ನವದೆಹಲಿ: ನವೆಂಬರ್ 1ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಆಯೋಜಿಸಲು ಉದ್ದೇಶಿಸಿರುವ ಇಂಡಿ (INDIA) ಮೈತ್ರಿಕೂಟದ ಬೃಹತ್ ಪ್ರತಿಭಟನಾ ರ್ಯಾಲಿಯನ್ನು ದೀಪಾವಳಿ ಹಬ್ಬದ ನಂತರ ಮುಂದೂಡುವಂತೆ ಕೋರಿ ದೆಹಲಿಯ ವ್ಯಾಪಾರಿ ಸಂಘಟನೆಗಳು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ(Rahul Gandhi) ಹಾಗೂ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(Mallikarjun Kharge) ಅವರಿಗೆ ಮತ್ತೊಮ್ಮೆ ಪತ್ರ ಬರೆದು ಮನವಿ ಮಾಡಿವೆ.
ಸೋಮವಾರ ಈ ಕುರಿತ ಮನವಿಯನ್ನು ರಾಹುಲ್ ಗಾಂಧಿ ಅವರು ತಳ್ಳಿಹಾಕಿದ ಬೆನ್ನಲ್ಲೇ ವ್ಯಾಪಾರಿಗಳು ಮತ್ತೆ ಈ ಒತ್ತಾಯ ಮುಂದಿಟ್ಟಿದ್ದಾರೆ. ದೆಹಲಿಯ ಪ್ರಮುಖ ವ್ಯಾಪಾರಿಗಳ ಒಕ್ಕೂಟವಾದ ‘ಚೇಂಬರ್ ಆಫ್ ಟ್ರೇಡ್ ಅಂಡ್ ಇಂಡಸ್ಟ್ರಿ (CTI) ದೀಪಾವಳಿ ಹಬ್ಬದ ಪ್ರಮುಖ ಶಾಪಿಂಗ್ ಋತುವಿನಲ್ಲಿ ಇಂತಹ ಬೃಹತ್ ಸಮಾವೇಶ ನಡೆದರೆ ವ್ಯಾಪಾರ-ವಹಿವಾಟು ಸಂಪೂರ್ಣ ಹಳಿ ತಪ್ಪಲಿದ್ದು, ಅಂದಾಜು 10,000 ಕೋಟಿ ರೂ. ನಷ್ಟವಾಗುವ ಭೀತಿ ವ್ಯಕ್ತಪಡಿಸಿದೆ.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಹಾಗೂ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ವಿರೋಧಿಸಿ ‘ಇಂಡಿಯಾ’ ಬ್ಲಾಕ್ ನವೆಂಬರ್ 1ರಂದು ರಾಮಲೀಲಾ ಮೈದಾನದಲ್ಲಿ ಬೃಹತ್ ರ್ಯಾಲಿ ಹಮ್ಮಿಕೊಂಡಿದೆ. ಈ ಸಮಾವೇಶದಲ್ಲಿ ಸುಮಾರು 10 ಲಕ್ಷ ಜನರು ಹಾಗೂ 15 ಸಾವಿರದಿಂದ 20 ಸಾವಿರ ಬಸ್ಗಳು ಭಾಗವಹಿಸುವ ನಿರೀಕ್ಷೆಯಿದ್ದು, ಮಧ್ಯ ದೆಹಲಿಯಲ್ಲಿ ಸಂಚಾರ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತಗೊಳ್ಳುವ ಸಾಧ್ಯತೆಯಿದೆ.
#WATCH | Delhi: Chamber of Trade & Industry (CTI) Chairman Brijesh Goyal says, “The Ramlila Maidan, where the upcoming rally is scheduled to take place, is surrounded within a five-kilometer radius by 20 major wholesale markets. Goods worth crores are dispatched daily from these hubs to destinations across the country and abroad. Now, it is being claimed that 1 million (10 lakh) people will attend the rally at Ramlila Maidan—a venue with a capacity of only 50,000. If 1 million people descend upon a space designed for 50,000, won’t the entire infrastructure, including transportation, collapse… The police will likely shut down markets, close metro stations, and set up barricades; consequently, the 3,00,000 to 4,00,000 shoppers who typically visit these markets daily will be unable to do so. The city’s trade sector has already suffered a loss of Rs 3,000 crore over the last 25 days, and we estimate that this rally could result in a further loss of Rs 10,000 crore. For this reason, we have written a letter today to the Congress National President Mallikarjun Kharge regarding the statement he made yesterday—in response to our (CTI’s) concerns—that they would consider the traders’ demands, we welcome this gesture… We urge him—in the upcoming meeting of the ‘INDIA’ bloc—to pass a resolution to reschedule the November 1st rally to a date after Diwali, keeping in mind the livelihoods of 2 million (20 lakh) traders…”
— ANI (@ANI) October 26, 2026
ರಾಮಲೀಲಾ ಮೈದಾನದಿಂದ 5 ಕಿ.ಮೀ ವ್ಯಾಪ್ತಿಯಲ್ಲಿರುವ ಚಾಂದಿನಿ ಚೌಕ್, ಸದರ್ ಬಜಾರ್, ಚಾವ್ಡಿ ಬಜಾರ್ ಹಾಗೂ ಕಾಶ್ಮೀರಿ ಗೇಟ್ನಂತಹ ಬೃಹತ್ ಸಗಟು ಮತ್ತು ಚಿಲ್ಲರೆ ಮಾರುಕಟ್ಟೆಗಳು ಭಾರೀ ಸಂಕಷ್ಟಕ್ಕೆ ಸಿಲುಕಲಿವೆ. ಪೊಲೀಸರ ಬ್ಯಾರಿಕೇಡ್ಗಳು, ರಸ್ತೆ ಬಂದ್ ಹಾಗೂ ಮೆಟ್ರೋ ನಿಲ್ದಾಣಗಳ ನಿರ್ಬಂಧದಿಂದಾಗಿ ಗ್ರಾಹಕರ ಆಗಮನ ಗಣನೀಯವಾಗಿ ಕುಸಿಯಲಿದೆ.
