ನವದೆಹಲಿ: ರಾಷ್ಟ್ರೀಯ ಹೆದ್ದಾರಿ ಟೋಲ್ ಪ್ಲಾಜಾಗಳ (Toll Plazas) ಸಮೀಪ ವಾಸಿಸುವವರಿಗೆ, ಆಗಾಗ್ಗೆ ಪ್ರಯಾಣಿಸಲು ಶೀಘ್ರದಲ್ಲೇ ಅಗ್ಗದ ಆಯ್ಕೆಯೊಂದು ಲಭ್ಯವಾಗಲಿದೆ. ನವೆಂಬರ್ 1 ರಿಂದ, ಅರ್ಹ ಖಾಸಗಿ ವಾಹನ ಮಾಲೀಕರಿಗಾಗಿ ಕೇಂದ್ರ ಸರ್ಕಾರವು ವಿಶೇಷ ವಾರ್ಷಿಕ ಪಾಸ್ ಅನ್ನು ಪರಿಚಯಿಸುತ್ತಿದೆ.
ಹೊಸ ಯೋಜನೆಯ ಅಡಿಯಲ್ಲಿ ಅರ್ಹ ಟೋಲ್ ಪ್ಲಾಜಾದ 20 ಕಿ.ಮೀ ವ್ಯಾಪ್ತಿಯಲ್ಲಿ ವಾಸಿಸುವ ನಿವಾಸಿಗಳು, ಆ ಪ್ಲಾಜಾ ಇರುವ ಸ್ಥಳವನ್ನು ಅವಲಂಬಿಸಿ, 1,500 ರೂ. ಅಥವಾ 3,000 ರೂ. ದರದಲ್ಲಿ ವಾರ್ಷಿಕ ಪಾಸ್ ಪಡೆಯಬಹುದು. ಇದನ್ನೂ ಓದಿ: ವೋಟ್ ಚೋರಿ ಆರೋಪಕ್ಕೆ ಉತ್ತರ, 2028ರ ಚುನಾವಣೆಗೆ ಇದು ದಿಕ್ಸೂಚಿ: ಜೋಶಿ
ನಗರ ವ್ಯಾಪ್ತಿಯ ಟೋಲ್ ಪ್ಲಾಜಾಗಳಿಗೆ ವಾರ್ಷಿಕ ಪಾಸ್ ಶುಲ್ಕ 3,000 ರೂ. ಹಾಗೂ ಗ್ರಾಮೀಣ ವ್ಯಾಪ್ತಿಯ ಟೋಲ್ ಪ್ಲಾಜಾಗಳಿಗೆ ವಾರ್ಷಿಕ ಪಾಸ್ ಶುಲ್ಕ 1,500 ರೂ. ಇದೆ.
ಸ್ಥಳೀಯ ನಿವಾಸಿಗಳಿಗೆ ಟೋಲ್ ಶುಲ್ಕ ಪಾವತಿಯಲ್ಲಿ ಅನುಕೂಲ ಕಲ್ಪಿಸಲು ಈ ಕ್ರಮಕೈಗೊಳ್ಳಲಾಗುವುದು. ವಿಶೇಷ ವಾರ್ಷಿಕ ಪಾಸ್ ವ್ಯವಸ್ಥೆ ಜಾರಿಗೆ ತರಲು ಕೇಂದ್ರ ಸರ್ಕಾರದ ನಿರ್ಧಾರಿಸಿದೆ. ಇದನ್ನೂ ಓದಿ: ಆಂಧ್ರ ಕರಾವಳಿಗೆ ಅಪ್ಪಳಿಸಿದ ಅರ್ನಾಬ್ ಚಂಡಮಾರುತ – 135 ಕಿ.ಮೀ ವೇಗದಲ್ಲಿ ಬೀಸುತ್ತಿದೆ ಗಾಳಿ
