ತಿರುವನಂತಪುರಂ: ನ್ಯಾಯಾಧೀಶರೊಬ್ಬರ 17 ವರ್ಷದ ಪುತ್ರನ ಮರ್ಸಿಡಿಸ್ ಕಾರು ಅಪಘಾತ (Mercedes Hit-And-Run Case) ಪ್ರಕರಣದ ತನಿಖೆಯಲ್ಲಿ ಲೋಪ ಎಸಗಿದ ಆರೋಪದಲ್ಲಿ ಕೊಚ್ಚಿ ಪೊಲೀಸ್ ಕಮಿಷನರ್ ಕಲಿರಾಜ್ ಮಹೇಶ್ ಕುಮಾರ್ ವರ್ಗಾವಣೆ ಅವರನ್ನು ಮಾಡಲಾಗಿದೆ.
ಮರ್ಸಿಡಿಸ್ ಕಾರು ಸ್ಕೂಟರ್ಗೆ ಡಿಕ್ಕಿ ಹೊಡೆದು 55 ವರ್ಷದ ಜಯಬಾಲಕೃಷ್ಣನ್ ಸಾವನ್ನಪ್ಪಿದ್ದರು. ಪ್ರಕರಣದ ನಿರ್ವಹಣೆ ಕುರಿತು ಪೊಲೀಸರ ವಿರುದ್ಧ ತೀವ್ರ ಟೀಕೆ ವ್ಯಕ್ತವಾಗಿತ್ತು. ತನಿಖೆಯಲ್ಲಿ ಲೋಪ ಆರೋಪದ ಹಿನ್ನೆಲೆಯಲ್ಲಿ ನಾಲ್ವರು ಪೊಲೀಸ್ ಸಿಬ್ಬಂದಿ ಅಮಾನತು ಮಾಡಲಾಗಿತ್ತು. ಇದನ್ನೂ ಓದಿ: ಟೋಲ್ ಪ್ಲಾಜಾ ಸಮೀಪದ ನಿವಾಸಿಗಳಿಗೆ ವಿಶೇಷ ವಾರ್ಷಿಕ ಪಾಸ್
ಹೊಸ ಪೊಲೀಸ್ ಕಮಿಷನರ್ ಆಗಿ ಆರ್.ನಿಶಾಂತಿನಿ ನೇಮಕಗೊಂಡಿದ್ದಾರೆ. ಪ್ರಕರಣದಲ್ಲಿ ನ್ಯಾಯ ದೊರಕಿಸಿಕೊಡಬೇಕು ಎಂದು ಮೃತನ ಕುಟುಂಬವು ಆಗ್ರಹಿಸಿದೆ. ಪ್ರಕರಣದ ತನಿಖೆಯನ್ನು ಜಿಲ್ಲಾ ಅಪರಾಧ ವಿಭಾಗಕ್ಕೆ ವರ್ಗಾಯಿಸಲಾಗಿದೆ. ಪ್ರಕರಣವನ್ನು ಮುಚ್ಚಿಹಾಕುವ ಸಂಚು ನಡೆದಿದೆ ಎಂದು ಜಯಬಾಲಕೃಷ್ಣನ್ ಅವರ ಕುಟುಂಬ ಆರೋಪಿಸಿದೆ.
17 ವರ್ಷದ ಹುಡುಗ ಅತಿ ವೇಗದಲ್ಲಿ ಕಾರು ಚಲಾಯಿಸುವುದನ್ನು ರೀಲ್ಸ್ ಮಾಡುವ ಉದ್ದೇಶದಿಂದ ಹೊರಗಡೆ ಹೋಗಿದ್ದ. ನ್ಯಾಯಾಧೀಶರು ತಮ್ಮ ಮಗನ ಫೋನ್ನಲ್ಲಿದ್ದ ದೃಶ್ಯಾವಳಿಗಳನ್ನು ಅಳಿಸಿಹಾಕಿಸಿದ್ದಾರೆ ಎಂದು ಆರೋಪಿಸಲಾಗಿದೆ. ಅಪಘಾತ ಸಂಭವಿಸುವ ಸ್ವಲ್ಪ ಮೊದಲು ಕಾರು ಅತಿ ವೇಗದಲ್ಲಿ ಚಲಿಸುತ್ತಿರುವುದನ್ನು ತೋರಿಸುವ ದೃಶ್ಯಾವಳಿಗಳನ್ನು ತನಿಖಾಧಿಕಾರಿಗಳು ಅವರ ಮೊಬೈಲ್ ಫೋನ್ನಿಂದಲೇ ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಆಂಧ್ರ ಕರಾವಳಿಗೆ ಅಪ್ಪಳಿಸಿದ ಅರ್ನಾಬ್ ಚಂಡಮಾರುತ – 135 ಕಿ.ಮೀ ವೇಗದಲ್ಲಿ ಬೀಸುತ್ತಿದೆ ಗಾಳಿ
ಜಖಂಗೊಂಡ ಮರ್ಸಿಡಿಸ್ ಕಾರು ಮತ್ತು ಮೃತ ಜಯಬಾಲಕೃಷ್ಣನ್ನ ನಜ್ಜುಗುಜ್ಜಾದ ಸ್ಕೂಟರ್ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಪಘಾತದ ಸಮಯದಲ್ಲಿ ವಾಹನಗಳ ವೇಗ ಅತ್ಯಧಿಕವಾಗಿದ್ದಿರಬಹುದು ಎಂದು ತಿಳಿದುಬಂದಿದೆ.
