ಪಂಚಾಂಗ
ಸಂವತ್ಸರ: ಪರಾಭವನಾಮ
ಅಯನ: ದಕ್ಷಿಣಾಯಣ
ಋತು: ಶರತ್
ಮಾಸ: ಆಶ್ವಯುಜ
ಪಕ್ಷ: ಶುಕ್ಲ
ತಿಥಿ: ಚತುರ್ದಶೀ
ನಕ್ಷತ್ರ: ರೇವತಿ
ರಾಹುಕಾಲ: 4:32 – 6:00
ಗುಳಿಕಕಾಲ: 3:04 – 4:32
ಯಮಗಂಡಕಾಲ: 12:08 – 1:36
ಮೇಷ: ಬುದ್ಧಿಮಂದವಾಗುವ ಸಾಧ್ಯತೆ, ಮಾನಸಿಕ ಒತ್ತಡ, ಹೋಟೆಲ್ ಕ್ಷೇತ್ರದವರಿಗೆ ಲಾಭ.
ವೃಷಭ: ವ್ಯಾಪಾರಿಗಳಿಗೆ ಮೋಸ ಸಾಧ್ಯತೆ, ತಂದೆಯಿಂದ ಕಲಿಕೆಗೆ ಸಹಾಯ, ಆರ್ಥಿಕ ವಿಷಯಗಳನ್ನು ನಿರ್ಲಕ್ಷಿಸದಿರಿ.
ಮಿಥುನ: ಋಣ ಮುಕ್ತರಾಗಲು ಚಿಂತನೆ, ಕುಟುಂಬದಲ್ಲಿ ಅಪವಾದ, ಆತುರತೆ ಬೇಡ.
ಕಟಕ: ಊಹಾಪೋಹಗಳಿಗೆ ಕಡಿವಾಣ ಹಾಕಿ, ಶುಭಸುದ್ದಿಯನ್ನು ಆಲಿಸುವಿರಿ, ತಾಯಿಯೊಂದಿಗೆ ಮನಸ್ತಾಪ.
ಸಿಂಹ: ರಾತ್ರಿಯ ಪ್ರಯಾಣಗಳು ಬೇಡ, ಬೇರೆಯವರೊಂದಿಗೆ ಹೋಲಿಸಿಕೊಳ್ಳಬೇಡಿ, ಅರ್ಧನಿಂತ ಕೆಲಸಗಳು ಪೂರ್ಣಗೊಳ್ಳುತ್ತವೆ.
ಕನ್ಯಾ: ತೀರ್ಥಕ್ಷೇತ್ರಗಳ ಭೇಟಿ, ವಾಕ್ ವಿಚಾರದಲ್ಲಿ ಎಚ್ಚರ, ಅತಿಥಿಗಳ ಆಗಮನ.
ತುಲಾ: ಮಕ್ಕಳೊಂದಿಗೆ ಬಾಂಧವ್ಯ ವೃದ್ಧಿಸಿಕೊಳ್ಳಿ, ರೈತರಿಗೆ ನೀರಿನ ಯೋಗ, ಸಾಹಿತಿಗಳಿಗೆ ಶುಭ.
ವೃಶ್ಚಿಕ: ಸಿಹಿತಿಂಡಿ ಮಾರಾಟಗಾರರಿಗೆ ಲಾಭ, ಕುಟುಂಬದವರಿಗೆ ಸುಳ್ಳನ್ನು ಹೇಳಬೇಡಿ, ದೇವತಾ ಕಾರ್ಯಗಳಲ್ಲಿ ಭಾಗಿ.
ಧನಸ್ಸು: ಮನಸ್ಸಿನಲ್ಲಿನ ಚಿಂತೆ, ಖಿನ್ನತೆ ಕಾಡುತ್ತದೆ, ಹಾಲು ವ್ಯಾಪಾರಿಗಳಿಗೆ ಲಾಭ, ಮಕ್ಕಳಲ್ಲಿ ಅನಾರೋಗ್ಯ.
ಮಕರ: ಕುಟುಂಬದಲ್ಲಿ ಭಿನ್ನಾಭಿಪ್ರಾಯ, ವಿವಾಹ ವಿಚಾರಗಳಲ್ಲಿ ಶುಭ, ಮನೆ ನಿರ್ಮಾಣದ ಯೋಜನೆ.
ಕುಂಭ: ಉದರದ ದೋಷಗಳು ಬಾಧಿಸುತ್ತದೆ, ಆತ್ಮೀಯರು ದೂರಾಗುವರು, ಅತಿಯಾದ ಆಸೆಗಳನ್ನು ಇಡಬೇಡಿ.
ಮೀನ: ರಸಗೊಬ್ಬರ ವ್ಯಾಪಾರಿಗಳಿಗೆ ಶುಭ, ಸ್ನೇಹಿತರೊಂದಿಗೆ ಒಡನಾಟ, ನಂಬಿಕೆದ್ರೋಹದ ಸಾಧ್ಯತೆ.
