ಲಕ್ನೋ: ದೇಶಾದ್ಯಂತ ಸಂಚಲನ ಸೃಷ್ಟಿಸಿದ್ದ ‘ಬ್ಲೂ ಡ್ರಮ್’ ಕೊಲೆ (Blue Drum Case) ಪ್ರಕರಣದ ತೀರ್ಪು ಪ್ರಕಟವಾಗಿದೆ. ಪತಿಯನ್ನು ಕೊಲೆ ಮಾಡಿ ಆತನ ದೇಹದ ತುಂಡುಗಳನ್ನು ನೀಲಿ ಬಣ್ಣದ ಡ್ರಮ್ವೊಂದರಲ್ಲಿ ತುಂಬಿಟ್ಟಿದ್ದಕ್ಕಾಗಿ ಮುಸ್ಕಾನ್ ಮತ್ತು ಆಕೆಯ ಪ್ರಿಯಕರ ಸಾಹಿಲ್ಗೆ ಮೀರತ್ ಜಿಲ್ಲಾ ನ್ಯಾಯಾಲಯ (Meerut Court) ಮರಣದಂಡನೆ ವಿಧಿಸಿದೆ.
ಜಿಲ್ಲಾ ನ್ಯಾಯಾಧೀಶ ಅರವಿಂದ್ ಕುಮಾರ್ ಅವರು ಸುಮಾರು ಒಂದೂವರೆ ವರ್ಷದ ನಂತರ ಶಿಕ್ಷೆಯನ್ನು ಪ್ರಕಟಿಸಿದ್ದಾರೆ. ಇದನ್ನೂ ಓದಿ: ಮೀರತ್ ಮಾದರಿ ಪೀಸ್ ಪೀಸ್ ಮಾಡಿ ಡ್ರಮ್ಗೆ ತುಂಬಿಬಿಡ್ತೀನಿ – ಮಚ್ಚು ಹಿಡಿದು ಗಂಡನಿಗೆ ಎಚ್ಚರಿಕೆ ಕೊಟ್ಟ ʻಮಚ್ಚೇಶ್ವರಿʼ!
ಕೊಲೆ ಪ್ರಕರಣದ ಇಬ್ಬರೂ ಆರೋಪಿಗಳು ಜೈಲಿನಿಂದ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಹಾಜರಾಗಿದ್ದರು. ವಿಚಾರಣೆಯ ಸಮಯದಲ್ಲಿ ಮೌನವಾಗಿದ್ದರು.
ಡ್ರಮ್, ಚಾಕು ಮತ್ತು ಔಷಧಿಗಳ ಮಾರಾಟಗಾರರು ಸೇರಿದಂತೆ 22 ಸಾಕ್ಷಿಗಳನ್ನು ನ್ಯಾಯಾಲಯವು ವಿಚಾರಣೆ ನಡೆಸಿತು. ಇದನ್ನೂ ಓದಿ: ವರದಕ್ಷಿಣೆ ಕಿರುಕುಳ ಆರೋಪ; ಇಬ್ಬರು ಮಕ್ಕಳನ್ನು ಕಾಲುವೆಗೆ ಎಸೆದು ತಾಯಿ ಆತ್ಮಹತ್ಯೆ

