- ಪತಿ ಹತ್ಯೆ ಕೇಸಲ್ಲಿ ಮರಣದಂಡನೆಗೆ ಗುರಿಯಾಗಿರೋ ಮುಸ್ಕಾನ್
- 37 ಮಹಿಳಾ ಕೈದಿಗಳಿಂದ ವ್ರತಕ್ಕೆ ಸಿದ್ಧತೆ
ಲಕ್ನೋ: ಉತ್ತರ ಪ್ರದೇಶದ ಮೀರತ್ ಜೈಲಿನಲ್ಲಿ ಕೊಲೆ ಪ್ರಕರಣಗಳಲ್ಲಿ ಶಿಕ್ಷೆಗೊಳಗಾದ ಮೂವರು ಮಹಿಳಾ ಕೈದಿಗಳು ಸೇರಿದಂತೆ 37 ಮಹಿಳೆಯರು ವೃತ ಆಚರಣೆಗೆ ಸಿದ್ಧತೆ ನಡೆಸಿದ್ದಾರೆ. ಇದರಲ್ಲಿ ಪತಿಯನ್ನು ಹತ್ಯೆಗೈದು ಮರಣದಂಡನೆಗೆ ಗುರಿಯಾದ ‘ಬ್ಲೂ ಡ್ರಮ್’ ಮರ್ಡರ್ ಕೇಸ್ ಅಪರಾಧಿ ಮುಸ್ಕಾನ್ ರಾಸ್ತೋಗಿ ಸೇರಿದಂತೆ ರವಿತಾ, ದಾಮಿನಿ ಸಹ ಸೇರಿದ್ದಾರೆ.
ತಮ್ಮ ಮಕ್ಕಳ ದೀರ್ಘಾಯುಷ್ಯಕ್ಕಾಗಿ ನ.1 ರಂದು ಅಹೋಯಿ ಅಷ್ಟಮಿ ವ್ರತ ಆಚರಿಸಲು ಕೊಲೆ ಅಪರಾಧಿಗಳಾದ ಮುಸ್ಕಾನ್ ರಾಸ್ತೋಗಿ, ರವಿತಾ ಮತ್ತು ದಾಮಿನಿ ಮುಂದಾಗಿದ್ದಾರೆ. ಈ ಬಗ್ಗೆ ಜೈಲು ಆಡಳಿತ ಮಂಡಳಿಗೆ ಮನವಿ ಮಾಡಿದ್ದಾರೆ. ವ್ರತಕ್ಕೆ ಅಗತ್ಯವಾದ ಪೂಜಾ ಸಾಮಗ್ರಿ ಒದಗಿಸಲು ಜೈಲು ಆಡಳಿತ ಒಪ್ಪಿಗೆ ಸೂಚಿಸಿದೆ. ಇದನ್ನೂ ಓದಿ: ‘ಬ್ಲೂ ಡ್ರಮ್’ ಮರ್ಡರ್ ಕೇಸ್; ಆರೋಪಿಗಳಿಗೆ ಮರಣದಂಡನೆ – ಮೀರತ್ ಕೋರ್ಟ್ ಆದೇಶ
ನೀಲಿ ಡ್ರಮ್ ಕೊಲೆ ಪ್ರಕರಣದ ಮುಸ್ಕಾನ್ ರಾಸ್ತೋಗಿ, ಪತಿ ಸೌರಭ್ ರಾಜಪೂತ್ ಹತ್ಯೆ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದಾಳೆ. ತನ್ನ ಇಬ್ಬರು ಪುತ್ರಿಯರಿಗಾಗಿ ಈಕೆ ವ್ರತ ಆಚರಿಸಲಿದ್ದಾಳೆ. ಇನ್ನೂ ಪತಿ ಅಮಿತ್ ಕಶ್ಯಪ್ ಹತ್ಯೆ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ರವಿತಾ ಕೂಡ ತನ್ನ ಮಕ್ಕಳಿಗಾಗಿ ವ್ರತ ಆಚರಿಸಲಿದ್ದಾಳೆ. ಇದರ ಜೊತೆ ಪತಿ ಅತುಲ್ ಪನ್ವಾರ್ ಹತ್ಯೆ ಪ್ರಕರಣದಲ್ಲಿ ಜೈಲಿನಲ್ಲಿರುವ ದಾಮಿನಿ, ತನ್ನ ಏಕೈಕ ಪುತ್ರನ ದೀರ್ಘಾಯುಷ್ಯಕ್ಕಾಗಿ ವ್ರತ ಆಚರಿಸಲಿದ್ದಾಳೆ.
ಮೀರತ್ನ ಚೌಧರಿ ಚರಣ್ ಸಿಂಗ್ ಜಿಲ್ಲಾ ಕಾರಾಗೃಹದಲ್ಲಿ ಇಂದು (ಅ.29) 37 ಮಹಿಳಾ ಕೈದಿಗಳು ತಮ್ಮ ಪತಿಯರ ದೀರ್ಘಾಯುಷ್ಯಕ್ಕಾಗಿ ಕರ್ವಾ ಚೌತ್ ವ್ರತ ಆಚರಿಸಲಿದ್ದಾರೆ. ಕೈದಿಗಳ ಧಾರ್ಮಿಕ ಆಚರಣೆಗೆ ಅಗತ್ಯವಾದ ಪೂಜಾ ಸಾಮಗ್ರಿಗಳನ್ನು ಜೈಲು ಆಡಳಿತ ಒದಗಿಸಲಿದೆ ಎಂದು ಹಿರಿಯ ಜೈಲು ಅಧೀಕ್ಷಕ ವೀರೇಶ್ ರಾಜ್ ಶರ್ಮಾ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಮಾರತ್ತಹಳ್ಳಿಯಲ್ಲಿ ಇಬ್ಬರು ಟೆಕ್ಕಿಗಳ ಕಿಡ್ನ್ಯಾಪ್ ಕೇಸ್; 11 ಮಂದಿ ಬಂಧನ
