ಡೆಹ್ರಾಡೂನ್: ಇಲ್ಲಿನ ಬದರಿನಾಥ ಧಾಮದಿಂದ ಡೆಹ್ರಾಡೂನ್ (Dehradun) ಕಡೆಗೆ ತೆರಳುತ್ತಿದ್ದ ಹೆಲಿಕಾಪ್ಟರ್ ಜೋಶಿಮಠ (JoshiMath) ಸಮೀಪ ಪತನಗೊಂಡಿದ್ದು, ಬೆಂಗಳೂರಿನ (Bengaluru) ಐವರು ಸೇರಿ 6 ಮಂದಿ ಮೃತಪಟ್ಟಿದ್ದಾರೆ. ಉತ್ತರಾಖಂಡದಲ್ಲಿ ಕಳೆದ 10 ವರ್ಷದಲ್ಲಿ ಒಟ್ಟು 13 ಹೆಲಿಕಾಪ್ಟರ್ ದುರಂತ ಸಂಭವಿಸಿದ್ದು, 27 ಮಂದಿ ಸಾವನ್ನಪ್ಪಿದ್ದಾರೆ.
ಇದೀಗ ಆಘಾತಕಾರಿ ಮಾಹಿತಿಯೊಂದು ಬಹಿರಂಗವಾಗಿದ್ದು, ಕಳೆದ ದಶಕದಲ್ಲಿ ಉತ್ತರಾಖಂಡದಲ್ಲಿ ಒಟ್ಟು 13 ಹೆಲಿಕಾಪ್ಟರ್ ದುರಂತಗಳು ಸಂಭವಿಸಿದೆ. ಅಂದರೆ 2016ರಿಂದ 2026ರವರೆಗೆ ಒಟ್ಟು 13 ದುರಂತಗಳು ಸಂಭವಿಸಿದೆ. ಇದನ್ನೂ ಓದಿ: ಹೆಲಿಕಾಪ್ಟರ್ ದುರಂತ | ಬೆಂಗಳೂರಿನ ಐವರು ಸೇರಿ 6 ಮಂದಿ ಸಾವು – ಸುಟ್ಟು ಕರಕಲಾದ ಸ್ಥಿತಿಯಲ್ಲಿ ಮೃತದೇಹ ಪತ್ತೆ!
ಕಳೆದ ವರ್ಷ ರಾಜ್ಯಸಭೆಯಲ್ಲಿ ನಾಗರಿಕ ವಿಮಾನಯಾನ ರಾಜ್ಯ ಸಚಿವ ಮುರಳಿಧರ್ ಮೊಹೋಲ್ ಅವರು, 2020 ಮತ್ತು 2025ರ ನಡುವೆ ದೇಶಾದ್ಯಂತ ವರದಿಯಾದ 12 ಪ್ರಮುಖ ಹೆಲಿಕಾಪ್ಟರ್ ಅಪಘಾತಗಳಲ್ಲಿ ಏಳು ಅಪಘಾತಗಳು ಉತ್ತರಾಖಂಡದಲ್ಲಿಯೇ ಸಂಭವಿಸಿದೆ ಎಂದು ಮಾಹಿತಿ ನೀಡಿದ್ದರು. ಒಟ್ಟು ದುರಂತಗಳಲ್ಲಿ 30 ಮಂದಿ ಸಾವನ್ನಪ್ಪಿದ್ದು, ಉತ್ತರಾಖಂಡದಲ್ಲಿಯೇ 21 ಜನರು ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ನೀಡಿದ್ದರು.
2022ನ ಅಕ್ಟೋಬರ್ನಲ್ಲಿ ದುರಂತವೊಂದು ಸಂಭವಿಸಿತ್ತು. ಕೇದಾರನಾಥಕ್ಕೆ ಯಾತ್ರಾರ್ಥಿಗಳನ್ನು ಸಾಗಿಸುತ್ತಿದ್ದ ಹೆಲಿಕಾಪ್ಟರ್ ಬೆಟ್ಟದ ಮೇಲೆ ಪತನಗೊಂಡು, ಅದರಲ್ಲಿದ್ದ ಏಳು ಮಂದಿ ಸಾವನ್ನಪ್ಪಿದ್ದರು. ಕಳೆದ ವರ್ಷ ಮೇ 8ರಂದು ಉತ್ತರಕಾಶಿಯಲ್ಲಿ ಮತ್ತು ಜೂನ್ 15ರಂದು ಕೇದಾರನಾಥದ ಬಳಿ ಸಂಭವಿಸಿದ ಎರಡು ಮಾರಣಾಂತಿಕ ಅಪಘಾತಗಳು 13 ಜೀವಗಳನ್ನು ಬಲಿ ಪಡೆದುಕೊಂಡಿತ್ತು.
ಇಂದು (ಅ.30) ಉತ್ತರಾಖಂಡದ ಜೋಶಿಮಠದ ಬಳಿ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ಪೈಲಟ್ ಸೇರಿದಂತೆ ಆರು ಜನ ಮೃತಪಟ್ಟಿದ್ದಾರೆ. ಬದ್ರಿನಾಥದಿಂದ ಡೆಹ್ರಾಡೂನ್ಗೆ ತೆರಳುತ್ತಿದ್ದ ಈ ಹೆಲಿಕಾಪ್ಟರ್ನಲ್ಲಿ ಆರು ಮಂದಿ ಪ್ರಯಾಣಿಕರಿದ್ದರು. ಪ್ರತಾಪ್, ಅರುಣ್, ಶಂಕರ್ ಗೌಡ, ಸುಧೀರ್ ಕೆ, ಎಚ್.ಎಸ್. ನಟರಾಜ ಮತ್ತು ಪೈಲಟ್ ಕ್ಯಾಪ್ಟನ್ ಹಿಮಾಂಶು ಮೃತಪಟ್ಟವರೆಂದು ಗುರುತಿಸಲಾಗಿದೆ. ಈ ದುರಂತದೊಂದಿಗೆ ಉತ್ತರಾಖಂಡದಲ್ಲಿ ಮೃತರ ಸಂಖ್ಯೆ 27ಕ್ಕೆ ತಲುಪಿದೆ.ಇದನ್ನೂ ಓದಿ:ಜೋಶಿಮ ಠ ಬಳಿ ಹೆಲಿಕಾಪ್ಟರ್ ಪತನ – ಅವಘಡದಲ್ಲಿ ತುಮಕೂರಿನ ವಿದ್ಯಾಭಾರತಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ದುರ್ಮರಣ
