ಬೆಂಗಳೂರು: ರಾಜ್ಯದಲ್ಲಿ ಅಗತ್ಯ ವಸ್ತುಗಳ ದರ ಏರಿಕೆ (Price Hike) ದಿನಕಳೆದಂತೆ ಹೆಚ್ಚಾಗುತ್ತಲೇ ಇದೆ. ನಿನ್ನೆಯಷ್ಟೇ ಹಾಲಿನ ದರವನ್ನು ಏರಿಸುವ ಮೂಲಕ ಜನಸಾಮಾನ್ಯರಿಗೆ ಸರ್ಕಾರ ಶಾಕ್ ನೀಡಿದೆ. ಇನ್ನೂ ದೀಪಾವಳಿ ಹಬ್ಬದ ನಡುವೆ ತರಕಾರಿ (Vegetables) , ಹಣ್ಣುಗಳ (Fruits) ದರ ಸತತ ಏರಿಕೆಯಾಗುತ್ತಿದ್ದು, ದರ ಏರಿಕೆ ಹೀಗೆ ಮುಂದುವರೆದರೆ ಹಬ್ಬ ಹೇಗಪ್ಪ ಮಾಡೋದು ಅನ್ನೋ ಟೆನ್ಷನ್ ಜನರಿಗೆ ಶುರುವಾಗಿದೆ.
ದಿನಕಳೆದಂತೆ ಒಂದಲ್ಲ, ಒಂದು ಅಗತ್ಯ ವಸ್ತುಗಳ ದರ ಏರಿಕೆಯಾಗುತ್ತಲೇ ಇದ್ದು, ಖರೀದಿಗಾಗಿ ಆಚೆ ಹೋದ್ರೆ, ಈ ರೇಟ್ ಗಳನ್ನ ಕೊಟ್ಟು ಹೇಗಪ್ಪ ಖರೀದಿ ಮಾಡೋದು ಅನ್ನೋ ಟೆನ್ಷನ್ ಹೆಚ್ಚಾಗುವಂತೆ ಮಾಡಿದೆ. ಈ ಮಧ್ಯೆ ಜೀವನಕ್ಕೆ ಅಗತ್ಯವಾಗಿ ಬೇಕಾಗಿರುವ ಹಣ್ಣು, ತರಕಾರಿಗಳ ಬೆಲೆ ಕೂಡ ಏರಿಕೆಯತ್ತ ಸಾಗಿದ್ದು, ಈ ಬಾರಿ ದೀಪಾವಳಿಗೆ ದರ ಏರಿಕೆ ಜನರನ್ನ ಹೈರಾಣಾಗಿಸುತ್ತಿದೆ. ಇದನ್ನೂ ಓದಿ: ಪ್ರತಿ ಲೀಟರ್ ಹಾಲಿನ ದರ 8 ರೂ. ಹೆಚ್ಚಳ – ನ.1 ರಿಂದಲೇ ಪರಿಷ್ಕೃತ ದರ ಜಾರಿ
ರಾಜ್ಯದಲ್ಲಿ ಕೈ ಕೊಟ್ಟ ಮಳೆಯ ಪರಿಣಾಮ ಬಹುತೇಕ ಕಡೆ ಬೆಳೆನಾಶದ ಹಿನ್ನೆಲೆ, ಅಗತ್ಯ ವಸ್ತುಗಳ ದರ ಗಗನಕ್ಕೇರುತ್ತಿದೆ. ಅದರಲ್ಲೂ ತರಕಾರಿಗಳು, ಹಣ್ಣುಗಳು ದರ ಕೇಳಿದ್ರೆ, ಹೇಗಪ್ಪ ಕೊಳ್ಳೋದು ಅನ್ನೋ ಪರಿಸ್ಥಿತಿಗೆ ತಲುಪುತ್ತಿದೆ. ದಿನ ಬಳಕೆಗೆ ಅಗತ್ಯ ಬಹುತೇಕ ತರಕಾರಿಗಳ ಬೆಲೆ ಗಗನಕ್ಕೇರಿದೆ. ಈರುಳ್ಳಿ ದರ ಶತಕದ ಸನಿಹದತ್ತ ಸಾಗುತ್ತಿದ್ರೆ, ಸೊಪ್ಪುಗಳ ಬೆಲೆ ಮೂರು ಪಟ್ಟು ಏರಿಕೆ ಕಂಡಿದೆ. ಸಾಮಾನ್ಯವಾಗಿ ಹಿಂದೆ ಸೊಪ್ಪು ಇಷ್ಟು ಪ್ರಮಾಣದಲ್ಲಿ ಏರಿಕೆಯಾಗಿರಲಿಲ್ಲ. ಆದರೆ ಈ ಬಾರಿ ಏರಿಕೆಯಾಗಿದ್ದು, ಮುಂದೆ ಹೇಗೆ ಅನ್ನೋ ಆತಂಕ ಹೆಚ್ಚಿಸುತ್ತಿದೆ.
