ರಾಮನಗರ: ಕುಮಾರಸ್ವಾಮಿ (HD Kumaraswamy) ಮೊದಲು ಊಸರವಳ್ಳಿ ರಾಜಕಾರಣ ಮಾಡುವುದನ್ನು ಬಿಡಬೇಕು ಮತ್ತು ವೈಯಕ್ತಿಕ ವಿಚಾರಗಳನ್ನು ಮಾತನಾಡುವುದನ್ನು ನಿಲ್ಲಿಸಬೇಕು ಎಂದು ಸಚಿವ ಹೆಚ್.ಸಿ ಬಾಲಕೃಷ್ಣ (HC Balakrishna) ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿಗೆ ಟಾಂಗ್ ಕೊಟ್ಟಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಕುರಿತು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಮೃದು ಧೋರಣೆ ತೋರುತ್ತಿರುವ ವಿಚಾರದ ಕುರಿತು ಮಾಗಡಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಿತ್ಯ ಮಾಧ್ಯಮಗಳ ಮುಂದೆ ತೋರಿಸುತ್ತಿರುವ ಈ ಪ್ರಕರಣಗಳು ಕೊನೆಗೆ ಅವರ ಬುಡಕ್ಕೇ ಬರಲಿವೆ. ಸ್ವಲ್ಪ ದಿನ ಕಾದು ನೋಡಿ, ಎಲ್ಲವೂ ಗೊತ್ತಾಗಲಿದೆ ಎಂದರು. ಇದನ್ನೂ ಓದಿ: ಪಂಜಾಬ್ ಚುನಾವಣೆಗೆ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಗೊಳಿಸಿದ AAP – ಸಿಎಂ ಭಗವಂತ್ ಮನ್ಗೆ ಧುರಿಯಿಂದ ಟಿಕೆಟ್
ಪ್ರಿಯಾಂಕ್ ಖರ್ಗೆ ಅವರು ಸಚಿವರಾಗಿ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರ ವಿರುದ್ಧ ಆಕ್ಷೇಪಣೆ ಇದ್ದರೆ ಕೋರ್ಟ್ ಅಥವಾ ಕಾನೂನಿನ ಮೂಲಕ ಹೋರಾಡಲಿ. ಅದನ್ನು ಬಿಟ್ಟು ಕೇಂದ್ರ ಸಚಿವರಾಗಿರುವ ಕುಮಾರಸ್ವಾಮಿ ಅವರು ತಮ್ಮ ಸ್ಥಾನದಿಂದ ಕೆಳಗಿಳಿದು ಮಾತನಾಡುತ್ತಿದ್ದಾರೆ. ಹೆಚ್ಡಿಕೆ ಸಣ್ಣಪುಟ್ಟದ್ದಕ್ಕೂ ಪ್ರತಿಕ್ರಿಯೆ ನೀಡಿ, ರಾಜ್ಯ ನಾಯಕರಾಗಿದ್ದ ಪ್ರಿಯಾಂಕ್ ಖರ್ಗೆ ಅವರನ್ನು ರಾಷ್ಟ್ರ ನಾಯಕನನ್ನಾಗಿ ಮಾಡುತ್ತಿದ್ದಾರೆ. ಖರ್ಗೆ ಅವರು ಟೆನ್ಷನ್ ತಗೊಳ್ಳದೆ ಕೂಲ್ ಆಗಿ ಹ್ಯಾಂಡಲ್ ಮಾಡುತ್ತಿದ್ದರೆ, ಹೆಚ್ಡಿಕೆ ಮಾತ್ರ ಅನಗತ್ಯವಾಗಿ ಗಡಿಬಿಡಿಗೊಳ್ಳುತ್ತಿದ್ದಾರೆ ಎಂದು ಟಾಂಗ್ ನೀಡಿದರು. ಇದನ್ನೂ ಓದಿ: Kalaburagi | ಬೀದಿ ನಾಯಿ ದಾಳಿಗೆ 4 ವರ್ಷದ ಬಾಲಕ ಬಲಿ
ಇನ್ನೂ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ದೇವೇಗೌಡರ ಭೇಟಿ ಕುರಿತು ವ್ಯಂಗ್ಯವಾಡಿದ ಸಚಿವರು, ಇದು ದೊಡ್ಡ ವಿಪರ್ಯಾಸ. ಹಿಂದೆ ಯಡಿಯೂರಪ್ಪ ಅವರನ್ನು ಕಣ್ಣೀರು ಹಾಕಿಸಿ ಅಧಿಕಾರದಿಂದ ಕೆಳಗಿಳಿಸಿ ಮೋಸ ಮಾಡಿದ್ದರು. ಅಂದು ವಿಧಾನಸೌಧದಲ್ಲಿ ನಿಂತು ಜೆಡಿಎಸ್ ಲಾಂಛನವನ್ನು ನಾಗರಹಾವು ಎಂದಿದ್ದ ಯಡಿಯೂರಪ್ಪ, ಇಂದು ಅದೇ ದೇವೇಗೌಡರ ಮನೆಗೆ ಹೋಗಿ ಮಾತನಾಡುತ್ತಿದ್ದಾರೆ. ರಾಜಕಾರಣದಲ್ಲಿ ಇಂತಹ ವಿಪರ್ಯಾಸ ನಡೆಯಬಾರದಿತ್ತು ಎಂದು ಕಿಡಿಕಾರಿದರು. ಇದನ್ನೂ ಓದಿ: IAF ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡ ಏರ್ ಚೀಫ್ ಮಾರ್ಷಲ್ ಅಶುತೋಷ್ ದೀಕ್ಷಿತ್
ಅಂದು ಸಿದ್ದರಾಮಯ್ಯ ಅವರಿಗೆ ಸಿಎಂ ಆಗಲು ಅವಕಾಶ ಕೊಡದೆ ಪಕ್ಷದಿಂದ ಆಚೆ ಹಾಕಿದವರು ಇದೇ ಕುಮಾರಸ್ವಾಮಿ. ಆದರೆ ಇಂದು ದಿಢೀರನೆ ಸಿದ್ದರಾಮಯ್ಯ ಬಗ್ಗೆ ಸಾಫ್ಟ್ ಆಗಿ ಮಾತನಾಡುತ್ತಾ ಅಣ್ಣ-ತಮ್ಮ ಎನ್ನಲು ಹೊರಟಿದ್ದಾರೆ. ಹಿಂದೆ ಕುಮಾರಸ್ವಾಮಿ ಜೊತೆ ನಾವಿದ್ದದ್ದು ನಮ್ಮ ಮೂರ್ಖತನ ಹಾಗೂ ನಾವು ಮಾಡಿದ ದೊಡ್ಡ ತಪ್ಪು. ಹೆಚ್ಡಿಕೆ ಅವರ ಈ ಊಸರವಳ್ಳಿ ರಾಜಕಾರಣ ಜನರಿಗೆ ಈಗ ಸಂಪೂರ್ಣ ಅರ್ಥವಾಗುತ್ತಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಐದೇ ದಿನಗಳಲ್ಲಿ ATM ದರೋಡೆ ಖದೀಮರು ಅರೆಸ್ಟ್ – ಸಿಸಿಟಿವಿ ದೃಶ್ಯಗಳ ಮೂಲಕ ಹೆಡೆಮುರಿ ಕಟ್ಟಿದ ಬೀದರ್ ಪೊಲೀಸರು
