ಮುಂಬೈ: ಬಾಲಿವುಡ್ ನಟ ಟೈಗರ್ ಶ್ರಾಫ್ (Tiger Shroff) ಕಾರಿನ ಮೇಲೆ ಶೂಟೌಟ್ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ತನಿಖೆ ವೇಳೆ ಅಸಲಿ ಸತ್ಯವೊಂದು ಬಯಲಾಗಿದೆ. ಮುಂಬೈ (Mumbai) ಬಳಿ ಶೂಟಿಂಗ್ ಪ್ರ್ಯಾಕ್ಟೀಸ್ ಮಾಡುವಾಗ ಮಿಸ್ ಫೈರ್ ಆಗಿತ್ತು ಎನ್ನುವುದು ಹೊರಬಿದ್ದಿದೆ.
ಮೂಲಗಳ ಪ್ರಕಾರ, ಆರೋಪಿಗಳು ಮುಂಬೈ ಸಮೀಪದ ಸ್ಥಳವೊಂದರಲ್ಲಿ ಆರೋಪಿಗಳು ಶೂಟಿಂಗ್ ಅಭ್ಯಾಸ ಮಾಡಿದ್ದರು. ಗನ್ ಸರಿಯಾಗಿ ಕೆಲಸ ಮಾಡುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಆರೋಪಿಗಳು ಈ ಅಭ್ಯಾಸ ನಡೆಸಿದ್ದರು. ಈ ವೇಳೆ ಒಬ್ಬ ಆರೋಪಿ ಎರಡು ಸುತ್ತು ಗುಂಡು ಹಾರಿಸಿದರೆ, ಮತ್ತೊಬ್ಬ ಆರೋಪಿ ಒಂದೇ ಒಂದು ಗುಂಡು ಹಾರಿಸಿ ಗನ್ ಪರೀಕ್ಷೆ ಮಾಡಿದ್ದ. ಅದರಂತೆ ಅಭ್ಯಾಸದ ಸಮಯದಲ್ಲಿ ಇಬ್ಬರೂ ಆರೋಪಿಗಳು ಗನ್ ಹಾರಿಸುವಲ್ಲಿ ಯಶಸ್ವಿಯಾಗಿದ್ದರು ಎಂದು ವರದಿಯಾಗಿದೆ. ಇದನ್ನೂ ಓದಿ: ಟೈಗರ್ ಶ್ರಾಫ್ ಕಾರಿನ ಮೇಲೆ ಗುಂಡಿನ ದಾಳಿ ಕೇಸ್ – ವಡೋದರಾದಲ್ಲಿ ಮತೋರ್ವ ಆರೋಪಿ ಅರೆಸ್ಟ್
ಆನಂತರ ಅವರು ತಂಗಿದ್ದ ಅಂಧೇರಿಯ ಹೋಟೆಲ್ನಲ್ಲಿ ಗನ್ ಪರೀಕ್ಷಿಸುತ್ತಿದ್ದಾಗ ಮಿಸ್ಫೈರ್ ಆಗಿದೆ. ಆಗ ಗುಂಡು ಹಾಸಿಗೆಗೆ ತಗುಲಿತ್ತು. ಆದರೆ ಹೋಟೆಲ್ ಕೋಣೆಯಲ್ಲಿ ಗುಂಡು ಹಾರಿಸಲಾಗಿದೆ ಎಂದು ಯಾರಿಗೂ ಸಂಶಯ ಬಂದಿರಲಿಲ್ಲ ಎಂದು ತಿಳಿದುಬಂದಿದೆ.
ತನಿಖಾಧಿಕಾರಿಗಳ ಪ್ರಕಾರ, ಮೂವರು ಆರೋಪಿಗಳು ಅಕ್ಟೋಬರ್ 11 ರಂದು ಜುಹು ಫುಟ್ಬಾಲ್ ಮೈದಾನಕ್ಕೆ ತೆರಳಿದ್ದರು ಎಂದು ಆರೋಪಿಸಲಾಗಿದ್ದು, ಆದರೆ ನಟ ಬಾರದೇ ಇದ್ದುದರಿಂದ ತಮ್ಮ ಯೋಜನೆಯನ್ನು ಕೈಬಿಟ್ಟಿದ್ದರು. ಬಳಿಕ ಅವರು ಅಕ್ಟೋಬರ್ 18ರಂದು ಮತ್ತೆ ಮೈದಾನಕ್ಕೆ ಬಂದಿದ್ದರು. ಆವರಣದಿಂದ ನಟ ಟೈಗರ್ ಬಿಎಂಡಬ್ಲ್ಯುನಲ್ಲಿ ಹೊರಬರುತ್ತಿದ್ದಂತೆ ಕಾರಿನ ಮೇಲೆ ಗುಂಡಿನ ದಾಳಿ ನಡೆಸಿದ್ದರು.
ಪ್ರಾಥಮಿಕ ತನಿಖೆ ಪ್ರಕಾರ, ವಿಚಾರಣೆ ವೇಳೆ ಆರೋಪಿಗಳು ಪೊಲೀಸರ ಮುಂದೆ ಈ ಹೇಳಿಕೆಗಳನ್ನು ನೀಡಿದ್ದಾರೆ.ಇದನ್ನೂ ಓದಿ: ಟೈಗರ್ ಶ್ರಾಫ್ ಕಾರಿನ ಮೇಲೆ ಶೂಟೌಟ್ ಬಳಿಕ ಬಾಲಿವುಡ್ ನಟರ ನಿವಾಸಗಳಿಗಿದ್ದ ಭದ್ರತೆ ಹೆಚ್ಚಳ
