* ಧನ್ವೀರ್-ವಿಜಯಲಕ್ಷ್ಮಿ ಜಗಳದ ಅಸಲಿ ಸತ್ಯ ಬಿಚ್ಚಿಟ್ಟ ದರ್ಶನ್ ಆಪ್ತ
ನಟ ಧನ್ವೀರ್ (Dhanveer) ಮತ್ತು ವಿಜಯಲಕ್ಷ್ಮಿ ಅವರ ಜಗಳದ ಅಸಲಿ ಸತ್ಯವನ್ನು ದರ್ಶನ್ ಆಪ್ತ ವೇಲು ನಾಯ್ಕರ್ ಬಿಚ್ಚಿಟ್ಟಿದ್ದಾರೆ. ಹಣ ಕೊಡುವಂತೆ ದರ್ಶನ್ (Darshan) ಹೇಳಿದರೂ ಧನ್ವೀರ್ ದುಡ್ಡು ಕೊಡ್ತಿಲ್ಲ ಎಂದು ವೇಲು ಆರೋಪಿಸಿದರು.
ಧನ್ವೀರ್, ವಿಜಯಲಕ್ಷ್ಮಿ ಅವರ ಕರೆ ಪಿಕ್ ಮಾಡ್ತಿಲ್ಲ. ಹಣ ಕೇಳಿದಾಗ ಧನ್ವೀರ್ ಅಂತರ ಕಾಯ್ದುಕೊಳ್ಳುತ್ತಿದ್ದರು. ಒಂದೆರೆಡು ವರ್ಷದ ಹಿಂದಿನ ಹಣಕಾಸಿನ ವಿಚಾರ. ನೀವು ಪರಿಚಯ ಅಲ್ವಾ, ಅದ್ಕೆ ಒಮ್ಮೆ ಮಾತನಾಡೋಕೆ ವಿಜಯಲಕ್ಷ್ಮಿ ಅವರು ಹೇಳಿದರು. ಧನ್ವೀರ್ ಅವರ ತಂದೆ ಜೊತೆ ಮಾತನಾಡಿದ್ದೆ. ನಾನು ಮಗನ ಜೊತೆ ಮಾತನಾಡ್ತೇನೆ ಅಂತ ಹೇಳಿದ್ರು. ಧನ್ವೀರ್ ಹಣ ವಾಪಾಸ್ ಕೊಡ್ತಿಲ್ಲ ಅನ್ನೋದು ದರ್ಶನ್ಗೆ ಗೊತ್ತಾದಾಗ, ಧನ್ವೀರ್ ತಂದೆ ಜೊತೆ ಮಾತನಾಡೋಕೆ ನನಗೆ ಹೇಳಿದ್ರು. ಜೈಲಲ್ಲಿ ಹಣ ಕೊಡುವಂತೆ ದರ್ಶನ್ ಧನ್ವೀರ್ಗೆ ಹೇಳಿದ್ರು. ಏನ್ ಚಿನ್ನ.. ಮನೆಯವ್ರಿಗೆ ತಲುಪಿಸಿ ಅಂದಿದ್ನಲ್ಲ ಅಂದ್ರು. ವೇಲು ಅವರಿಗೆ ತಲುಪಿಸಿ.. ಆಮೇಲೆ ಮಾತಾಡ್ತೀನಿ ನಿನ್ನ ಜೊತೆ ಅಂತ ಧನ್ವೀರ್ಗೆ ಹೇಳಿದ್ರು. ಆಮೇಲೆಯಿಂದ ಫೋನ್ಗೆ ಧನ್ವೀರ್ ಸಿಗ್ಲಿಲ್ಲ. ಫೋನಲ್ಲಿ ಹಣ ಕೇಳಿದ್ದಕ್ಕೆ ಇದರಲ್ಲಿ ಮಧ್ಯೆ ಪ್ರವೇಶ ಮಾಡಬೇಡಿ, ಇದು ನಮ್ ವಿಚಾರ ಅಂತ ಧನ್ವೀರ್ ಹೇಳಿದ್ರು ಎಂದು ವೇಲು ನಾಯ್ಕರ್ ಅಸಲಿ ವಿಚಾರವನ್ನು ಬಿಚ್ಚಿಟ್ಟಿದ್ದಾರೆ. ಇದನ್ನೂ ಓದಿ: ದರ್ಶನ್, ಧನ್ವೀರ್ ಸ್ನೇಹ ಶುರುವಾಗಿದ್ದು ಹೇಗೆ..?
