- ಬಸ್ಗಳಲ್ಲಿ ಜನಜಂಗುಳಿ – ವಾಪಸ್ ಆಗಲು ಮಹಿಳೆಯರ ಪರದಾಟ
ಹಾಸನ: ಭಾನುವಾರದ ರಜೆ ಇರುವುದರಿಂದ ಹಾಸನಾಂಬೆ ದರ್ಶನಕ್ಕೆ (Hasanamba Jatre) ರಾಜ್ಯದ ಮೂಲೆ ಮೂಲೆಯಿಂದ ಭಕ್ತರು ಆಗಮಿಸಿದ್ದಾರೆ. ಧರ್ಮ ದರ್ಶನ, 1000 ರೂ., 300 ರೂ. ವಿಶೇಷ ದರ್ಶನದ ಸಾಲುಗಳಲ್ಲಿ ಜನರು ತುಂಬಿ ತುಳುಕುತ್ತಿದ್ದಾರೆ.
ನೂಕು-ನುಗ್ಗಲು ಉಂಟಾಗದಂತೆ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಧರ್ಮ ದರ್ಶನದ ಸಾಲಿನಲ್ಲಿ ನೂರಾರು ಮಹಿಳಾ ಭಕ್ತರು ದರ್ಶನಕ್ಕೆ ಬಂದಿದ್ದಾರೆ. ದೇವಿ ದರ್ಶನ ತಡವಾಗುತ್ತಿರುವ ಹಿನ್ನಲೆಯಲ್ಲಿ ಸರತಿ ಸಾಲಿನಲ್ಲಿ ಮಹಿಳಾ ಭಕ್ತರು ಕುಳಿತುಕೊಂಡಿದ್ದಾರೆ. ಇದನ್ನೂ ಓದಿ: ಎರಡನೇ ದಿನವೂ ಹಾಸನಾಂಬೆ ದರ್ಶನಕ್ಕೆ ಹರಿದು ಬಂದ ಭಕ್ತಸಾಗರ
ದೇವಿ ದರ್ಶನ ಪಡೆದು ವಾಪಾಸ್ ತೆರಳಲು ಭಕ್ತರು ಪರದಾಡುತ್ತಿದ್ದಾರೆ. ಬಸ್ ಹತ್ತುವಾಗ ನೂಕು-ನುಗ್ಗಲು ಉಂಟಾಗಿ ಮಹಿಳೆಯೊಬ್ಬಳು ಕೆಳಗೆ ಬಿದ್ದಿದ್ದು, ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾಳೆ. ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಬಸ್ ನಿಲ್ದಾಣಕ್ಕೆ ಜಮಾಯಿಸಿದ್ದಾರೆ. ನೂಕು-ನುಗ್ಗಲು ನಿಯಂತ್ರಿಸಲು ಸಾರಿಗೆ ಅಧಿಕಾರಿಗಳು ಲಾಠಿ ಹಿಡಿದು ನಿಂತಿದ್ದಾರೆ.
ಬಸ್ಗಳ ಸಂಖ್ಯೆ ಕಡಿಮೆ ಇದೆ. ನೂಕು-ನುಗ್ಗಲು ಮಾಡಿಕೊಳ್ಳಬೇಡಿ ಎಂದು ಅಧಿಕಾರಿಗಳು ಮೈಕ್ ಮೂಲಕ ಅನೌನ್ಸ್ ಮಾಡುತ್ತಿದ್ದಾರೆ. ಇದನ್ನೂ ಓದಿ: ಹಾಸನಾಂಬೆ ಜಾತ್ರೆ ಇತಿಹಾಸದಲ್ಲೇ ಮೊದಲ ದಿನ ಭಾರೀ ಜನಸಾಗರ – ಇದು ದೇವಿಯ ಪವಾಡ ಎಂದ ಶಿವಲಿಂಗೇಗೌಡ