ಧಂತೇರಸ್ (ನ.6) ಮತ್ತು ದೀಪಾವಳಿ (ನ.8) ಹಬ್ಬಕ್ಕೆ ಕೇವಲ ಒಂದು ವಾರ ಮುಂಚಿತವಾಗಿ ಹಬ್ಬದ ಶಾಪಿಂಗ್ ಉತ್ತುಂಗದಲ್ಲಿರುತ್ತದೆ. ಇಂತಹ ಸೂಕ್ಷ್ಮ ಸಮಯದಲ್ಲಿ ಬೃಹತ್ ರ್ಯಾಲಿ ನಡೆಸಿದರೆ ರಾಷ್ಟ್ರ ರಾಜಧಾನಿಯ ಸಗಟು ಹಾಗೂ ಚಿಲ್ಲರೆ ಮಾರುಕಟ್ಟೆಗಳು ತೀವ್ರ ನಷ್ಟ ಅನುಭವಿಸಬೇಕಾಗುತ್ತದೆ. ಮೆಟ್ರೋ ನಿಲ್ದಾಣಗಳು ಮತ್ತು ರಸ್ತೆಗಳು ಬಂದ್ ಆದರೆ ಸುಮಾರು 20 ಲಕ್ಷ ವ್ಯಾಪಾರಿಗಳ ವ್ಯಾಪಾರಕ್ಕೆ ಪೆಟ್ಟು ಬೀಳಲಿದೆ. ಹೀಗಾಗಿ ಪ್ರತಿಭಟನೆಯನ್ನು ದೀಪಾವಳಿಯ ನಂತರದ ದಿನಕ್ಕೆ ಮುಂದೂಡಬೇಕು ಎಂದು ಮನವಿ ಮಾಡಿದ್ದಾರೆ.
To every trader in Delhi: We love you and hear you.
The Govt shut the metro, sealed our roads and locked down our capital.
With a stolen vote nothing is safe – your shop, your savings, your children’s future.
Tell Modi to sack accused no. 4, Gyanesh Kumar and the protests will stop in 30 seconds.
दिल्ली के हर व्यापारी से: हम आपसे प्यार करते हैं, आपकी बात सुन रहे हैं।
मेट्रो सरकार ने बंद की, सड़कें सरकार ने सील की, राजधानी पर ताला सरकार ने लगाया।
जब वोट ही चोरी हो जाए, तो कुछ भी सुरक्षित नहीं – न आपकी दुकान, न आपकी बचत, न आपके बच्चों का भविष्य।
मोदी जी से कहिए – आरोपी नंबर 4, ज्ञानेश कुमार को हटाएं, 30 सेकंड में आंदोलन रुक जाएगा।
— Rahul Gandhi (@RahulGandhi) October 26, 2026
ರಾಹುಲ್ ಹೇಳಿದ್ದೇನು?
ಈ ಮನವಿಗೆ ನಿನ್ನೆ ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ ಅವರು, ವ್ಯಾಪಾರಿಗಳ ಕಷ್ಟ ತಮಗೆ ಅರ್ಥವಾಗುತ್ತದೆ ಎಂದಿದ್ದಾರೆ. ಆದರೆ, ದೇಶದಲ್ಲಿ ಪ್ರಜಾಪ್ರಭುತ್ವ ಮತ್ತು ಜನರ ಮತಗಳೇ ಸುರಕ್ಷಿತವಾಗಿಲ್ಲದಿದ್ದರೆ ಯಾರ ಭವಿಷ್ಯವೂ ಉಳಿಯುವುದಿಲ್ಲ ಎಂದು ಹೇಳುತ್ತಾ, “ಪ್ರಧಾನಿ ನರೇಂದ್ರ ಮೋದಿಯವರು ಮುಖ್ಯ ಚುನಾವಣಾ ಆಯುಕ್ತರಾದ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆ ಪಡೆದರೆ, ಕೇವಲ 30 ಸೆಕೆಂಡುಗಳಲ್ಲಿ ಈ ಪ್ರತಿಭಟನೆಯನ್ನು ನಿಲ್ಲಿಸಲಾಗುವುದು” ಎಂದು ಹೇಳುವ ಮೂಲಕ ಪ್ರತಿಭಟನೆಯನ್ನು ಮುಂದೂಡುವ ವ್ಯಾಪಾರಿಗಳ ಬೇಡಿಕೆಯನ್ನು ಸದ್ಯಕ್ಕೆ ನಿರಾಕರಿಸಿದ್ದಾರೆ.
