ಚೆನ್ನೈ: ತಮಿಳುನಾಡು (Tamil Nadu) ಸರ್ಕಾರ 13 ವರ್ಷಗಳ ನಂತರ ರಾಜ್ಯಾದ್ಯಂತ ಆಟೋರಿಕ್ಷಾ ದರವನ್ನು (Autorickshaw fares) ಪರಿಷ್ಕರಿಸಿದೆ. ಇದರನುಸಾರ ಪ್ರತೀ 1.8 ಕಿ.ಮೀ.ಗೆ 50ರೂ. ನಿಗದಿಗೊಳಿಸಲಾಗಿದೆ.
ಮೊದಲ 1.8 ಕಿಲೋಮೀಟರ್ಗಳಿಗೆ ಕನಿಷ್ಠ ದರವನ್ನು 50 ರೂ.ಗೆ ನಿಗದಿಪಡಿಸಲಾಗಿದೆ. ನಂತರದ ಪ್ರತಿ ಕಿಲೋಮೀಟರ್ಗೆ ಹೆಚ್ಚುವರಿಯಾಗಿ 25 ರೂ.ಗಳನ್ನು ವಿಧಿಸಲಾಗುತ್ತದೆ. 1988 ರ ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 67 ರ ಅಡಿಯಲ್ಲಿ ಅಧಿಸೂಚನೆಯನ್ನು ಹೊರಡಿಸಲಾಗಿದೆ.
ಸರ್ಕಾರವು ಘಾಟ್ ಪ್ರಯಾಣ ದರವನ್ನು ಕನಿಷ್ಠ ದರದ 1.2 ಪಟ್ಟು ಹೆಚ್ಚಿಸಿ, ಮೂಲ ದರ 60 ರೂ. ಹೆಚ್ಚುವರಿ ಘಾಟ್ ಪ್ರಯಾಣ ದರವನ್ನು ಪ್ರತಿ ಕಿಲೋಮೀಟರ್ಗೆ 30 ರೂ. ನಿಗದಿಪಡಿಸದೆ.ಇದನ್ನೂ ಓದಿ: ಅಂಜನಾದ್ರಿ ಬೆಟ್ಟದಲ್ಲಿ ವಿದ್ಯಾದಾಸ್ ಬಾಬಾ, ಕೊಪ್ಪಳ ಜಿಲ್ಲಾಡಳಿತದ ಮಧ್ಯೆ ಮುಂದುವರಿದ ಜಟಾಪಟಿ
ಪರಿಷ್ಕೃತ ದರಗಳ ಅಡಿಯಲ್ಲಿ, ರಾತ್ರಿ 10ರಿಂದ ಬೆಳಿಗ್ಗೆ 5ರವರೆಗಿನ ರಾತ್ರಿಯ ಪ್ರಯಾಣ ದರಗಳು ಸಾಮಾನ್ಯ ದರಕ್ಕಿಂತ 1.5 ಪಟ್ಟು ಹೆಚ್ಚಾಗಿರುತ್ತವೆ. ಪ್ರತಿ ನಿಮಿಷಕ್ಕೆ 1 ರೂ. ವೇಟಿಂಗ್ ಚಾರ್ಜ್ ಸಹ ನಿಗದಿಪಡಿಸಲಾಗಿದೆ.
ಬರೊಬ್ಬರಿ 13 ವರ್ಷಗಳ ನಂತರ ಆಟೋ ಪ್ರಯಾಣ ದರವನ್ನು ಪರಿಷ್ಕರಿಸಲಾಗಿದ್ದು, ಏಕಾಏಕಿ ಈ ರೀತಿ ಬೆಲೆ ಏರಿಕೆ ಮಾಡಿರುವುದು ಪ್ರಯಾಣಿಕರಿಗೆ ಹೊರೆಯಾಗುವ ಸಾಧ್ಯತೆ ಇದೆ. ಆದರೆ ಆಟೋ ಚಾಲಕರ ಹಿತಾಸಕ್ತಿಯ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.ಇದನ್ನೂ ಓದಿ: ಹಂಪಿ ಸಂರಕ್ಷಣೆಗೆ ಯುನೆಸ್ಕೋ ತಜ್ಞರ ಮೆಚ್ಚುಗೆ – ಡಿಸೆಂಬರ್ ಮಧ್ಯಭಾಗದಲ್ಲಿ ಅಂತಿಮ ವರದಿ ನಿರೀಕ್ಷೆ