ಹಾಪ್ ಕಾಮ್ಸ್ ತರಕಾರಿ, ಹಣ್ಣಿನ ದರ
ತರಕಾರಿ – ದರ ಕೆಜಿಗೆ
– ಈರುಳ್ಳಿ ದಪ್ಪ – 77 ರೂ.
– ಸಾಂಬರ್ ಈರುಳ್ಳಿ – 140 ರೂ.
– ಹುರುಳಿಕಾಯಿ – 90 ರೂ.
– ಡಬ್ಬಲ್ ಬೀನ್ಸ್ – 110 ರೂ.
– ನುಗ್ಗೆಕಾಯಿ – 140 ರೂ.
– ಬೆಳ್ಳುಲ್ಲಿ – 310 ರೂ.
– ಅಲೂಗೆಡ್ಡೆ – 65 ರೂ.
– ಕ್ಯಾರೆಟ್ – 50 ರೂ.
– ಮಂಗಳೂರು ಸೌತೆಕಾಯಿ – 65 ರೂ.
– ಹಸಿಮೆಣಸಿನಕಾಯಿ – 90 ರೂ.
– ಅಲಸಂದೆ – 80 ರೂ.
– ತೊಗರಿಕಾಯಿ – 90 ರೂ.
– ವಾಶಿಂಗ್ಟನ್ ಸೇಬು – 355 ರೂ.
– ದಾಳಿಂಬೆ – 285 ರೂ.
– ಯಾಲಕ್ಕಿ ಬಾಳೆ – 120 ರೂ.
– ಪಪ್ಪಾಯ – 64 ರೂ.
– ಸೀಬೆ ನಾಟಿ – 100 ರೂ.
ಸೊಪ್ಪುಗಳು
– ಕೊತ್ತಂಬರಿ ಸೊಪ್ಪು – 180 ರೂ.
– ಸಬ್ಬಕ್ಕಿ ಸೊಪ್ಪು – 160 ರೂ.
– ಪುದೀನಾ – 102 ರೂ.
– ಪಾಲಕ್ – 90 ರೂ.
– ದಂಟಿನ ಸೊಪ್ಪು – 80 ರೂ.
– ಮೆಂತೆ ಸೊಪ್ಪು – 160 ರೂ.
– ಕರಿಬೇವು – 80 ರೂ.
ದರಗಳನ್ನು ಕೇಳಿ ಗ್ರಾಹಕರು ಕೂಡ ಖರೀದಿಗೆ ಹಿಂದೆ ಮುಂದೆ ನೋಡ್ತಿದ್ದಾರಂತೆ. ಒಂದು ಎರಡು ಕೆಜಿ ತೆಗೆದುಕೊಳ್ಳುವವರು ಕೇವಲ ಅರ್ಧಕೆಜಿ ತರಕಾರಿ ತೆಗೆದುಕೊಂಡು ಹೋಗ್ತಿದ್ದಾರಂತೆ. ಸದ್ಯ ದೀಪಾವಳಿ ಬಳಿಕ ವಾಡಿಕೆ ಮಳೆಯಾದ್ರೆ, ಸಮಸ್ಯೆ ತಗ್ಗಬಹುದು ಅಂತಾರೆ ವ್ಯಾಪಾರಿಗಳು. ಇದನ್ನೂ ಓದಿ: ಹಾಲಿನ ದರ ಆಯ್ತು ಶೀಘ್ರವೇ ಬಸ್ ದರ ಏರಿಕೆ – ಎಷ್ಟು ಏರಿಕೆಯಾಗಬಹುದು?
