-ಪ್ರತಿ ಹಾಡೂ ಕಲಾವಿದನ ವೈಯಕ್ತಿಕ ಜೀವನದ ಕಥೆಯಾಗಬೇಕಿಲ್ಲ: ಚಂದನ್ ಸ್ಪಷ್ಟನೆ
ಮಾಜಿ ದಂಪತಿ ಚಂದನ್ ಶೆಟ್ಟಿ (Chandan Shetty) ಹಾಗೂ ನಿವೇದಿತಾ ಗೌಡ (Nivedita Gowda) ನಡುವೆ ಇದೀಗ `ಮೈಮಾಟ’ದಾಟ ಭುಗಿಲೆದ್ದಿದ್ದು, ಸೋಷಿಯಲ್ ಮೀಡಿಯಾದಲ್ಲಿ ವಾರ್ ಶುರುವಾಗಿದೆ.
ರ್ಯಾಪರ್ ಚಂದನ್ ಶೆಟ್ಟಿ ಅವರ ಹೊಸ ಆಲ್ಬಂ ಸಾಂಗ್ `ಮೈಮಾಟ’ದಾಟ ಇತ್ತೀಚಿಗೆ ರಿಲೀಸ್ ಆಗಿದೆ. ಹಾಡಿನಲ್ಲಿ ಚಂದನ್ ಶೆಟ್ಟಿ, ಏನೇ ನಿನ್ನ ಮೈಮಾಟದಾಟ, ಏಳೇಳೂ ಜನ್ಮಕ್ಕೂ ಕಲಿಸಿದಿ ಪಾಠ ಎಂದು ಹಾಡಿದ್ದಾರೆ. ಹುಡಗಿಯೊಬ್ಬಳು ಮಾಡಿದ ಮೋಸದ ಬಗ್ಗೆ ಚಂದನ್ ಶೆಟ್ಟಿ ಈ ಹಾಡಿನಲ್ಲಿ ಬರೆದಿದ್ದಾರೆ. ಇದನ್ನೂ ಓದಿ: ದಶಮುಖ ರಾವಣನನ್ನ ಎದೆ ಮೇಲೆ ಧರಿಸಿದ ಯಶ್ – ಗೋಲ್ಡನ್ ಬ್ರೂಚ್ ಫುಲ್ ವೈರಲ್
ಹಾಡು ರಿಲೀಸ್ ಆಗುತ್ತಿದ್ದಂತೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಶುರುವಾಗಿದೆ. ಚಂದನ್ ಶೆಟ್ಟಿ ಅವರು ನಿವೇದಿತಾ ಗೌಡ ಅವರಿಗೆ ಟಾಂಗ್ ಕೊಡುವ ಸಲುವಾಗಿಯೇ ಬರೆದಿದ್ದಾರೆ ಹಾಗೂ ತಮ್ಮ ವೈಯಕ್ತಿಕ ಜೀವನದಲ್ಲಿ ನಡೆದಿದ್ದನ್ನು ಹಾಡಿನಲ್ಲಿ ಬರೆದಿದ್ದಾರೆ ಎಂದು ವೈರಲ್ ಆಗುತ್ತಿದೆ.
