ರಾಜ್ಯದಲ್ಲಿ ಹಿಂಗಾರು ಮಳೆಯ ಅಬ್ಬರ ಮುಂದುವರಿಯುವ ಸಾಧ್ಯತೆಯಿದ್ದು, ಅಕ್ಟೋಬರ್ 26ರಂದು ಬೆಂಗಳೂರು ಸೇರಿ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮಳೆಯಾಗುವ ಮುನ್ಸೂಚನೆಯಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಚಾಮರಾಜನಗರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದ್ದು, ಕೆಲವೆಡೆ ಗುಡುಗು ಸಹಿತ ಮಳೆಯಾಗಬಹುದು. ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಿಗೆ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ ಎಂದು ವರದಿಯಾಗಿದೆ.
ಉತ್ತರ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾಗುವ ಸಾಧ್ಯತೆಯಿದ್ದು, ಕೆಲವೆಡೆ ಬಲವಾದ ಗಾಳಿ ಬೀಸಬಹುದು. ಸಾರ್ವಜನಿಕರು ಹವಾಮಾನ ಇಲಾಖೆಯ ಮುನ್ಸೂಚನೆ ಗಮನಿಸುವಂತೆ ಸೂಚಿಸಲಾಗಿದೆ.
ಬೆಂಗಳೂರು ನಗರದಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಹಗುರ ಮಳೆಯಾಗುವ ಸಾಧ್ಯತೆಯಿದೆ. ಗರಿಷ್ಠ 29 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 21 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ.

ನಗರಗಳ ಹವಾಮಾನ ವರದಿ:
ಬೆಂಗಳೂರು: 29-21
ಮಂಗಳೂರು: 31-25
ಶಿವಮೊಗ್ಗ: 29-21
ಬೆಳಗಾವಿ: 30-20

ಮೈಸೂರು: 30-21
ಮಂಡ್ಯ: 30-21
ಮಡಿಕೇರಿ: 27-20
ರಾಮನಗರ: 30-21
ಹಾಸನ: 28-20

ಚಾಮರಾಜನಗರ: 29-21
ಚಿಕ್ಕಬಳ್ಳಾಪುರ: 29-20
ಕೋಲಾರ: 29-20
ತುಮಕೂರು: 29-21
ಉಡುಪಿ: 30-25

ಕಾರವಾರ: 30-25
ಚಿಕ್ಕಮಗಳೂರು: 27-19
ದಾವಣಗೆರೆ: 31-22
ಹುಬ್ಬಳ್ಳಿ: 31-21
ಚಿತ್ರದುರ್ಗ: 30-21

ಹಾವೇರಿ: 30-21
ಬಳ್ಳಾರಿ: 33-23
ಗದಗ: 31-22
ಕೊಪ್ಪಳ: 32-22
ರಾಯಚೂರು: 34-23

ಯಾದಗಿರಿ: 34-22
ವಿಜಯಪುರ: 33-22
ಕಲಬುರಗಿ: 34-22
ಬಾಗಲಕೋಟೆ: 33-22
