ಬೆಂಗಳೂರು: ರಾಜ್ಯದ ಎಲ್ಲಾ ಚಿತ್ರಮಂದಿರಗಳಲ್ಲಿ ನವೆಂಬರ್ 1 ರಿಂದ ಇಡೀ ತಿಂಗಳು ಪೂರ್ತಿ ಕನ್ನಡ ಚಿತ್ರಗಳು ಮಾತ್ರ ಪ್ರದರ್ಶನ ಮಾಡಬೇಕು ಅಂತ ಕರವೇ ಪ್ರವೀಣ್ ಶೆಟ್ಟಿ ಆಗ್ರಹಿಸಿದ್ದಾರೆ. ಚಿತ್ರಮಂದಿರಗಳಲ್ಲಿ ಕನ್ನಡ ಚಿತ್ರ ಪ್ರದರ್ಶಿಸದಿದ್ದರೆ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ನವೆಂಬರ್ 1ರಿಂದ ಒಂದು ತಿಂಗಳು ಪರಭಾಷಾ ಚಿತ್ರಗಳಿಗೆ ಬ್ರೇಕ್ ಹಾಕಬೇಕು. ರಾಜ್ಯದ ಎಲ್ಲಾ ಚಿತ್ರಮಂದಿರಗಳಲ್ಲಿ ಕನ್ನಡ ಚಿತ್ರ ಪ್ರದರ್ಶನ ಕಡ್ಡಾಯಗೊಳಿಸಬೇಕು ಎಂದು ಕನ್ನಡ ರಾಜ್ಯೋತ್ಸವಕ್ಕೆ ಕರವೇ ಅಧ್ಯಕ್ಷ ಪ್ರವೀಣ್ ಶೆಟ್ಟಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಕನ್ನಡ ರಾಜ್ಯೋತ್ಸವದಂದು ಕನ್ನಡ ಚಿತ್ರಗಳೇ ಪ್ರದರ್ಶನವಾಗಬೇಕು. ಕನ್ನಡ ಚಿತ್ರ ಪ್ರದರ್ಶಿಸದ ಚಿತ್ರಮಂದಿರಗಳ ಪ್ರದರ್ಶನ ರದ್ದು ಮಾಡುವ ಎಚ್ಚರಿಕೆಯನ್ನು ನೀಡಿದ್ದಾರೆ.
