ಬಿಗ್ಬಾಸ್ ಮನೆಯಲ್ಲಿ ಈ ವಾರ ನಾಮಿನೇಷನ್ ಬಿಸಿ ಜೋರಾಗಿದೆ. ಕ್ಯಾಪ್ಟನ್ ಆಯ್ಕೆ ಮಾಡಿದವರ ಕೈಗೆ ನಾಮಿನೇಷನ್ ಪವರ್ ನೀಡುತ್ತಿದ್ದು, ದೊಡ್ಮನೆಯಲ್ಲಿ ಕಿಡಿ ಹೊತ್ತಿಕೊಂಡಿದೆ.
ಈ ವಾರ ಬಿಗ್ಬಾಸ್ ನಾಮಿನೇಷನ್ಗೆ ವಿಭಿನ್ನವಾದ ಟಾಸ್ಕ್ವೊಂದನ್ನು ನೀಡಿದ್ದಾರೆ. ಮನೆಯವರನ್ನು ನಾಮಿನೇಟ್ ಮಾಡಲು ಮನೆಗೆ ರೈಲು ಬಂದಿದ್ದು, ಅದರ ಹೆಸರು ಶೆಟ್ಟಿ ಎಕ್ಸ್ಪ್ರೆಸ್. ಇದರ ಚಾಲಕರು ಯಾರಾಗ್ತಾರೋ ಅವರಿಗೆ ನಾಮಿನೇಷನ್ ಪವರ್. ಇದನ್ನೂ ಓದಿ: ಇಂದೇ ಸಿಹಿ ಸುದ್ದಿ ಕೊಡಿ ಅಂದ್ರೆ ಎಲ್ಲಿಂದ ಹಣ ನೀಡೋಣ? – ಸಿಎಂ ಡಿಕೆಶಿ
ಮುಂದಿನ ನಿಲ್ದಾಣ: Nomination!
ಬಿಗ್ ಬಾಸ್ | ಸೋಮ – ಶುಕ್ರ ರಾತ್ರಿ 9:30 | ಶನಿ – ಭಾನು ರಾತ್ರಿ 9:00
ಫುಲ್ಸ್ಟಾಪ್ ಇಲ್ಲದೇ 24X7 ನಾನ್ ಸ್ಟಾಪ್ ಮನರಂಜನೆ #JioHotstarನಲ್ಲಿ – https://t.co/96hibtGUwq
#BBK13 #ColorsKannada #ಕಲರ್ಫುಲ್ಕತೆ #colorfulstory #KichchaSudeepa #CKBBKPromo https://t.co/Zdt98BtIlj
— Colors Kannada (@ColorsKannada) October 26, 2026
ಬಸರ್ ಆದ ತಕ್ಷಣ ಸ್ಪರ್ಧಿಗಳು ಓಡಿಬಂದು ಚಾಲಕರ ಸೀಟು ಹಿಡಿದುಕೊಳ್ಳಬೇಕು. ಅದರಂತೆ ಮೊದಲು ಕುಳಿತವರಿಗೆ ಪವರ್ ಸಿಗುತ್ತದೆ. ಇಬ್ಬರು ಚಾಲಕರನ್ನು ಬಿಟ್ಟು ಇನ್ನುಳಿದವರು ರೈಲಿನ ಬೋಗಿಯಲ್ಲಿ ಕುಳಿತುಕೊಳ್ಳುತ್ತಾರೆ. ಆಗ ಕ್ಯಾಪ್ಟನ್ ಸೌಂದರ್ಯ ತಮ್ಮ ಇಷ್ಟದಂತೆ ಒಬ್ಬ ಚಾಲಕನಿಗೆ ನಾಮಿನೇಷನ್ ಮಾಡುವ ವಿಶೇಷ ಅಧಿಕಾರವನ್ನು ನೀಡುತ್ತಾರೆ. ಕ್ಯಾಪ್ಟನ್ನಿಂದ ಅಧಿಕಾರ ಪಡೆದ ಸ್ಪರ್ಧಿ, ರೈಲಿನಲ್ಲಿದ್ದ ಇತರ ಸ್ಪರ್ಧಿಗಳಲ್ಲಿ ಒಬ್ಬರನ್ನು ನೇರವಾಗಿ ನಾಮಿನೇಟ್ ಮಾಡುತ್ತಾರೆ.
ಕಳೆದ ವಾರ ಗಾನವಿ ಅವರಿಂದಲೇ ನಾಮಿನೇಟ್ ಆಗಿದ್ದ ಆಸಿಯಾ ಈ ವಾರವೂ ಅವರಿಂದಲೇ ನಾಮಿನೇಟ್ ಆಗಿದ್ದಾರೆ. ಇತ್ತ ಸೋನಿಕಾ ಕಿರಣ್ ಅವರನ್ನು ಹಾಗೂ ಯಶಸ್ ಕುಮಾರಿಯನ್ನು ನಾಮಿನೇಟ್ ಮಾಡುತ್ತಾರೆ.ಇದನ್ನೂ ಓದಿ: ಯಲಹಂಕದ ನೆಲಕದಿರೇನಹಳ್ಳಿಯ 59.39 ಎಕರೆ ಭೂಸ್ವಾಧೀನ ರದ್ದುಗಳಿಸಿದ ಸುಪ್ರೀಂ
