮುನ್ನೆಲೆಗೆ ಬಂದಿದ್ದಾರೆ. ಈ ಮೂಲಕ ಶ್ರೀಲೀಲಾ ಭರ್ಜರಿ ಆಫರ್ ಗಿಟ್ಟಿಸಿಕೊಂಡಿದ್ದಾರೆ.
ಸೋಮವಾರ ಚೆನೈನಲ್ಲಿ ಈ ಚಿತ್ರಕ್ಕೆ ಚಾಲನೆ ಸಿಕ್ಕಿದ್ದು, ಸಮಾರಂಭದಲ್ಲಿ ಶ್ರೀಲೀಲಾ ಇದ್ರು. ಇನ್ನು ಎಂದಿನಂತೆ ಅಜಿತ್ ಈ ಕಾರ್ಯಕ್ರಮಕ್ಕೆ ಬರಲಿಲ್ಲ. ಅವರ ಬದಲಿಗೆ ಅಜತ್ ಪತ್ನಿ ಶಾಲಿನಿ ಹಾಜರಿದ್ರು. ಆಧಿಕ್ ರವಿಚಂದ್ರನ್ ನಿರ್ದೇಶನ ಈ ಚಿತ್ರಕ್ಕೆ ತಲಾ ಅಜಿತ್ ಜೊತೆ ಶ್ರೀಲೀಲಾ ಯಾವ ರೀತಿ ಪಾತ್ರದಲ್ಲಿ ಕಾಣಿಸ್ಕೊಳ್ಳಲಿದ್ದಾರೆ ಎಂಬ ಕುತೂಹಲವಿದೆ. ಕನ್ನಡ ,ಬಾಲಿವುಡ್, ಟಾಲಿವುಡ್ನಲ್ಲಿ ಅದೃಷ್ಟ ಪರೀಕ್ಷೆಯ ಬಳಿಕ ಇದೀಗ ಶ್ರೀಲೀಲಾ ಕಾಲಿವುಡ್ನಲ್ಲಿ ಎಂಗೇಜ್ ಆಗಲು ಹೊರಟಿದ್ದಾರೆ.
