ಬೆಳಗಾವಿ: ಪ್ರತಿಷ್ಠಿತ ಪ್ಯಾರಾ ಏಷ್ಯನ್ ಗೇಮ್ಸ್ನ(Para Asian Games) ಅಂತಾರಾಷ್ಟ್ರೀಯ ಈಜು(Swimming) ಸ್ಪರ್ಧೆಯಲ್ಲಿ ಬೆಳಗಾವಿಯ ಯುವ ಈಜುಪಟು ಸ್ವಾತಿಕ್ ಪಾಟೀಲ್ (Satvik Patil) ಕಂಚಿನ ಪದಕ ಗೆಲ್ಲುವ ಮೂಲಕ ಇಡೀ ಕರ್ನಾಟಕ(Karnataka) ಹೆಮ್ಮೆಪಡುವಂತಹ ಐತಿಹಾಸಿಕ ಸಾಧನೆ ಮಾಡಿದ್ದಾರೆ.
ಬೆಳಗಾವಿ(Belagavi) ತಾಲೂಕಿನ ಮುತಗಾ ಗ್ರಾಮದ ಪ್ರತಿಭೆಯಾಗಿರುವ ಸ್ವಾತಿಕ್, 100 ಮೀಟರ್ ಈಜು ಸ್ಪರ್ಧೆಯಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಕೇವಲ 1 ನಿಮಿಷ 13.77 ಸೆಕೆಂಡುಗಳಲ್ಲಿ ನಿಗದಿತ ಗುರಿಯನ್ನು ತಲುಪಿ ಮೂರನೇ ಸ್ಥಾನ ಪಡೆಯುವ ಮೂಲಕ ಕಂಚಿನ ಪದಕಕ್ಕೆ ಕೊರಳೊಡ್ಡಿದರು. ಆ ಮೂಲಕ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ ಹಾಗೂ ಕರ್ನಾಟಕದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿದಿದ್ದಾರೆ. ಇದನ್ನೂ ಓದಿ: Asian Para Games: ಆರ್ಚರಿಯಲ್ಲಿ 2ನೇ ಚಿನ್ನ ಗೆದ್ದ ಶೀತಲ್ ದೇವಿ
🥉BRONZE FOR SWATIK PATIL! 🇮🇳
Swatik Patil clinches Bronze in the Men’s 100m Breaststroke SB9 event at #APG2026!
Another medal for India in the pool! 🇮🇳
#AsianParaGames #IndiaAtAsianParaGames #Cheer4Bharat #APG2026 https://t.co/3oCjmX7tpA
— All India Radio News (@airnewsalerts) October 22, 2026
ವೃತ್ತಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ಸ್ವಾತಿಕ್, ತಮ್ಮ ವೃತ್ತಿ ಬದುಕಿನ ಒತ್ತಡದ ನಡುವೆಯೂ ಈಜು ಕ್ರೀಡೆಯನ್ನು ನಿರಂತರವಾಗಿ ಅಭ್ಯಾಸ ಮಾಡಿಕೊಂಡು ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಸಾಧನೆ ತೋರಿರುವುದು ಯುವಜನತೆಗೆ ಮಾದರಿಯಾಗಿದೆ. ಬೆಳಗಾವಿ ಕುವರನ ಈ ಐತಿಹಾಸಿಕ ಪದಕ ಬೇಟೆಗೆ ಕ್ರೀಡಾಭಿಮಾನಿಗಳು ಹಾಗೂ ಗಣ್ಯರಿಂದ ವ್ಯಾಪಕ ಮೆಚ್ಚುಗೆ ಮತ್ತು ಅಭಿನಂದನೆಗಳು ವ್ಯಕ್ತವಾಗಿವೆ.
