ಬೆಂಗಳೂರು: ಆಂಧ್ರಪ್ರದೇಶದ (Andhra Pradesh) ರಾಫ್ತಾಡುವಿನಲ್ಲಿ ನಡೆದ ಕೊಲೆ ಯತ್ನದಿಂದ ತೀವ್ರ ಗಾಯಗೊಂಡಿದ್ದ ಶಾಲಾ ಬಾಲಕಿಗೆ ಬೆಂಗಳೂರಿನ ಹೆಚ್ಎಎಲ್ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದ್ದು, ಆಕೆಯ ಆರೋಗ್ಯದಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿದೆ.
ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಬಾಲಕಿ ಇದೀಗ ಕಣ್ಣುಗಳನ್ನು ತೆರೆದಿದ್ದು, ತನ್ನ ತಂದೆ-ತಾಯಿಯನ್ನು ಗುರುತಿಸಿ ಮಾತನಾಡಿಸಿದ್ದಾಳೆ. ಈಗಾಗಲೇ ನೇತ್ರ ತಜ್ಞರು ಹಾಗೂ ನರ ಶಸ್ತ್ರಚಿಕಿತ್ಸಕರು ಆಕೆಯನ್ನು ತಪಾಸಣೆ ನಡೆಸಿದ್ದು, ಯಾವುದೇ ಗಂಭೀರ ನರಸಂಬಂಧಿ ಸಮಸ್ಯೆಗಳು ಪತ್ತೆಯಾಗಿಲ್ಲ ಎಂಬುದು ಸಮಾಧಾನಕರ ವಿಷಯ. ಈ ವಾರದ ಕೊನೆಯಲ್ಲಿ ಆಕೆಯ ಕಣ್ಣುಗಳ ವಿವರವಾದ ಪರೀಕ್ಷೆ ಹಾಗೂ ಮೂಳೆ ಸಂಬಂಧಿತ ಶಸ್ತ್ರಚಿಕಿತ್ಸೆಗಳನ್ನು ನಡೆಸಲು ವೈದ್ಯರ ತಂಡ ನಿರ್ಧರಿಸಿದೆ.ಇದನ್ನೂ ಓದಿ: ಪ್ರೀತಿ ನಿರಾಕರಿಸಿದ್ದಕ್ಕೆ ಶಾಲೆಗೆ ನುಗ್ಗಿ ಮರ ಕಡಿಯುವ ಯಂತ್ರದಿಂದ ದಾಳಿ – 10ನೇ ತರಗತಿ ವಿದ್ಯಾರ್ಥಿನಿ ಸಾವು
ಬಾಲಕಿಯ ಸ್ಥಿತಿಯ ಬಗ್ಗೆ ಆಂಧ್ರಪ್ರದೇಶದ ಮುಖ್ಯಮಂತ್ರಿಗಳು ನಿರಂತರ ಮಾಹಿತಿ ಪಡೆಯುತ್ತಿದ್ದರೆ, ಸಚಿವ ನಾರಾ ಲೋಕೇಶ್ ಪ್ರತಿದಿನ ವೈದ್ಯರನ್ನು ಸಂಪರ್ಕಿಸಿ ಆರೈಕೆಯ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಪ್ರಸ್ತುತ ವೈದ್ಯರು ಬಾಲಕಿಯ ಆರೋಗ್ಯದ ಮೇಲೆ ತೀವ್ರ ನಿಗಾ ವಹಿಸಿದ್ದಾರೆ.ಇದನ್ನೂ ಓದಿ: ಪ್ರೀತಿ ನಿರಾಕರಸಿದ್ದಕ್ಕೆ ಭೀಕರ ದಾಳಿ – ಆರೋಪಿ ಕಾಲಿಗೆ ಗುಂಡೇಟು, ಬೆಂಗಳೂರು ಆಸ್ಪತ್ರೆಯಲ್ಲಿ ಬಾಲಕಿಗೆ ಚಿಕಿತ್ಸೆ