View this post on Instagram
ಇದಕ್ಕೆ ನಟಿ ನಿವೇದಿತಾ ಗೌಡ ಅವರು ಪ್ರತಿಕ್ರಿಯಿಸಿದ್ದು, ಎಲ್ಲೋ ಓದಿದ್ದೆ, ದೊಡ್ಡ ಗುರಿ, ಒಳ್ಳೆ ಸ್ನೇಹಿತೆಯರನ್ನು ಹೊಂದಿರುವ ಮತ್ತು ಪ್ರೀತಿಯಲ್ಲಿ ಅದೃಷ್ಟವಿಲ್ಲದ ಹುಡುಗಿಯ ಜೀವನ ಅಂದ್ರೆ ಯಾವುದೋ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ಥರ ಇರುತ್ತೆ ಅಂತ. ಆದ್ರೆ ನನ್ನ ಕಥೆ ನೋಡಿದ್ರೆ ಒಂದು ಹಾರರ್ ಸ್ಟೋರಿ ಥರ ಆಗಿದೆ. ನಾನೊಬ್ಬಳೇ ಇದ್ದಾಗಂತೂ ಆ ಹಳೆ ನೆನಪುಗಳು ನನ್ನನ್ನು ಬಿಟ್ಟು ಹೋಗೋದೇ ಇಲ್ಲ ಎಂದು ಬರೆದುಕೊಂಡಿದ್ದಾರೆ.ಇದನ್ನೂ ಓದಿ: ಸಂಜಯ್ ದತ್ ಕೂಡ ಬಿಷ್ಣೋಯ್ ಗ್ಯಾಂಗ್ ಟಾರ್ಗೆಟ್ – ಟೈಗರ್ ಶ್ರಾಫ್ಗೂ ಮುನ್ನವೇ ʻಅಧೀರʼನಿಗೆ ಹಾಕಿದ್ರು ಸ್ಕೆಚ್!
View this post on Instagram
ಸೋಷಿಯಲ್ ಮೀಡಿಯಾದಲ್ಲಿ ಆಗುತ್ತಿರುವ ಚರ್ಚೆಗೆ ಚಂದನ್ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ. ಮೈಮಾಟ ಹಾಡನ್ನು ಕೇವಲ ಮನರಂಜನೆಗಾಗಿ ರಚಿಸಲಾಗಿದ್ದು, ಯಾರನ್ನೂ ನೋಯಿಸುವ ಅಥವಾ ಗುರಿಯಾಗಿಸುವ ಉದ್ದೇಶ ಹೊಂದಿಲ್ಲ. ಈ ರೀತಿಯ ಹೊಸ ಸಂಗೀತ ಶೈಲಿಯನ್ನು ಪ್ರಯತ್ನಿಸಬೇಕೆಂಬ ಆಸೆ ನನಗೆ ಬಹಳ ಹಿಂದಿನಿಂದಲೂ ಇತ್ತು. ನನ್ನ ವೈಯಕ್ತಿಕ ಜೀವನದಲ್ಲಿ ನಡೆದ ಕೆಲವು ಘಟನೆಗಳಿಗೂ ಮೊದಲೇ ಈ ಹಾಡನ್ನು ಸಿದ್ಧಪಡಿಸಲಾಗಿತ್ತು. ಆದರೆ ಇತ್ತೀಚೆಗೆ ಹಾಡನ್ನು ನನ್ನ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದಂತೆ ಬಿಂಬಿಸಲಾಗುತ್ತಿದೆ. ಈ ಹಾಡನ್ನು ನನ್ನ ವೈಯಕ್ತಿಕ ಜೀವನದೊಂದಿಗೆ ಹೋಲಿಸಿ ಅನಗತ್ಯ ಊಹಾಪೋಹಗಳು ಹಾಗೂ ನಕಾರಾತ್ಮಕತೆಯನ್ನು ಹರಡಬೇಡಿ. ಸಂಗೀತ ಎನ್ನುವುದು ಸೃಜನಶೀಲತೆಯ ಅಭಿವ್ಯಕ್ತಿ ಪ್ರತಿಯೊಂದು ಹಾಡೂ ಕಲಾವಿದನ ವೈಯಕ್ತಿಕ ಜೀವನದ ಕಥೆಯಾಗಿರಬೇಕೆಂದಿಲ್ಲ ಎಂದು ವಿನಂತಿಸಿಕೊಂಡಿದ್ದಾರೆ.ಇದನ್ನೂ ಓದಿ: ಅಮೆರಿಕದಲ್ಲೂ ಯಶ್ ರಾವಣಾರ್ಭಟ – ಹಸಿರು ಸೀರೆಯನ್ನುಟ್ಟು ಬಂದ ರಾಧಿಕಾಗೆ ಫ್ಯಾನ್ಸ್ ಫಿದಾ
