ಮುಂಬೈ: ಮಹಾರಾಷ್ಟ್ರದ ಶಿಂಧೆ ಬಣದ ಶಾಸಕ ಸಂಜಯ್ ಗಾಯಕ್ವಾಡ್ (Sanjay Gaikwad) ರೈತ ಆತ್ಮಹತ್ಯೆ ಬಗ್ಗೆ ಮಾತನಾಡಿ ವಿವಾದ ಸೃಷ್ಟಿಸಿಕೊಂಡಿದ್ದಾರೆ.
ಬುಲ್ಧಾನಾ ಕ್ಷೇತ್ರದ ಶಾಸಕರಾಗಿರುವ ಸಂಜಯ್ ಗಾಯಕ್ವಾಡ್, ಆತ್ಮಹತ್ಯೆ ಮಾಡಿಕೊಳ್ಳುವ ರೈತರ ಅಂತ್ಯಕ್ರಿಯೆಗಳಲ್ಲಿ ಯಾರೂ ಭಾಗವಹಿಸಬಾರದು. ಶವವನ್ನ ಹಾಗೇ ಬಿಟ್ಟಾಗ ಅದನ್ನು ಪ್ರಾಣಿಗಳು ತಿಂದರೆ ಏನಾಗುತ್ತೆ ಅಂತ ಜನರಿಗೆ ಅರ್ಥವಾಗುತ್ತೆ. ಬಳಿಕ ಯಾವುದೇ ರೈತ ಆತ್ಮಹತ್ಯೆ (Farmers Suicides) ಮಾಡಿಕೊಳ್ಳುವುದಿಲ್ಲ ಎಂದಿದ್ದಾರೆ.
ರೈತರು ಆತ್ಮಹತ್ಯೆ ನಿರ್ಧಾರ ತೆಗೆದುಕೊಳ್ಳುವುದನ್ನ ತಡೆಯುವ ಉದ್ದೇಶದಿಂದ ಈ ಹೇಳಿಕೆ ನೀಡಿರುವುದಾಗಿ ಸಮರ್ಥಿಸಿಕೊಂಡಿದ್ದರೂ, ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಅಂದ್ಹಾಗೆ ಇದೇ ಎಂಎಲ್ಎ ಈ ಹಿಂದೆ ಶಾಸಕರ ಭವನದ ಕ್ಯಾಂಟೀನ್ನಲ್ಲಿ ಕಳಪೆ ಆಹಾರ ಆರೋಪಿಸಿ ಸಿಬ್ಬಂದಿಗೆ ಥಳಿಸಿದ್ದರು. ಮುಖಕ್ಕೆ ಪಂಚ್ ಕೊಟ್ಟ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು.
