ಬೆಳಗಾವಿ: ಉತ್ತರಾಖಂಡದಲ್ಲಿ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ (Uttarakhand Helicopter Crash) ಸಾವನ್ನಪ್ಪಿದ್ದ ಸಿಸಿಬಿ ಇನ್ಸ್ಪೆಕ್ಟರ್ ಅರುಣ್ ಸಾಳುಂಕೆ (CCB Inspector Arun Salunke) ಅಂತ್ಯ ಸಂಸ್ಕಾರ ಅವರ ಹುಟ್ಟೂರು ಬೆಳಗಾವಿ (Belagavi) ಜಿಲ್ಲೆ ಅಥಣಿ ತಾಲೂಕಿನ ಅರಟಾಳ ಗ್ರಾಮದಲ್ಲಿ ಸರ್ಕಾರಿ ಗೌರವಗಳೊಂದಿಗೆ, ಮರಾಠಾ ಸಂಪ್ರದಾಯದಂತೆ ನಡೆಯಿತು.
ಗ್ರಾಮದ ಅರುಣ್ ಅವರ ತೋಟದಲ್ಲಿ ಅಂತ್ಯ ಸಂಸ್ಕಾರ ನಡೆಯಿತು. ಅವರ ಪುತ್ರ ವಲ್ಲಭ ಚಿತೆಗೆ ಅಗ್ನಿ ಸ್ಪರ್ಶ ಮಾಡುವ ಮೂಲಕ ಅಂತ್ಯ ಸಂಸ್ಕಾರ ನಡೆಸಿದರು. ಸಿಸಿಬಿ ಮುಖ್ಯಸ್ಥ ಅಜಯ್ ಹಿಲೋರಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಅಂತಿಮ ನಮನ ಸಲ್ಲಿಸಿದರು. ಪೊಲೀಸ್ ಇಲಾಖೆಯಿಂದ ಮೂರು ಸುತ್ತು ಗುಂಡು ಹಾರಿಸಿ ಅಂತಿಮ ಗೌರವ ಸಲ್ಲಿಸಲಾಯಿತು. ಇದನ್ನೂ ಓದಿ: ಉತ್ತರಾಖಂಡ ಹೆಲಿಕಾಪ್ಟರ್ ದುರಂತ – ಒಕ್ಕಲಿಗ ಸಂಪ್ರದಾಯದಂತೆ ನೆರವೇರಿದ ತುಮಕೂರಿನ ಇಬ್ಬರ ಅಂತ್ಯಸಂಸ್ಕಾರ
ಇದಕ್ಕೂ ಮುನ್ನ ಗೋವಾದಿಂದ ಅಥಣಿ ಮಾರ್ಗವಾಗಿ ಆಗಮಿಸಿದ ಮೃತದೇಹವನ್ನ ಬೈಕ್ ರ್ಯಾಲಿ ಮೂಲಕ ಸಾವಿರಾರು ಯುವಕರು ಗ್ರಾಮಕ್ಕೆ ತಂದರು. ರಸ್ತೆಯುದ್ದಕ್ಕೂ ಸಾವಿರಾರು ಜನ ಅರುಣ್ ಸಾಳುಂಕೆ ಅವರಿಗೆ ಗೌರವ ಸಲ್ಲಿಸಿದರು. ಬಳಿಕ ಗ್ರಾಮದ ತೋಟದ ಆವರಣದಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಅರುಣ್ ಅವರ ಸ್ನೇಹಿತರು, ಬ್ಯಾಚ್ನ ಅಧಿಕಾರಿಗಳು, ಗ್ರಾಮಸ್ಥರು ಶಾಲಾ ವಿದ್ಯಾರ್ಥಿಗಳು ಅಂತಿಮ ನಮನ ಸಲ್ಲಿಸಿದರು. ಅಂತಿಮ ದರ್ಶನದ ವೇಳೆ ಅರುಣ್ ಅವರ ಪುತ್ರಿ ದೀಪ ಬೆಳಗಿ ಧಾರ್ಮಿಕ ಕಾರ್ಯ ಮಾಡಿದ್ದಾರೆ. ಈ ವೇಳೆ ನೆರೆದಿದ್ದ ಜನಸ್ತೋಮ ಕಣ್ಣೀರಾಯಿತು. ಇದೇ ವೇಳೆ ಇಲಾಖೆಯಲ್ಲಿ ಅರುಣ್ ಅವರ ಜೊತೆಗೆ ಕೆಲಸ ಮಾಡುತ್ತಿದ್ದ ಅಧಿಕಾರಿಗಳು ಅರುಣ್ ಅವರನ್ನನ್ನು ನೆನೆದು ಕಣ್ಣಿರು ಹಾಕಿದರು. ಇದನ್ನೂ ಓದಿ: ಕೇರಳದ ಹೆಣ್ಮಗಳ ದೂರು ಎಲ್ಲಿ ಹೋಯ್ತು? ಕೃಪಾ ಆಳ್ವಾ ವಿದೇಶಕ್ಕೆ ಕಳುಹಿಸಿದ್ದು ಯಾಕೆ?- ಡಿಕೆಶಿ ಸಿಡಿ ಲಿಂಕ್ ಬಿಚ್ಚಿಟ್ಟು ಹೆಚ್ಡಿಕೆ ಬಾಂಬ್
