ನವದೆಹಲಿ: ಅಸ್ತಾನಾದಲ್ಲಿ ನಡೆಯುತ್ತಿರುವ ವಿಶ್ವ ಚಾಂಪಿಯನ್ಶಿಪ್ನಲ್ಲಿ ಭಾರತದ ಮಹಿಳಾ ಕುಸ್ತಿ ಪಟು ಮನೀಷಾ ಭನ್ವಾಲಾ (Manisha Bhanwala) ಹೊಸ ಇತಿಹಾಸ ನಿರ್ಮಿಸಿದ್ದಾರೆ.
ಶುಕ್ರವಾರ (ಇಂದು) ನಡೆದ 59 ಕೆಜಿ ವಿಭಾಗದ ಫೈನಲ್ ಪಂದ್ಯದಲ್ಲಿ, ಅಮೆರಿಕದ ಕುಸ್ತಿಪಟು ಎಲಿಜಬೆತ್ ನೆಟ್ಟೆ ಅವರನ್ನ 8-6 ಅಂತರದಿಂದ ಸೋಲಿಸುವ ಮೂಲಕ ಮನೀಷಾ ಭನ್ವಾಲಾ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. ಈ ಮೂಲಕ ಕುಸ್ತಿ ವಿಶ್ವ ಚಾಂಪಿಯನ್ಶಿಪ್ನಲ್ಲಿ (Wrestling World Championship) ಚಿನ್ನ ಗೆದ್ದ ಭಾರತದ ಮೊದಲ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
29 ವರ್ಷದ ಮನೀಷಾ, ಫೈನಲ್ ಪಂದ್ಯದ ಆರಂಭಿಕ ಸುತ್ತಿನಲ್ಲಿ 4 ಅಂಕಗಳ ಹಿನ್ನಡೆ ಅನುಭವಿಸಿದ್ದರು. ಬಳಿಕ ಪುಟಿದೆದ್ದ ಮನಿಷಾ ಆಕ್ರಮಣಕಾರಿ ಪ್ರದರ್ಶನ ನೀಡಿದರು. ಸತತ ಪೈಪೋಟಿ ನೀಡುವ ಮೂಲಕ ಗೆಲುವು ಸಾಧಿಸುವಲ್ಲಿ ಯಶಸ್ವಿಯಾದರು.
ಇದಕ್ಕೂ ಮುನ್ನ ಅನ್ಶು ಮಲಿಕ್ ಅವರು ವಿಶ್ವ ಚಾಂಪಿಯನ್ಶಿಪ್ನ ಫೈನಲ್ಗೆ ತಲುಪಿದ ಏಕೈಕ ಭಾರತೀಯ ಮಹಿಳೆಯಾಗಿದ್ದರು. ಮನಿಷಾ 2021ರಲ್ಲಿ 57 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದಿದ್ದರು.
