ನವದೆಹಲಿ: ಟಾಟಾ ಸನ್ಸ್ (Tata Sons) ನಾಯಕತ್ವ ವಿವಾದಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ (Rahuk Gandhi) ತೀವ್ರ ಬೇಸರ ವ್ಯಕ್ತಪಡಿಸಿದ್ದು, ಬಿಜೆಪಿ (BJP) ನೇತೃತ್ವದ ಸರ್ಕಾರವು ಭಾರತೀಯ ವ್ಯವಹಾರಗಳನ್ನು ತನ್ನ ಆಟದ ವಸ್ತು ಎಂದು ಪರಿಗಣಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ ಟಾಟಾ ಗ್ರೂಪ್ಸ್ ಅನ್ನು ಕ್ರಿಮಿನಲ್ ರೀತಿಯಲ್ಲಿ ನಾಶಪಡಿಸಲಾಗುತ್ತಿದೆ. ಆದರೆ, ಯಾವುದೇ ಉದ್ಯಮಿಗಳು ಒಂದು ಮಾತನ್ನೂ ಆಡಲು ಧೈರ್ಯ ಮಾಡುತ್ತಿಲ್ಲ. ನೀವು ಇನ್ನೆಷ್ಟು ದಿನ ಮೌನವಾಗಿರುತ್ತೀರಿ? ಅವರು ನಿಮ್ಮನ್ನೇ ನಿಯಂತ್ರಿಸುವವರೆಗೂ ಕಾಯುತ್ತೀರಾ? ಭಾರತೀಯ ಉದ್ಯಮಗಳು ಮೋದಿ ಮತ್ತು ಶಾ ಅವರ ಆಟದ ವಸ್ತುಗಳಲ್ಲ. ನಿಮ್ಮಲ್ಲಿ ಧೈರ್ಯವಿಲ್ಲ. ಆದರೆ, ನಮ್ಮಲ್ಲಿದೆ. ಈ ಕೃತ್ಯಗಳಿಗೆ ನ್ಯಾಯ ದೊರಕಿಸಿಕೊಡಲು ನಾವು ಪ್ರಯತ್ನಿಸುತ್ತೇವೆ ಎಂದು ಗುಡುಗಿದ್ದಾರೆ. ಇದನ್ನೂ ಓದಿ: ಮಲೆ ಮಹದೇಶ್ವರ ಬೆಟ್ಟದಲ್ಲಿ ಹುಂಡಿ ಎಣಿಕೆ – 36 ದಿನದಲ್ಲಿ 2.79 ಕೋಟಿ ರೂ. ಸಂಗ್ರಹ.
Tata is being criminally destroyed, and no business leader dares say a word.
How long will you stay silent? Until they own you?
Indian business is not Modi and Shah’s plaything. You lack courage. We don’t. We will ensure justice for these crimes.
— Rahul Gandhi (@RahulGandhi) October 28, 2026
ಟಾಟಾ ಸನ್ಸ್ನ ನಿರ್ದೇಶಕರ ಮಂಡಳಿಯು ಎನ್.ಚಂದ್ರಶೇಖರನ್ ಅವರನ್ನು ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ಮರುನೇಮಕ ಮಾಡುವ ನಿರ್ಣಯದ ಸಿಂಧುತ್ವವನ್ನು ಟಾಟಾ ಟ್ರಸ್ಟ್ಗಳ ಅಧ್ಯಕ್ಷ ನೋಯೆಲ್ ಟಾಟಾ ಪ್ರಶ್ನಿಸಿದ ಬಳಿಕ ಟಾಟಾ ಸಮೂಹದೊಳಗಿನ ವಿವಾದ ತೀವ್ರಗೊಂಡಿದೆ.
ಸೆಪ್ಟೆಂಬರ್ 17ರಂದು ನಡೆದ ಸಭೆಯಲ್ಲಿ ಕಾರ್ಯವಿಧಾನಕ್ಕೆ ಸಂಬಂಧಿಸಿದ ಲೋಪಗಳಾಗಿವೆ ಎಂದು ಆರೋಪಿಸಿದ್ದಾರೆ. ಇದಕ್ಕೆ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿರುಗೇಟು ಕೊಟ್ಟಿದ್ದು, ವಿಷಪೂರಿತ ವಾತಾವರಣವನ್ನು ಹರಡಬೇಡಿ ಅಂದಿದ್ದಾರೆ.ಇದನ್ನೂ ಓದಿ: ಹಾಸನಾಂಬೆ ದರ್ಶನೋತ್ಸವಕ್ಕೆ ಕ್ಷಣಗಣನೆ, ಗುರುವಾರ ಗರ್ಭಗುಡಿ ಓಪನ್ – ನಾಳೆ ಸಾರ್ವಜನಿಕರಿಗಿಲ್ಲ ದರ್ಶನ ಭಾಗ್ಯ!