ಹಣದ ವಿಚಾರ ಬಿಟ್ಟು ಬೇರೆ ಮಾತನಾಡಿ ಅಂತಿದ್ರು ಧನ್ವೀರ್. ಹಣ ಕೇಳ್ತೀರಿ ಅಂತಲೇ ಫೋನ್ ಪಿಕ್ ಮಾಡಲ್ಲ ನಿಮ್ದು ಅಂತಿದ್ರು. ಹಣದ ವಿಚಾರದಲ್ಲಿ ಸ್ಪಂದಿಸುತ್ತಿರಲಿಲ್ಲ. ಹಬ್ಬದ ದಿನ ಐದಾರು ಸಲ ಧನ್ವೀರ್ ತಂದೆಗೆ ಕರೆ ಮಾಡಿದ್ರು. ಅವರು ಕೂಡ ಕರೆ ಪಿಕ್ ಮಾಡಿಲ್ಲ. ಆಗ ಮನೆಗೆ ಬರ್ತಿದ್ದೇನೆ ಎಂದು ಮೆಸೇಜ್ ಮಾಡಿ ಮನೆಗೆ ಹೋಗಿದ್ದಾರೆ. ವಿಜಯಲಕ್ಷ್ಮಿ ಅವರನ್ನು ಹೆದರಿಸ್ತಿದ್ದಾರೆ ಅಂತನೇ ಅರ್ಥ ಎಂದು ಧನ್ವೀರ್ ವಿರುದ್ಧ ಬೇಸರ ಹೊರಹಾಕಿದರು.
ಡಿ.ಕೆ.ಶಿವಕುಮಾರ್ ಅವರು ನಮ್ ಮನೆ ಬಾಗಿಲಿಗೆ ಬಂದು ಕಾಯ್ತಿದ್ರು ಅಂತ ಆಡಿಯೊದಲ್ಲಿ ಉಲ್ಲೇಖ ಆಗಿರುವ ಬಗ್ಗೆ ವೇಲು ನಾಯ್ಕರ್ ಮಾತನಾಡಿ, ಸಿಎಂ ಅವರ ಮನೆ ಮುಂದೆ ನಮ್ಮಂತ ಸಾವಿರಾರು ಜನ ಕಾಯ್ತೀವಿ. ಈ ಮಾತು ಚೈಲ್ಡೀಶ್ ಅನ್ಸುತ್ತೆ. ಕಾಂಗ್ರೆಸ್ ಕಾರ್ಯಕರ್ತರು ಸಾಕಷ್ಟು ಜನ ಫೋನ್ ಮಾಡಿ ಮಾತಾಡ್ತಿದ್ದಾರೆ. ಧನ್ವೀರ್ಗೆ ಬುದ್ದಿ ಹೇಳಿ ಅಂತಾ ನನ್ಗೆ ಫೋನ್ ಮಾಡಿ ಹೇಳ್ತಿದ್ದಾರೆ. ನಮ್ಮ ನಾಯಕರ ಬಗ್ಗೆ ಮಾತಾಡ್ತಾನ ಅವ್ನು ಅಂತಾ ಸಿಟ್ಟಾಗಿದ್ದಾರೆ. ಧನ್ವೀರ್ ಈಥರ ಬುದ್ದಿಯನ್ನ ಬಿಡ್ಬೇಕು ಎಂದರು. ಇದನ್ನೂ ಓದಿ: ಆಪ್ತ ಧನ್ವೀರ್ ಮೇಲೆ ಸಿಟ್ಟು ಹೊರಹಾಕಿದ್ರಾ ದರ್ಶನ್ – ನಮ್ಮ ಜೊತೆಗಿದ್ದವರೇ ಮುಳ್ಳಾಗ್ತಾರೆ ಅಂತ ದರ್ಶನ್ ಅಸಮಾಧಾನ
ದರ್ಶನ್ ಹೇಳಿದ್ದೊಂದೇ ಮಾತು. ಜೊತೆಗಿದ್ದವ್ರೇ ಬೆನ್ನಿಗೆ ಚೂರಿ ಹಾಕಿದ್ರು ಅಂತ ದರ್ಶನ್ ನೊಂದುಕೊಂಡು ಮಾತನಾಡಿದ್ದಾರೆಂದು ವೇಲು ನಾಯ್ಕರ್ ತಿಳಿಸಿದರು.
