ಹಾಸನ: ಅನ್ಯ ವ್ಯಕ್ತಿಗಳಿಗೆ ತನ್ನ ಗುರುತಿನ ಚೀಟಿ ನೀಡಿ ಹಾಸನಾಂಬ ದೇವಸ್ಥಾನಕ್ಕೆ (Hasanamba Temple) ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟ ಆರೋಪದ ಮೇಲೆ ಎಸ್ಡಿಎ ಒಬ್ಬರನ್ನು ಅಮಾನತು ಮಾಡಲಾಗಿದೆ.
ತಾಲೂಕು ಕಚೇರಿ ದ್ವಿತೀಯ ದರ್ಜೆ ಸಹಾಯಕ ಉದಯ್ನಾಗರಾಜ್ ಅಮಾನತಿಗೊಳಗಾದವರು. ಇವರು ತಮ್ಮ ಗುರುತಿನ ಚೀಟಿಯನ್ನು ಬೇರೆಯವರಿಗೆ ಹಸ್ತಾಂತರ ಮಾಡಿ, ಅನ್ಯ ವ್ಯಕ್ತಿಗೆ ಅನಧಿಕೃತವಾಗಿ ದೇವಸ್ಥಾನಕ್ಕೆ ಪ್ರವೇಶಕ್ಕೆ ಅವಕಾಶ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ತಹಶೀಲ್ದಾರ್ ವರದಿ ಆಧರಿಸಿ ಡಿಸಿ ಕೆ.ಎಸ್.ಲತಾಕುಮಾರಿಯವರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಹಾಸನಾಂಬೆ ಜಾತ್ರೆ ಇತಿಹಾಸದಲ್ಲೇ ಮೊದಲ ದಿನ ಭಾರೀ ಜನಸಾಗರ – ಇದು ದೇವಿಯ ಪವಾಡ ಎಂದ ಶಿವಲಿಂಗೇಗೌಡ
ಹಾಸನಾಂಬ ಹಾಗೂ ಸಿದ್ದೇಶ್ವರಸ್ವಾಮಿ ಜಾತ್ರಾ ಮಹೋತ್ಸವದಲ್ಲಿ (Hasanamba Jatra) ಕರ್ತವ್ಯ ಲೋಪ ಆರೋಪ ಕೇಳಿಬಂದ ಬೆನ್ನಲ್ಲೇ ಇಂದಿನಿಂದ ಆದೇಶ ಜಾರಿಗೆ ಬರುವಂತೆ ಅಮಾನತು ಮಾಡಲಾಗಿದೆ.
ಹಾಸನಾಂಬ ಜಾತ್ರೆಗೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿರುವುದರಿಂದ ಸ್ಥಳದಲ್ಲಿ ಎಸ್ಪಿ ಶುಭನ್ವಿತಾ ಅವರು ಮೊಕ್ಕಾಂ ಹೂಡಿದ್ದಾರೆ. ಧರ್ಮ ದರ್ಶನ, 1000 ರೂ. 300 ರೂ. ನ ವಿಶೇಷ ದರ್ಶನದ ಸಾಲುಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಯಾವುದೇ ನೂಕುನುಗ್ಗಲು ಉಂಟಾಗದಂತೆ ಪೊಲೀಸರು ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದಾರೆ. ಇದನ್ನೂ ಓದಿ: 60 ರೂ.ಗೆ 2 ಲಾಡು ಕೊಡ್ಬೇಕು, ನಾನೇ ಸರ್ಕಾರ, ನಾನು ಹೇಳಿದ ಮೇಲೆ ಫೈನಲ್: ಶಿವಲಿಂಗೇಗೌಡ ಗರಂ
