ಕೋಲಾರ: ಒಡವೆಯನ್ನು ಪಾಲಿಶ್ (Jewelry Polishing) ಮಾಡಿ ಕೊಡುವ ಸೋಗಿನಲ್ಲಿ ಮಹಿಳೆಯೊಬ್ಬರಿಗೆ 8 ಗ್ರಾಂ ಚಿನ್ನ ವಂಚಿಸಿರುವ ಘಟನೆ ಕೋಲಾರದಲ್ಲಿ (Kolar) ನಡೆದಿದೆ.
ಶ್ರೀನಿವಾಸಪುರ (Srinivaspura) ತಾಲೂಕಿನ ಮಲ್ಲೆಪಲ್ಲಿ ಗ್ರಾಮದ ಪಲ್ಲವಿ ಎಂಬವರಿಗೆ ಅ.20ರಂದು ಅಪರಿಚಿತ ವ್ಯಕ್ತಿಯೊಬ್ಬ 60 ರೂಪಾಯಿಗೆ ಚಿನ್ನದ ಒಡವೆ ಪಾಲಿಶ್ ಮಾಡಿಕೊಡುವುದಾಗಿ ಹೇಳಿದ್ದಾನೆ. ಇದನ್ನು ನಂಬಿ ಪಲ್ಲವಿ 25 ಗ್ರಾಂ ತೂಕದ ಚಿನ್ನದ ಸರವನ್ನು ಪಾಲಿಶ್ ಮಾಡಿಸಿಕೊಂಡಿದ್ದರು. ಮನೆಯಲ್ಲಿ ಪರಿಶೀಲಿಸಿದಾಗ ಚಿನ್ನದ ತೂಕದಲ್ಲಿ 8 ಗ್ರಾಂ ಕಡಿಮೆಯಾಗಿತ್ತು. ಇದನ್ನೂ ಓದಿ: ಕಾನ್ಸ್ಟೇಬಲ್ ಪರೀಕ್ಷೆಯಲ್ಲಿ 25, VAO ಪರೀಕ್ಷೆಯಲ್ಲಿ 151 ಅಂಕ: ಹಾವೇರಿ ಅಭ್ಯರ್ಥಿಯ ಅಂಕ ರಹಸ್ಯ ಭೇದಿಸಲು ತನಿಖೆಗೆ ಆದೇಶ
ಈ ಸಂಬAಧ ಅ.23ರಂದು ಪಲ್ಲವಿ ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣ ಬೆನ್ನತ್ತಿದ ಶ್ರೀನಿವಾಸಪುರ ಪೊಲೀಸರು ಬಿಹಾರ ಮೂಲದ ಆರೋಪಿ ಮುಖೇಶ್ ಕುಮಾರ್ ಎಂಬಾತನನ್ನು ಬಂಧಿಸಿದ್ದಾರೆ. ಅಲ್ಲದೇ ಆತನ ಬಳಿ ಇದ್ದ 1.20 ಲಕ್ಷ ಮೌಲ್ಯದ 8 ಗ್ರಾಂ ಚಿನ್ನವನ್ನು ಜಪ್ತಿ ಮಾಡಿದ್ದಾರೆ. ಇದನ್ನೂ ಓದಿ: ಅರ್ಚಕನನ್ನು ಕೊಂದಿದ್ದ ನರಹಂತಕ ಚಿರತೆ ಸೆರೆ – ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
