ಬೆಂಗಳೂರು: ಕೆಪಿಎಸ್ಸಿ (KPSC) ನೇಮಕಾತಿಯಲ್ಲಿ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಕೆಪಿಎಸ್ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ (Shivashankarappa Sahukar) ಕಳೆದೊಂದು ವರ್ಷದಿಂದ 10 ಕೋಟಿ ವ್ಯವಹಾರ ನಡೆಸಿದ್ದಾರೆ ಎಂದು ಇಡಿ (ED) ತನಿಖೆಯಲ್ಲಿ ಪತ್ತೆ ಹಚ್ಚಿದೆ.
ಬೆಂಗಳೂರಿನ (Bengaluru) ರಿಯಲ್ ಎಸ್ಟೇಟ್ ಉದ್ಯಮಿಯ ಜೊತೆ ಕೈ ಜೋಡಿಸಿರುವ ಶಿವಶಂಕರಪ್ಪ ಸಾಹುಕಾರ್, ಭೂಮಿ ಖರೀದಿ ಮಾರಾಟದಲ್ಲಿ ಸಕ್ರಿಯ ಆಗಿದ್ರು ಅನ್ನೋದು ಗೊತ್ತಾಗಿದೆ. ಮಾಹಿತಿ ಆಧರಿಸಿ ರಿಯಲ್ ಎಸ್ಟೇಟ್ ಉದ್ಯಮಿಯನ್ನು ವಿಚಾರಣೆಗೆ ಒಳಪಡಿಸಿದಾಗ ತಪ್ಪೊಪ್ಪಿಗೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಪಿಂಕ್ ಲೈನ್ ಲೋಕಾರ್ಪಣೆಗೆ ಬೆಂಗಳೂರಿಗೆ ಮೋದಿ: ಡಿಕೆಶಿ
ಆಗಸ್ಟ್ 2025 ಮತ್ತು ಡಿಸೆಂಬರ್ ಅಲ್ಲಿ 4.99 ಕೋಟಿ ರೂ. ಹಣವನ್ನು ವಹಿವಾಟು ಮಾಡಿದ್ದಾರೆ ಅನ್ನೋದು ಗೊತ್ತಾಗಿದೆ. ಇಡಿ ಈ ಬಗ್ಗೆ ಮತ್ತಷ್ಟು ಮಾಹಿತಿ ಬೆನ್ನತ್ತಿದೆ.
