– ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾಗಿ ಪೊಲೀಸರ ಮಾಹಿತಿ
ನವದೆಹಲಿ: ಪ್ಯಾರಾ ಏಷ್ಯನ್ ಗೇಮ್ಸ್ನಲ್ಲಿ (Para Asian Games) ಮೂರು ಬಾರಿ ಚಿನ್ನದ ಪದಕ ಗೆದ್ದಿದ್ದ ಕ್ರೀಡಾಪಟು ನೀರಜ್ ಯಾದವ್ (Neeraj Yadav) ಅವರು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ನವದೆಹಲಿಯ ತಮ್ಮ ನಿವಾಸದಲ್ಲಿ ನೀರಜ್ ಅವರಿಂದು (ಅ.28) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದೆಹಲಿಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಯುತ್ತಿದ್ದು, ಅವರ ಸಾವಿಗೆ ನಿಖರವಾದ ಕಾರಣ ಏನು ಎಂಬುದು ಈವರೆಗೂ ಬಹಿರಂಗವಾಗಿಲ್ಲ. ಇದನ್ನೂ ಓದಿ: ಸ್ಪೇನ್ನ ಎರಡು ಅತಿವೇಗದ ರೈಲುಗಳು ಮುಖಾಮುಖಿ ಡಿಕ್ಕಿ – 46 ಮಂದಿ ದುರ್ಮರಣ
ಎಫ್55 ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದ ನೀರಜ್ ಯಾದವ್ ಡೋಪಿಂಗ್ ನಿಷೇಧದಿಂದಾಗಿ ಇತ್ತೀಚಿಗೆ ಐಚಿ-ನಗೋಯಾದಲ್ಲಿ (Aichi Nagoya) ನಡೆದ ಪ್ಯಾರಾ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸುವ ಅವಕಾಶ ಕಳೆದುಕೊಂಡಿದ್ದರು. ಇದರಿಂದ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು. ಭಾರತೀಯ ಪ್ಯಾರಾ ಅಥ್ಲೀಟಿಕ್ಸ್ ತಂಡದ ಮುಖ್ಯ ತರಬೇತುದಾರ ಎಸ್.ಸತ್ಯನಾರಾಯಣ ಅವರು ನೀರಜ್ ಯಾದವ್ ಸಾವಿನ ಸುದ್ದಿಯನ್ನು ಖಚಿತಪಡಿಸಿ, ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.
ನೀರಜ್ ಯಾದವ್ ಅವರು ಭಾರತದ ಅತ್ಯಂತ ನಿಪುಣ ಪ್ಯಾರಾ-ಅಥ್ಲೀಟ್ಗಳಲ್ಲಿ ಒಬ್ಬರಾಗಿದ್ದರು. ಅವರು 2018ರ ಜಕಾರ್ತ ಆವೃತ್ತಿಯಲ್ಲಿ ಜಾವೆಲಿನ್ ಎಸೆತದಲ್ಲಿ ಪ್ರಶಸ್ತಿ ಗೆದ್ದಿದ್ದರು. ನಂತರ 2023ರಲ್ಲಿ ಹ್ಯಾಂಗ್ಝೌನಲ್ಲಿ ನಡೆದ ಕ್ರೀಡಾಕೂಟದಲ್ಲಿ ಜಾವೆಲಿನ್ ಮತ್ತು ಡಿಸ್ಕಸ್ ಎಸೆತ ಎರಡರಲ್ಲೂ ಚಿನ್ನದ ಪದಕಗಳನ್ನು ಪಡೆದಿದ್ದರು.ಇದನ್ನೂ ಓದಿ: ಉತ್ತರ ಪ್ರದೇಶ ಮತದಾರರ ಪಟ್ಟಿಯಲ್ಲಿ ಲೋಪ; ಹೃತಿಕ್ ಹೆಸರಿನಲ್ಲಿ 2, ಸೈಫ್ ಅಲಿ ಖಾನ್ ಹೆಸರಿನಲ್ಲಿ 3 ಐಡಿ
