– ಪುನೀತ್ ಪುಣ್ಯಸ್ಮರಣೆ – ಕುಟುಂಬಸ್ಥರಿಂದ ಸಮಾಧಿಗೆ ಪೂಜೆ
ಇಂದು ನಟ ಪುನೀತ್ ರಾಜ್ಕುಮಾರ್ (Puneeth Rajkumar) ಅವರ 5ನೇ ವರ್ಷದ ಪುಣ್ಯಸ್ಮರಣೆ ಹಿನ್ನಲೆ ಅವರ ಕುಟುಂಬಸ್ಥರು ಕಂಠೀರವ ಸ್ಟುಡಿಯೋದಲ್ಲಿ ಇರುವ ಅಪ್ಪು ಸಮಾಧಿಗೆ ಪೂಜೆ ನೆರವೇರಿಸಿದರು.
ಪೂಜೆಯ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಹಿರಿಯ ನಟ ರಾಘವೇಂದ್ರ ರಾಜ್ಕುಮಾರ್ (Raghavendra Rajkumar), ಅಪ್ಪು ಅಗಲಿ ಇಂದಿಗೆ ಐದನೇ ವರ್ಷ, ಈಗಲೂ ಜನ ಇಲ್ಲಿಗೆ ಬರುತ್ತಿದ್ದಾರೆ. ಹತ್ತು ವರ್ಷ ಆದರೂ ಜನ ಹೀಗೆ ಬರುತ್ತಾರೆ. ಅಪ್ಪು ಸ್ಮಾರಕ ಆಗಬೇಕು ಎಂದು ಸಿಎಂ ಬಳಿ ಹೇಳಿದ್ದೇವೆ ಎಂದರು.
ನಾವು ಅಪ್ಪು ಜೊತೆಗೆ ಇದ್ದೇವೆ. ಇಲ್ಲಿಗೆ ಬಂದಾಗ ಇಲ್ಲ ಅನ್ಸೋದು ಅಷ್ಟೇ. ಅವನ ಮನೆ ನನ್ನ ಮನೆ ಅಕ್ಕಪಕ್ಕದಲ್ಲೇ ಇದೆ. ಎಲ್ಲಾ ಕಡೆ ಅಪ್ಪುನೇ ಇದ್ದಾನೆ. ಅವನು ಮಾಡಿರೋ ಪುಣ್ಯ ಸಮಾಜಮುಖಿ ಕಾರ್ಯವನ್ನ ಅಭಿಮಾನಿಗಳು ಮುಂದುವರೆಸಿಕೊಂಡು ಹೋಗ್ತಿದಾರೆ. ನಮಗೆಲ್ಲ ಅಪ್ಪು ಹೇಗೆ ಬದುಕಬೇಕು ಎಂದು ಹೇಳಿಕೊಟ್ಟು ಹೋಗಿದ್ದಾರೆ ಎಂದರು.
ಯುವ ರಾಜ್ ಕುಮಾರ್ ಮಾತನಾಡಿ, ಪ್ರತಿ ವರ್ಷ ನಮಗೆ ದಸರಾ ಬಂದಾಗ ಅಪ್ಪು ನೆನಪು ಆಗುತ್ತದೆ. ಅವರು ಎಲ್ಲೂ ಹೋಗಿಲ್ಲ ನಮ್ಮ ಜೊತೆಯಲ್ಲೇ ಇದ್ದಾರೆ. ನಾವು ಇಲ್ಲಿಗೆ ಬಂದಾಗಲೇ ಅಪ್ಪು ನಮ್ಮ ಜೊತೆ ಇಲ್ಲ ಅಂತ ಗೊತ್ತಗೋದು. ಅಪ್ಪು ಅವರ ತರ ಇರಬೇಕು. ಅವರು ಎಲ್ಲರ ಮನಸಲ್ಲಿ ಇನ್ನೂ ಕೂಡ ಅಚ್ಚಳಿಯದಂತೆ ಇದ್ದಾರೆ ಎಂದರು.
ಅಪ್ಪು ಸಮಾಧಿಗೆ, ರಾಘವೇಂದ್ರ ರಾಜ್ ಕುಮಾರ್, ಅವರ ಪತ್ನಿ ಮಂಗಳ, ಪುನೀತ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಹಾಗೂ ಮಗಳು ಧೃತಿ, ಯುವರಾಜ್ ಕುಮಾರ್ ಹಾಗೂ ವಿನಯ್ ರಾಜ್ ಕುಮಾರ್ ಅವರು ಪೂಜೆ ನೆರವೇರಿಸಿದರು.
