ಮುಂಬೈ: 5 ಬಾರಿ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಟ್ರೋಫಿ ಗೆದ್ದಿರುವ ಮುಂಬೈ ಇಂಡಿಯನ್ಸ್ (Mumbai Indians), ಐಪಿಎಲ್ ಟೂರ್ನಿಯ ಇತಿಹಾಸದಲ್ಲೇ ಅತ್ಯಂತ ಮೌಲ್ಯಯುತ ಫ್ರಾಂಚೈಸಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ
ಸ್ಪೋರ್ಟಿಕೊ ಸಂಸ್ಥೆಯ 2026ರ ಮೌಲ್ಯಮಾಪನ ಅಧ್ಯಯನ ವರದಿ ಪ್ರಕಾರ, ಮುಂಬೈ ಇಂಡಿಯನ್ಸ್ ವಿಶ್ವದ ಅತ್ಯಂತ ಮೌಲ್ಯಯುತ ಫ್ರಾಂಚೈಸಿ ಆಗಿ ಹೊರಹೊಮ್ಮಿದೆ. ಮುಂಬೈ ಇಂಡಿಯನ್ಸ್ನ ಮೌಲ್ಯ ಬರೋಬ್ಬರಿ 2.1 ಬಿಲಿಯನ್ ಡಾಲರ್ (ಸುಮಾರು 20,008.8 ಕೋಟಿ) ಎಂದು ಅಂದಾಜಿಸಲಾಗಿದೆ. ಈ ಮೂಲಕ ಹಾಲಿ ಚಾಂಪಿಯನ್ಸ್ ಆರ್ಸಿಬಿ (RCB) ಫ್ರಾಂಚೈಸಿಯನ್ನೂ ಹಿಂದಿಕ್ಕಿದೆ. ವಿಶೇಷವೆಂದರೆ, ಐಪಿಎಲ್ನ ಪ್ರತಿಯೊಂದು ಫ್ರಾಂಚೈಸಿಯ ಮೌಲ್ಯವೂ ಈಗ ಕನಿಷ್ಠ 1.5 ಬಿಲಿಯನ್ ಡಾಲರ್ (ಸುಮಾರು 14,292 ಕೋಟಿ) ದಾಟಿದೆ.
ಮುಂಬೈ ಇಂಡಿಯನ್ಸ್ ತಂಡದ ಮೌಲ್ಯವು ಅಮೆರಿಕದ ಪ್ರಮುಖ ಕ್ರೀಡಾ ತಂಡಗಳಾದ ಡೆಟ್ರಾಯಿಟ್ ಟೈಗರ್ಸ್ ಮತ್ತು ಕೆನಡಾದ ವ್ಯಾಂಕೋವರ್ ಕ್ಯಾನಕ್ಸ್ ತಂಡಗಳಿಗಿಂತಲೂ ಹೆಚ್ಚಾಗಿದೆ ಎಂದು ವರದಿ ತಿಳಿಸಿದೆ.
2ನೇ ಸ್ಥಾನಕ್ಕೆ ಕುಸಿದ ಆರ್ಸಿಬಿ, 3ಕ್ಕಿಳಿದ ಸಿಎಸ್ಕೆ
ಐಪಿಎಲ್ ಫ್ರಾಂಚೈಸಿಗಳ ಮೌಲ್ಯಮಾಪನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) 1.85 ಬಿಲಿಯನ್ ಡಾಲರ್ (ಸುಮಾರು 17,626.8 ಕೋಟಿ ರೂ.) ಮೌಲ್ಯದೊಂದಿಗೆ 2ನೇ ಸ್ಥಾಕ್ಕೆ ಕುಸಿದರೆ, 5 ಬಾರಿ ಚಾಂಪಿಯನ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ (CSK) 1.75 ಬಿಲಿಯನ್ ಡಾಲರ್ (ಸುಮಾರು 16,674 ಕೋಟಿ) ಮೌಲ್ಯದೊಂದಿಗೆ 3ನೇ ಸ್ಥಾನಕ್ಕೆ ಪಡೆದುಕೊಂಡಿದೆ.
ಇನ್ನೂ ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡದ ಮೌಲ್ಯ 1.73 ಬಿಲಿಯನ್ ಡಾಲರ್ (ಸುಮಾರು 16,483.44 ಕೋಟಿ ರೂ.) ಎಂದು ಅಂದಾಜಿಸಲಾಗಿದೆ. ಈ ಮೂಲಕ ಅದು ಐಪಿಎಲ್ನ ಸರಾಸರಿ ಫ್ರಾಂಚೈಸಿ ಮೌಲ್ಯವಾದ 1.7 ಬಿಲಿಯನ್ ಡಾಲರ್ (ಸುಮಾರು 16,197.6 ಕೋಟಿ ರೂ.) ಗಿಂತ ಮೇಲಿದ್ದು, ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮೌಲ್ಯವೂ ಇದೇ ಸರಾಸರಿ ಮಟ್ಟದಲ್ಲಿದೆ.
ಉಳಿದ ತಂಡಗಳ ಬ್ರ್ಯಾಂಡ್ ಮೌಲ್ಯ ಎಷ್ಟು?
– ರಾಜಸ್ಥಾನ್ ರಾಯಲ್ಸ್: 1.65 ಬಿಲಿಯನ್ ಡಾಲರ್ (ಸುಮಾರು 15,721.2 ಕೋಟಿ ರೂ.)
– ಸನ್ರೈಸರ್ಸ್ ಹೈದರಾಬಾದ್: 1.62 ಬಿಲಿಯನ್ ಡಾಲರ್ (ಸುಮಾರು 15,435.36 ಕೋಟಿ ರೂ.)
– ಗುಜರಾತ್ ಟೈಟಾನ್ಸ್: 1.58 ಬಿಲಿಯನ್ ಡಾಲರ್ (ಸುಮಾರು 15,054.24 ಕೋಟಿ ರೂ.)
– ಪಂಜಾಬ್ ಕಿಂಗ್ಸ್: 1.53 ಬಿಲಿಯನ್ ಡಾಲರ್ (ಸುಮಾರು 14,577.84 ಕೋಟಿ ರೂ.)
ಈ ಅಂಕಿಅಂಶಗಳ ಪ್ರಕಾರ, ಐಪಿಎಲ್ನ 10 ತಂಡಗಳ ಪೈಕಿ ಎಲ್ಲ ಫ್ರಾಂಚೈಸಿಗಳ ಮೌಲ್ಯವೂ ಸುಮಾರು 14 ಸಾವಿರ ಕೋಟಿಗಿಂತಲೂ ಹೆಚ್ಚಾಗಿದೆ ಅನ್ನೋದು ವಿಶೇಷ.


