ಮಸ್ಕತ್: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆಯೇ ಒಮನ್ ಕರಾವಳಿಯಲ್ಲಿ (Oman Coast) ಭಾರತದ ಧ್ವಜ ಹೊಂದಿದ್ದ ಸರಕು ಸಾಗಣೆ ಹಡಗಿನ (Cargo Ship) ಮೇಲೆ ದಾಳಿ ನಡೆದಿದೆ. ಈ ಘಟನೆಯಲ್ಲಿ ಗುಜರಾತ್ ಮೂಲದ ಓರ್ವ ಭಾರತೀಯ ನಾವಿಕ (Indian Sailor) ಮೃತಪಟ್ಟಿದ್ದು, ಉಳಿದ 13 ಮಂದಿ ನಾವಿಕರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ.
`ಅಲ್ ಜುಸುಫಿ’ ( Al Jusufi) ಹೆಸರಿನ ಹಡಗು ಒಮನ್ ಕರಾವಳಿಯಲ್ಲಿ ಸಾಗುತ್ತಿದ್ದಾಗ ವೈಮಾನಿಕ ವಸ್ತುವೊಂದು ಹಡಗಿನ ಮೇಲೆ ದಾಳಿ ನಡೆಸಿದೆ. ಈ ಹಡಗಿನಲ್ಲಿ ಒಟ್ಟು 14 ಮಂದಿ ಭಾರತೀಯ ನಾವಿಕರಿದ್ದರು ಎಂದು ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗ ಸಚಿವ ಸರ್ಬಾನಂದ ಸೋನೋವಾಲ್ ತಿಳಿಸಿದ್ದಾರೆ. ಇದನ್ನೂ ಓದಿ: ಬಸ್ ದರ ಏರಿಕೆ | ಪ್ರತಿ ಸ್ಟೇಜ್ಗೆ 10 ರೂ. ನಿಗದಿ – ಗುರುವಾರದಿಂದಲೇ ಪರಿಷ್ಕೃತ ಟಿಕೆಟ್ ದರ ಜಾರಿ ಸಾಧ್ಯತೆ
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಮಾಹಿತಿ ಹಂಚಿಕೊಂಡಿರುವ ಸಚಿವರು, ನವೆಂಬರ್ 2ರಂದು ಈ ದಾಳಿ ನಡೆದಿದೆ ಎಂದು ಹೇಳಿದ್ದಾರೆ. ಒಮನ್ ಕರಾವಳಿ ರಕ್ಷಣಾ ಪಡೆ 13 ಮಂದಿ ಸಿಬ್ಬಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಿ ರಕ್ಷಿಸಿದೆ. ಆದರೆ, ಗುಜರಾತ್ ಮೂಲದ ಗಂಧರ್ ನಹೀಮ್ ಅಜೀಜ್ ಎಂಬ ನಾವಿಕ ಗಂಭೀರ ಗಾಯಗಳಿಂದ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಲ್ಯಾಂಡಿಂಗ್ ವೇಳೆ ಎರಡು ಹೆಲಿಕಾಪ್ಟರ್ ಮುಖಾಮುಖಿ ಡಿಕ್ಕಿ – ಭಾರತೀಯ ಪ್ರಜೆ ಸಾವು
ನಾವಿಕನ ಸಾವಿಗೆ ಸಚಿವ ಸರ್ಬಾನಂದ ಸೋನೋವಾಲ್ ತೀವ್ರ ಸಂತಾಪ ಸೂಚಿಸಿದ್ದಾರೆ. ಮೃತ ನಾವಿಕನ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿರುವ ಅವರು, ಸಂಕಷ್ಟದಲ್ಲಿರುವ ಉಳಿದ ಸಿಬ್ಬಂದಿಗೆ ಅಗತ್ಯ ನೆರವು ಒದಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮುರಸು ಎಫೆಕ್ಟ್ – ರಾಜ್ಯದಲ್ಲಿ ಮುಂದಿನ 3 ದಿನ ವ್ಯಾಪಕ ಮಳೆ, ಬೆಂಗ್ಳೂರಿಗೆ ಯೆಲ್ಲೋ ಅಲರ್ಟ್
ಈ ಸಂಬಂಧ ಹಡಗು ಸಚಿವಾಲಯ ಮತ್ತು ಒಮನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಸ್ಥಳೀಯ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿವೆ. ರಕ್ಷಿಸಲ್ಪಟ್ಟ 13 ಮಂದಿ ನಾವಿಕರಿಗೆ ತಕ್ಷಣದ ನೆರವು ಒದಗಿಸುವುದು ಹಾಗೂ ಅವರನ್ನು ಶೀಘ್ರವೇ ಭಾರತಕ್ಕೆ ವಾಪಸ್ ಕರೆತರುವ ವ್ಯವಸ್ಥೆ ಮಾಡಲಾಗುತ್ತಿದೆ. ಮೃತಪಟ್ಟ ನಾವಿಕನ ಮೃತದೇಹವನ್ನು ಭಾರತಕ್ಕೆ ತರುವ ಪ್ರಕ್ರಿಯೆಯನ್ನೂ ಕೈಗೊಳ್ಳಲಾಗುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ. ಇದನ್ನೂ ಓದಿ: ಹಾಸನಾಂಬ ದೇವಿ ಸಾರ್ವಜನಿಕ ದರ್ಶನಕ್ಕೆ ಇಂದು ಐದನೇ ದಿನ – ಸಾವಿರಾರು ಸಂಖ್ಯೆಯಲ್ಲಿ ಆಗಮಿಸುತ್ತಿರುವ ಭಕ್ತಗಣ
ಇನ್ನು ಹಡಗಿನ ಮೇಲೆ ದಾಳಿ ನಡೆಸಿದವರು ಯಾರು? ದಾಳಿಗೆ ಯಾವ ರೀತಿಯ ಶಸ್ತ್ರಾಸ್ತ್ರ ಬಳಸಲಾಗಿದೆ ಎಂಬ ಬಗ್ಗೆ ಸದ್ಯಕ್ಕೆ ಯಾವುದೇ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಇದನ್ನೂ ಓದಿ: ಕಾಂಗ್ರೆಸ್ ಆಕ್ರೋಶ ಬೆನ್ನಲ್ಲೇ ಕ್ಷಮೆಯಾಚಿಸಿದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ
