ನವದೆಹಲಿ: ಕರ್ನಾಟಕ ವಿಧಾನ ಪರಿಷತ್ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ (MLC Election) ಎನ್ಡಿಎ (NDA) ಭರ್ಜರಿ ಜಯಭೇರಿ ಬಾರಿಸಿದ್ದು, 2028ರ ಚುನಾವಣೆಗಿದು ಇದು ಶುಭ ಸೂಚನೆಯಾಗಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಹೇಳಿದ್ದಾರೆ.
ಅರ್ಧ ರಾಜ್ಯದಲ್ಲಿ ನಡೆದ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಪ್ರಜ್ಞಾವಂತ, ಶಿಕ್ಷಕ ಮತ್ತು ಪದವಿಧರ ಮತದಾರರು ಕಾಂಗ್ರೆಸ್ ಅನ್ನು ಸಂಪೂರ್ಣ ತಿರಸ್ಕರಿಸಿದ್ದಾರೆ. ಅಂದರೆ ರಾಜ್ಯದಲ್ಲಿ ಸಂಪೂರ್ಣ ಆಡಳಿತ ವಿರೋಧಿ ಅಲೆ ಇರುವುದು ಇದರಿಂದಲೇ ಸ್ಪಷ್ಟವಾಗಿದೆ. ಮುಂಬರುವ 2028ರ ಚುನಾವಣೆಯಲ್ಲೂ ಎನ್ಡಿಎ ದಾಖಲೆಯ ಗೆಲುವಿಗೆ ಇದು ದಿಕ್ಸೂಚಿಯಾಗಿದೆ ಎಂದರು. ಇದನ್ನೂ ಓದಿ: ಚಿಕ್ಕಬಳ್ಳಾಪುರ ಕಾಂಗ್ರೆಸ್ನಲ್ಲಿ ಮುಗಿಯದ ಭಿನ್ನಮತ – ಎಐಸಿಸಿ ವೀಕ್ಷಕರ ಎದುರೇ ಸಿಡಿದೆದ್ದ ಸುಧಾಕರ್ ಬೆಂಬಲಿಗರು
ವಿಧಾನ ಪರಿಷತ್ ಚುನಾವಣೆಯಲ್ಲಿನ ಎನ್ಡಿಎ ಜಯಭೇರಿ ಶಿಕ್ಷಕ ಮತ್ತು ಪದವೀಧರ ಮತದಾರರು ಪಕ್ಷದ ಮೇಲಿಟ್ಟಿರುವ ವಿಶ್ವಾಸದ ಪ್ರತೀಕವಾಗಿದೆ ಎಂದಿರುವ ಸಚಿವರು, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಎನ್ಡಿಎ ಸದಾ ಜನರ ಆಶೋತ್ತರಗಳಿಗೆ ಸ್ಪಂದಿಸುತ್ತಾ, ಮತದಾರರ ಹಿತಾಸಕ್ತಿ ಮತ್ತು ಕ್ಷೇತ್ರದ ಅಭಿವೃದ್ಧಿಗಾಗಿ ನಿರಂತರವಾಗಿ ಶ್ರಮಿಸುತ್ತಿದೆ ಎಂದು ಹೇಳಿದರು. ಇದನ್ನೂ ಓದಿ: ಉಡುಪಿ | ಕಬ್ಬಿಣದ ರಾಡ್ನಿಂದ ತಲೆಗೆ ಹೊಡೆದು ರೌಡಿಶೀಟರ್ ಬರ್ಬರ ಹತ್ಯೆ
ವೋಟ್ ಚೋರಿ ಆರೋಪಕ್ಕೆ ಜನರೇ ಪ್ರತ್ಯುತ್ತರ ಕೊಟ್ಟಿದ್ದಾರೆ:
ಕಾಂಗ್ರೆಸ್ಸಿಗರು ವೋಟ್ ಚೋರಿ ಎಂದು ಅದೆಷ್ಟೇ ಬೊಬ್ಬೆ ಹೊಡೆದರೂ ಪ್ರಜ್ಞಾವಂತ ಮತದಾರರೇ ಇದೀಗ ಅದಕ್ಕೆ ಪ್ರತ್ಯುತ್ತರ ಕೊಟ್ಟಿದ್ದಾರೆ. ಹಾಗಿದ್ದರೂ ಕಾಂಗ್ರೆಸ್ ನಾಯಕರು ಹಾಗೂ ಅಭ್ಯರ್ಥಿಗಳು ಮತ್ತೂ ವೋಟ್ ಚೋರಿಯ ನೆಪ ಹೇಳಿ ಸೋತ ಮುಖ ಒರೆಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಟೀಕಿಸಿದರು. ಇದನ್ನೂ ಓದಿ: ಮಂದಗತಿಯ ಸ್ಟಿಂಗ್ ತನಿಖೆಗೆ ತೀವ್ರ ಅಸಮಾಧಾನ – ಸಿಸಿಬಿ ಅಧಿಕಾರಿಗಳಿಗೆ ಸಿದ್ದರಾಮಯ್ಯ ತರಾಟೆ
ಕರ್ನಾಟಕದಲ್ಲಿ ಗ್ಯಾರೆಂಟಿಗಳ ಭರವಸೆ ನೀಡಿ ಆಡಳಿತಕ್ಕೆ ಬಂದ ಕಾಂಗ್ರೆಸ್ ಕಳೆದ ಮೂರೂವರೆ ವರ್ಷದಲ್ಲಿ ಖಜಾನೆ ಖಾಲಿ ಮಾಡಿದ್ದು ಬಿಟ್ಟರೆ ಅಭಿವೃದ್ಧಿ ಮಾಡಿದ್ದೇನೂ ಇಲ್ಲ. ಕಾಂಗ್ರೆಸಿನ ದುರಾಳಿತದ ಬಗ್ಗೆ ಜನ ಭ್ರಮನಿರಸರಾಗಿದ್ದಾರೆ ಎನ್ನುವುದಕ್ಕೆ ವಿಧಾನ ಪರಿಷತ್ ಚುನಾವಣೆಯೇ ಸಾಕ್ಷಿ ಎಂದರು. ಇದನ್ನೂ ಓದಿ: ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಬಿಜೆಪಿಯ ಎಸ್.ವಿ. ಸಂಕನೂರಗೆ ಭರ್ಜರಿ ಗೆಲುವು; 3ನೇ ಬಾರಿಗೆ ಪ್ರವೇಶ
ಈ ಕಾಂಗ್ರೆಸ್ ಸರ್ಕಾರ ಜನಸಾಮಾನ್ಯರ ಮೇಲೆ ಮಿತಿ ಮೀರಿದ ಬೆಲೆ ಏರಿಕೆ ಹೇರಿ ರಾಜ್ಯವನ್ನು ಬಲು ದುಬಾರಿಯತ್ತ ಕೊಂಡೊಯ್ದಿದೆ. ಭ್ರಷ್ಟಾಚಾರ, ತುಷ್ಟೀಕರಣ, ವಾಲ್ಮೀಕಿ ನಿಗಮ, ಕೆಪಿಎಸ್ಸಿ ಹೀಗೆ ಸಾಲು ಸಾಲು ಹಗರಣಗಳಲ್ಲೇ ಹುದುಗಿ ಈಗ ಜನರಿಂದಲೂ ತಿರಸ್ಕೃತಗೊಳ್ಳುತ್ತಿದೆ ಎಂದು ಹೇಳಿದರು. ಇದನ್ನೂ ಓದಿ: ದೆಹಲಿಯಲ್ಲಿ ಹೆಚ್ಡಿಕೆ ಭೇಟಿಯಾದ ರಾಜೇಂದ್ರ – ಜೆಡಿಎಸ್ಗೆ ಶಿಫ್ಟ್ ಆಗ್ತಾರಾ ರಾಜಣ್ಣ & ಸನ್?
ಗ್ಯಾರಂಟಿಗಳ ಸುಳ್ಳು ಆಶ್ವಾಸನೆ ಮೂಲಕ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ರಾಜ್ಯದ ಅಭಿವೃದ್ಧಿ ಮರೆತು ಕೇವಲ ಭ್ರಷ್ಟಾಚಾರ ಮತ್ತು ತುಷ್ಟೀಕರಣ ರಾಜಕಾರಣದಲ್ಲಿ ತೊಡಗಿದೆ. ಸ್ಟಿಂಗ್ ಆಪರೇಶನ್ನಂತಹ ನಾಚಿಕೆಗೇಡಿನ ಕೃತ್ಯಕ್ಕೆ ಕೈಹಾಕಿದೆ. ಪ್ರಜ್ಞಾವಂತ ಮತದಾರರಾಗಿರುವ ರಾಜ್ಯದ ಶಿಕ್ಷಕರು ಹಾಗೂ ಪದವೀಧರರು ಇದೆಲ್ಲದರ ವಿರುದ್ಧ ತೀವ್ರ ಆಕ್ರೋಶಗೊಂಡಿದ್ದಾರೆ. ಈ ಚುನಾವಣಾ ಫಲಿತಾಂಶವೇ ಇದಕ್ಕೆ ನಿದರ್ಶನ ಎಂದರು. ಇದನ್ನೂ ಓದಿ: ಆಂಧ್ರ ಕರಾವಳಿಗೆ ಅಪ್ಪಳಿಸಿದ ಅರ್ನಾಬ್ ಚಂಡಮಾರುತ – 135 ಕಿ.ಮೀ ವೇಗದಲ್ಲಿ ಬೀಸುತ್ತಿದೆ ಗಾಳಿ
ರಾಜ್ಯದಲ್ಲಿ ಕಾನೂನು-ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ, ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ಸ್ತಬ್ಧಗೊಂಡಿವೆ. ರೈತರಿಗೆ ಕನಿಷ್ಠ ಬೆಳೆ ಪರಿಹಾರ ಸಹ ಕೊಡಲು ಸಾಧ್ಯವಾಗದ ರೀತಿಯಲ್ಲಿ ಖಜಾನೆ ಬರಿದು ಮಾಡಿರುವುದನ್ನು ಮನಗಂಡಿರುವ ವಿದ್ಯಾವಂತ ಸಮಾಜವು ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳನ್ನು ತಿರಸ್ಕರಿಸಿ, ಪ್ರಧಾನಿ ಮೋದಿ ನೇತೃತ್ವದ ಅಭಿವೃದ್ಧಿ ಪರ ಆಡಳಿತಕ್ಕೆ ಹಾಗೂ ಎನ್ಡಿಎ ಮೈತ್ರಿಕೂಟಕ್ಕೆ ಅಭೂತಪೂರ್ವ ಬೆಂಬಲ ಸೂಚಿಸಿದೆ ಎಂದು ಹರಿಹಾಯ್ದರು. ಇದನ್ನೂ ಓದಿ: ನ.1 ರಂದು ಥಿಯೇಟರ್ಗಳಲ್ಲಿ ಕನ್ನಡ ಸಿನಿಮಾ ಮಾತ್ರ ಪ್ರದರ್ಶನ ಆಗ್ಬೇಕು: ಕರವೇ ಪ್ರವೀಣ್ ಶೆಟ್ಟಿ ಆಗ್ರಹ
ವಿಜೇತರಿಗೆ ಅಭಿನಂದನೆ:
ಪಶ್ಚಿಮ ಪದವೀಧರ ಕ್ಷೇತ್ರದಿಂದ ಗೆಲುವು ಸಾಧಿಸಿದ ಸಂಕನೂರು, ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಎಂ.ಪಿ.ರಂಗನಾಥ್, ಈಶಾನ್ಯ ಶಿಕ್ಷಕರ ಕ್ಷೇತ್ರದಿಂದ ಶಶಿಲ್ ನಮೋಶಿ ಹಾಗೂ ಆಗ್ನೇಯ ಪದವೀಧರರ ಕ್ಷೇತ್ರದದಿಂದ ಗೆಲುವು ಸಾಧಿಸಿದ ಕೆ.ಎಂ.ಸುರೇಶ್ ಅವರಿಗೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿರುವ ಶಿಕ್ಷಣ ಸಚಿವರು, ಗೆಲುವಿಗೆ ಶ್ರಮಿಸಿದ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಗೆ ಸಹ ಧನ್ಯವಾದ ತಿಳಿಸಿದ್ದಾರೆ. ಇದನ್ನೂ ಓದಿ: ಯುವತಿಯ ವಿಡಿಯೋ ಮಾಡಿದ ಆರೋಪ – ಮೆಟ್ರೋ ನಿಲ್ದಾಣದ ಒಳಗೆ ಯುವತಿಯರಿಗೆ ಸೇಫ್ಟಿ ಇಲ್ವಾ?
